ನನ್ನ ಬಳಿ ಕಾರಿಲ್ಲ; ಲಿಫ್ಟ್​​ ಕೇಳಿದ್ದ ರತನ್​ ಟಾಟಾರನ್ನು ನೆನೆದ ಬಿಗ್​ಬಿ Amitabh Bachchan

Untitled design - 2024-10-29T160626.221
Published on

ಮುಂಬೈ: ಭಾರತದಲ್ಲಿ ಮಾತ್ರವಲ್ಲ ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿರುವ, ತಮ್ಮ ಕೆಲಸದಲ್ಲಿ ಸದಾ ಬಿಸಿಯಾಗಿದರುವ ಬಾಲಿವುಡ್​​ನ ಆ್ಯಂಗ್ರಿ ಯಂಗ್​ಮ್ಯಾನ್ ಅಮಿತಾಭ್​ ಬಚ್ಚನ್(Amitabh Bachchan) ಅವರು ಖಾಸಗಿ ವಾಹಿನಿಯಲ್ಲಿ ಕಾರ್ಯಕ್ರಮವೊಂದನ್ನು ನಿರೂಪಣೆ ಮಾಡುತ್ತಿರುವುದು ಗೊತ್ತೆ ಇದೆ. ಆ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಬೊಮನ್ ಇರಾನಿ ಮತ್ತು ಫರಾ ಖಾನ್ ಭಾಗವಹಿಸಿದ್ದರು. ಅವರೊಂದಿಗೆ ಮಾತನಾಡುತ್ತಿರುವಾಗ ಬಿಗ್​ ಬಿ ಅಮಿತಾಭ್​ ಅವರು ದಿವಂಗತ ರತನ್ ಟಾಟಾ ಅವರನ್ನು ನೆನಪಿಸಿಕೊಂಡರು.

ಕಾರ್ಯಕ್ರಮದಲ್ಲಿ ರತನ್ ಟಾಟಾ ಅವರೊಂದಿಗೆ ಕಳೆದ ಕ್ಷಣವನ್ನು ನೆನಪಿಸಿಕೊಳ್ಳುತ್ತಾ, ಬಿಗ್​ ಬಿ ಅಮಿತಾಭ್​​, ಇಷ್ಟು ದೊಡ್ಡ ಉದ್ಯಮಿಯಾದ ನಂತರವೂ ತಮ್ಮ ಸ್ನೇಹಿತರೊಬ್ಬರ ಬಳಿ ರತನ್​ ಟಾಟಾ ಲಿಫ್ಟ್ ಕೇಳಿದ್ದರು ಎಂದು ​ ನಡೆದ ಘಟನೆಯನ್ನು ಹಂಚಿಕೊಂಡರು.

ವಾಸ್ತವವಾಗಿ, ಅವರ ಸ್ನೇಹಿತರೊಬ್ಬರು ಅಮಿತಾಭ್​​ ಬಚ್ಚನ್ ಅವರೊಂದಿಗೆ ರತನ್ ಟಾಟಾ ಅವರಿದ್ದ ಕಾರ್ಯಕ್ರಮಕ್ಕೆ ಹೋಗಿದ್ದರು. ರತನ್ ಟಾಟಾ ಅವರು ಅಮಿತಾಭ್​​​ ಬಚ್ಚನ್ ಅವರ ಸ್ನೇಹಿತರಿಗೆ ಲಿಫ್ಟ್ ಕೇಳಿದ್ದರು. ನೀವು ನನ್ನನ್ನು ಮನೆಗೆ ಡ್ರಾಪ್ ಮಾಡಬಹುದೇ? ನಾನು ನಿಮ್ಮ ಮನೆಯ ಹಿಂದೆ ವಾಸಿಸುತ್ತಿದ್ದೇನೆ ಎಂದು ರತನ್​ ಟಾಟಾ ಕೇಳಿದ್ದರು. ಬಿಗ್ ಬಿ ತಮ್ಮ ಆಶ್ಚರ್ಯವನ್ನು ವ್ಯಕ್ತಪಡಿಸಿ, ರತನ್ ಟಾಟಾ ಅವರು ನನ್ನ ಬಳಿ ಕಾರಿಲ್ಲ ಎಂದು ಹೇಳುತ್ತಿದ್ದಾರೆ, ನೀವು ಅದನ್ನು ಊಹಿಸಬಹುದೇ? ಇದು ನಂಬಲಸಾಧ್ಯವಾಗಿದೆ ಎಂದು ಹೇಳಿದರು.

