

ತಿರುಪತಿ: ಶಿಕ್ಷಣ ಸಂಸ್ಥೆಯೊಂದು ನಿನ್ನೆ (ಸೆ.04) ಟಿಟಿಡಿಯ ಶ್ರೀ ವೆಂಕಟೇಶ್ವರ ಪ್ರಾಣದಾನ ಟ್ರಸ್ಟ್‌ಗೆ 1.11 ಕೋಟಿ ರೂ.ಗಳನ್ನು ದೇಣಿಗೆ ನೀಡಿದೆ ಎಂದು ದೇವಾಲಯ ಸಂಸ್ಥೆ ಮಾಹಿತಿ ನೀಡಿದೆ.
ಉದ್ಯಮಿ ಬಿ.ರವಿ ಕುಮಾರ್ ಎಂಬುವವರು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಅಧ್ಯಕ್ಷ ಬಿ.ಆರ್. ನಾಯ್ಡು ಅವರಿಗೆ ತಿರುಮಲದಲ್ಲಿರುವ ತಮ್ಮ ಶಿಬಿರ ಕಚೇರಿಯಲ್ಲಿ ಡಿಮ್ಯಾಂಡ್ ಡ್ರಾಫ್ಟ್ ಅನ್ನು ಹಸ್ತಾಂತರಿಸಿದ್ದಾರೆ. ವಿಶ್ವದ ಅತ್ಯಂತ ಶ್ರೀಮಂತ ಹಿಂದೂ ದೇವಾಲಯವಾದ ತಿರುಪತಿಯಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯವನ್ನು ಟಿಟಿಡಿ ನಿರ್ವಹಿಸುತ್ತದೆ. ಇನ್ನೂ ಕುಮಾರ್ ಅವರು ಟಿಟಿಡಿಯ ಎಸ್‌ವಿ ಪ್ರಾಣದಾನ ಟ್ರಸ್ಟ್‌ಗೆ ಸಂಸ್ಥೆಯ ಪರವಾಗಿ 1.11 ಕೋಟಿ ರೂ.ಗಳನ್ನು ದೇಣಿಗೆ ನೀಡಿದ್ದಾರೆ ಎಂದು ಟಿಟಿಡಿಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
(ಏಜೆನ್ಸೀಸ್)
ಎಸ್‌ವಿ ಪ್ರಾಣದಾನ ಟ್ರಸ್ಟ್ ಹೃದಯ, ಮೆದುಳು, ಕ್ಯಾನ್ಸರ್ ಮತ್ತು ಇತರ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ನೀಡುತ್ತದೆ. ಜೊತೆಗೆ ಮೂತ್ರಪಿಂಡ ವೈಫಲ್ಯ, ಹಿಮೋಫಿಲಿಯಾ, ಥಲಸ್ಸೇಮಿಯಾ ಮತ್ತು ಇತರ ಕಾಯಿಲೆಗಳ ಚಿಕಿತ್ಸೆಗಾಗಿ ಸಂಶೋಧನೆ ನಡೆಸುವವರಿಗೆ ಹಣಕಾಸು ನೆರವನ್ನೂ ಸಹ ಒದಗಿಸುತ್ತಿದೆ.