Amitabh Bachchan | ಲಾಲ್‌ಬಾಗ್ಚಾ ರಾಜಾಗೆ 11 ಲಕ್ಷ ರೂಪಾಯಿ ದೇಣಿಗೆ ನೀಡಿದ ಅಮಿತಾಬ್​ ಬಚ್ಚನ್; ಕಾಣಿಕೆಯನ್ನು ಈ ಕಾರ್ಯಕ್ಕೆ ನೀಡಬಹುದಿತ್ತಲ್ಲ ಎಂದ ನೆಟ್ಟಿಗರು!​​​

Amitabh Bachchan donates Rs 11 lakh to Lalbaugcha Raja
Published on

Amitabh Bachchan: ಅಮಿತಾಬ್ ಬಚ್ಚನ್ ಪ್ರತಿವರ್ಷ ಮುಂಬೈನ ಪ್ರಸಿದ್ಧ ಲಾಲ್‌ಬಾಗ್ಚಾ ರಾಜಾಗೆ ಭೇಟಿ ನೀಡುತ್ತಾರೆ. ಅದೇ ರೀತಿ ಈ ಬಾರಿಯೂ ತಮ್ಮ ಕುಟುಂಬದೊಂದಿಗೆ ಲಾಲ್‌ಬಾಗ್ ಗಣಪತಿ ದರ್ಶನ ಪಡೆದು, ಅವರ ಪ್ರತಿನಿಧಿಯ ಮೂಲಕ ಸಮಿತಿಗೆ 11 ಲಕ್ಷ ರೂ.ಗಳನ್ನು ಕಾಣಿಕೆಯಾಗಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

ವೈರಲ್ ಭಯಾನಿ ಎಂಬ ಇನ್‌ಸ್ಟಾಗ್ರಾಮ್‌ನಲ್ಲಿ ಖಾತೆಯ ಮೂಲಕ ಈ ವಿಷಯ ಬಹಿರಂಗಗೊಂಡಿದ್ದು, ಲಾಲ್‌ಬೌಗ್ಚಾ ರಾಜಾ ಕಾರ್ಯದರ್ಶಿ ಸುಧೀರ್ ಸಾಲ್ವಿ ಮೆಗಾ ಗಣೇಶ ವಿಗ್ರಹದ ಬಳಿ ಚೆಕ್ ಹಿಡಿದಿರುವ ವಿಡಿಯೋ ಸದ್ಯ ವೈರಲ್ ಆಗಿದೆ.

ವಿಡಿಯೋ ಶೀರ್ಷಿಕೆ

ಅಮಿತಾಬ್ ಬಚ್ಚನ್ ಜಿ ಅವರು ಲಾಲ್‌ಬೌಗ್ಚಾ ರಾಜಾಗೆ ಉದಾರವಾಗಿ 11 ಲಕ್ಷ ರೂ.ಗಳನ್ನು ದೇಣಿಗೆ ನೀಡಿದರು, ಇದನ್ನು ಕಾರ್ಯದರ್ಶಿ ಸುಧೀರ್ ಸಾಲ್ವಿ ಜಿ ಸ್ವೀಕರಿಸಿದರು.

ಮಿಶ್ರಪ್ರತಿಕ್ರಿಯೆ ವ್ಯಕ್ತಪಡಿಸಿದ ನೆಟ್ಟಿಗರು

ಅಮಿತಾಬ್​​ ಬಚ್ಚನ್​ರ ಈ ಕಾರ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಬಿಗ್​ಬಿ ಔದಾರ್ಯ ಮತ್ತು ನಂಬಿಕೆಯನ್ನು ಹಲವರು ಶ್ಲಾಘಿಸಿದರೆ, ಆ ದೇಣಿಗೆಯನ್ನು ಪಂಜಾಬ್​ ಪ್ರವಾಹಕ್ಕೆ ತುತ್ತಾಗಿರುವವರ ಪರಿಹಾರಕ್ಕೆ ಏಕೆ ನೀಡಲಿಲ್ಲ ಎಂದು ಕೆಲವರು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು, ಸೆಲೆಬ್ರಿಟಿಗಳು ಧಾರ್ಮಿಕ ಕಾರಣಗಳಿಗಾಗಿ ದೇಣಿಗೆ ನೀಡಲು ಬೇಗನೆ ಹೋಗುತ್ತಾರೆ ಆದರೆ ವಿಪತ್ತಿನ ಸಮಯದಲ್ಲಿ ಸಹಾಯ ಮಾಡಲು ಮುಂದೆ ಬರುವುದು ತುಂಬಾ ಕಡಿಮೆ ಎಂದಿದ್ದಾರೆ.

ಅಮಿತಾಬ್​​ ಹೊರತುಪಡಿಸಿ, ಶಿಲ್ಪಾ ಶೆಟ್ಟಿ, ಮಲೈಕಾ ಅರೋರಾ, ಜಾನ್ವಿ ಕಪೂರ್, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಇತರ ನಟ ನಟಿಯರು ಲಾಲ್​ಬಾಗ್​​ ರಾಜಾಗೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು.

ಲಾಲ್​ಬಾಗ್​​ ರಾಜಾ ಇತಿಹಾಸ

1934 ರಲ್ಲಿ ಸ್ಥಾಪನೆಯಾಗಿರುವ ಲಾಲ್‌ಬಾಗ್​​ ರಾಜಾ ಸಾರ್ವಜನಿಕ ಗಣೇಶೋತ್ಸವ ಮಂಡಲವು ಮುಂಬೈನಲ್ಲಿ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಹೆಗ್ಗುರುತಾಗಿ ಬೆಳೆದಿದೆ, ಇಲ್ಲಿನ ಗಣಪತಿಯ ಆಶೀರ್ವಾದ ಪಡೆಯಲು ರಾಜಕಾರಣಿಗಳು, ಉದ್ಯಮಿಗಳು, ನಟ ನಟಿಯರು ಸೇರಿದಂತೆ ಅನೇಕ ಗಣ್ಯರು ಆಗಮಿಸುತ್ತಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net