ಟಾಟಾ ಗ್ರೂಪ್ ದೇಶದಲ್ಲಿ ಮಾತ್ರವಲ್ಲದೆ ಇಡೀ ಪ್ರಪಂಚದ ಪ್ರತಿಯೊಂದು ಕ್ಷೇತ್ರದಲ್ಲೂ ವಿಶಿಷ್ಟವಾದ ಛಾಪು ಮೂಡಿಸಿದೆ. ಎರಡು ದಶಕಗಳ ಕಾಲ ಟಾಟಾ ಸಮೂಹವನ್ನು ಮುನ್ನಡೆಸಿ ರತನ್ ಟಾಟಾ ಎಷ್ಟು ಶ್ರೀಮಂತರಾಗಿದ್ದರೋ ಅವರ ಜೀವನವೂ ಅಷ್ಟೇ ಸರಳವಾಗಿತ್ತು ಎಂಬುದಕ್ಕೆ ಇದೊಂದು ನಿದರ್ಶನ. ಕುತೂಹಲಕಾರಿ ವಿಚಾರ ಎಂದರೆ ರತನ್ ಟಾಟಾ ಮತ್ತು ಅಮಿತಾಭ್ ಬಚ್ಚನ್ ಈ ಹಿಂದೆ ಒಟ್ಟಾಗಿ ಕೆಲಸ ಮಾಡಿದ್ದಾರೆ. ಅದೇಗೆ ಎಂದರೆ ಟಾಟಾ ಅವರ ನಿರ್ಮಾಣ ಸಂಸ್ಥೆ ಟಾಟಾ ಇನ್ಫೋಮೀಡಿಯಾ ಲಿಮಿಟೆಡ್ ಅಮಿತಾಭ್​ ಬಚ್ಚನ್​​ ಅಭಿನಯಿಸಿದ್ದ ಏತ್ಬಾರ್​ ಚಿತ್ರದಲ್ಲಿ ಹಣ ಹೂಡಿಕೆ ಮಾಡಿತ್ತು. ದುರದೃಷ್ಟವಶಾತ್, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಅಷ್ಟಾಗಿ ಸೌಂಡ್​​ ಮಾಡಲಿಲ್ಲ. ವರದಿಯ ಪ್ರಕಾರ, ಟಾಟಾ ಗ್ರೂಪ್ ಪ್ರಾಜೆಕ್ಟ್‌ನಲ್ಲಿ ಸರಿಸುಮಾರು 3.5 ಕೋಟಿ ರೂಪಾಯಿಗಳ ನಷ್ಟವನ್ನು ಅನುಭವಿಸಿತು, ಇದು ರತನ್​ ಟಾಟಾ ಅವರಿಗೆ ಚಲನಚಿತ್ರ ವ್ಯವಹಾರದಿಂದ ಹೋಗುವ ನಿರ್ಧಾರವನ್ನು ಪ್ರೇರೇಪಿಸಿತು ಎನ್ನಲಾಗಿದೆ.

ಅಮಿತಾಭ್​ ಬಚ್ಚನ್​​ ವೆಟ್ಟೈಯಾನ್​ನಲ್ಲಿ ತಮಿಳು ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡರು. ಈ ಸಿನಿಮಾದಲ್ಲಿ ತಲೈವಾ ರಜನಿಕಾಂತ್, ಮಂಜು ವಾರಿಯರ್, ರಿತಿಕಾ ಸಿಂಗ್, ದುಶ್ರಾ ವಿಜಯನ್, ರಾಣಾ ದಗ್ಗುಬಾಟಿ ಮತ್ತು ಫಹದ್ ಫಾಸಿಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net