

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಅಮ್ಮತಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಭಾನುವಾರ ತೋಕ್ ನಮ್ಮೆ ಪ್ರಯುಕ್ತ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಅಮ್ಮತ್ತಿ ಪ್ರೌಢಶಾಲಾ ಮೈದಾನದಲ್ಲಿ ನಡೆಯಿತು.
0.22 ಏರ್ ರೈಫಲ್, 12 ಗೇಜ್, 0.22 ರೈಫಲ್ ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ನೂರಾರು ಸ್ಪರ್ಧಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಏರ್ ರೈಫಲ್ ವಿಭಾಗದಲ್ಲಿ ಅಂದಗೊವೆ ನಿವಾ ಕೇಚಿರ ಶಬ್ದ್ ಬೆಳ್ಳಿಯಪ್ಪ ಪ್ರಥಮ, ಚೆಟ್ಟಳ್ಳಿಯ ಪುತ್ತರಿರ ಕಾರ್ತಿಕ್ ದ್ವಿತೀಯ ಹಾಗೂ ಸಿದ್ದಾಪುರದ ಪಟ್ಟಡ ಬೋಪಣ್ಣ ತೃತೀಯ ಸ್ಥಾನ ಪಡೆದರು. 12 ಬೋರ್ ವಿಭಾಗದಲ್ಲಿ ಶರೀನ್ ಗಣಪತಿ ಪ್ರಥಮ, ನಾಪಂಡ ಕಿರಣ್ ಪೊನ್ನಪ್ಪ ದ್ವಿತೀಯ, ಅರಂಬೂರ್ ರಾಹುಲ್ ತೃತೀಯ ಸ್ಥಾನ ಪಡೆದರು. 0.22 ವಿಭಾಗದಲ್ಲಿ ಪುತ್ತರಿರ ನಂಜಪ್ಪ ಪ್ರಥಮ, ಶಾಜಿ ಮ್ಯಾಥ್ಯೂ ದ್ವಿತೀಯ, ಕಳ್ಳಿಚಂಡ ವರುಣ್ ತೃತೀಯ ಸ್ಥಾನ ಪಡೆದರು.
ಬಹುಮಾನವನ್ನು ಪುಗ್ಗೆರ ದಿನೇಶ್ ದೇವಯ್ಯ, ನೆಲ್ಲಮಕ್ಕಡ ಸ್ಯಾಂಕಿ ಪೂವಣ್ಣ, ಅಚಿಯಂಡ ಮದನ್ ಚೆಂಗಪ್ಪ, ಚೋವಂಡ ಅಭಿನ್ ಮಂದಣ್ಣ, ನೆಲ್ಲಮಕ್ಕಡ ಶರತ್ ಸೋಮಣ್ಣ ಪ್ರಾಯೋಜಿಸಿದ್ದರು. ಅಮ್ಮತಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಅಲ್ಲಾರಂಡ ದೀಪಕ್ ಅಪ್ಪಯ್ಯ, ಕಾರ್ಯದರ್ಶಿ ಬೊಮ್ಮಂಡ ಚಕ್ರವರ್ತಿ ಪೊನ್ನಣ್ಣ, ನಿರ್ದೇಶಕರಾದ ಕಂಬೆಯಂಡ ಭೋಜಣ್ಣ, ಮಂಡೇಪಂಡ ಗಣಪತಿ, ಕುಟ್ಟಂಡ ಪೂಣಚ್ಚ, ಉದ್ದಪಂಡ ಭವಿಷ್ ಮತ್ತಿತರರು ಹಾಜರಿದ್ದರು.