ಎವರ್​ಗ್ರೀನ್​ ಹೀರೋ ಬಿಗ್​ ಬಿ ಅಮಿತಾಬ್​ಗೆ ಇಂದು 81ರ ಸಂಭ್ರಮ…ನಡುರಾತ್ರಿಯಲ್ಲೇ ಅಭಿಮಾನಿಗಳ ಶುಭ ಹಾರೈಕೆ!

biggg b
Published on

ಮುಂಬೈ: ಅಮಿತಾಬ್ ಬಚ್ಚನ್ ತಮ್ಮ 81 ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಮುಂಬೈನಲ್ಲಿರುವ ಅವರ ನಿವಾಸ 'ಜಲ್ಸಾ'ದ ಹೊರಗೆ ಜಮಾಯಿಸಿದ ಅಭಿಮಾನಿಗಳು ನೆಚ್ಚಿನ ನಟನಿಗೆ ಶುಭಾಶಯ ಕೋರಿದರು. ಈ ವೇಳೆ ಅಭಿಮಾನಿಗಳತ್ತ ಕೈ ಬೀಸಿದ ಬಿಗ್​ ಬಿ, ಎಲ್ಲರಿಗೂ ಕೃತಜ್ಞತೆಗಳನ್ನ ಸಲ್ಲಿಸಿದ್ದಾರೆ.

ಬಿಗ್​ ಬಿ ಅಮಿತಾಬ್​​ ತಮ್ಮ ಹುಟ್ಟುಹಬ್ಬದ ಆಚರಣೆಯನ್ನು ತಮ್ಮ ನಿವಾಸ ಜಲ್ಸಾದ ಹೊರಗೆ ಅಭಿಮಾನಿಗಳಿಗೆ ಶುಭ ಕೋರುವ ಮೂಲಕ ಆರಂಭಿಸಿದ್ದಾರೆ. ಜತೆಗೆ ತಮ್ಮ ಹಿತೈಶಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನ ಹೇಳಿದ್ದಾರೆ.

ತಮ್ಮ ನಿವಾಸ ಜಲ್ಸಾದ ಹೊರಗೆ ಸೇರಿದ್ದ ಸಾವಿರಾರು ಅಭಿಮಾನಿಗಳಿಗೆ ದರ್ಶನ ನೀಡಿದ ಅಮಿತಾಬ್​​ ಅವರ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವೀಡಿಯೊದಲ್ಲಿ, ಸೂಪರ್‌ಸ್ಟಾರ್, ಸ್ಟೂಲ್‌ನ ಮೇಲೆ ನಿಂತಿದ್ದು, ತಮ್ಮ ಅಭಿಮಾನಿಗಳನ್ನು ಕೈ ಜೋಡಿಸಿ ಸ್ವಾಗತಿಸುವ ದೃಶ್ಯವನ್ನ ಕಾಣಬಹುದು, ಅಭಿಮಾನಿಗಳತ್ತ ಬಿಗ್​ ಬಿ ಕೈ ಬೀಸುತ್ತಾ ನಿಂತಿದ್ದಾರೆ. ಮನೆಯಿಂದ ಹೊರಗೆ ಬಂದ ತಕ್ಷಣ ಅಭಿಮಾನಿಗಳು ಜೈಕಾರ ಕೂಗಿ ಸ್ವಾಗತಿಸುತ್ತಾರೆ.

ವಿಡಿಯೋದ ಹಿನ್ನಲೆಯಲ್ಲಿ ಐಶ್ವರ್ಯಾ ರೈ ಬಚ್ಚನ್, ಮೊಮ್ಮಗಳು ನವ್ಯಾ ನವೇಲಿ ಮತ್ತು ಆರಾಧ್ಯ ತಮ್ಮ ತಮ್ಮ ಫೋನ್‌ಗಳಲ್ಲಿ ಜನ್ಮದಿನದ ಸುಂದರ ಕ್ಷಣಗಳನ್ನು ಸೆರೆ ಹಿಡಿಯುತ್ತಿರೋದನ್ನ ಕಾಣಬಹುದು. ಬಿಗ್ ಬಿ ಕೊನೆಯದಾಗಿ ಅನುಪಮ್ ಖೇರ್, ಪರಿಣಿತಿ ಚೋಪ್ರಾ ಮತ್ತು ಬೋಮನ್ ಇರಾನಿ ನಟಿಸಿದ ಕೌಟುಂಬಿಕ ಚಿತ್ರ ಉಂಚೈನಲ್ಲಿ ಕಾಣಿಸಿಕೊಂಡರು.

ಬಿಗ್​ ಬಿ ಒಬ್ಬ ನಟ ಅಷ್ಟೇ ಅಲ್ಲ. ಹಲವಾರು ಚಿತ್ರಗಳಿಗೆ ಹಾಡನ್ನೂ ಹಾಡಿ ಗಾಯಕನಾಗಿಯೂ ಸೈ ಎನಿಸಿಕೊಂಡವರು. ಬಿಗ್​​ ಬಿ ಈವರೆಗೂ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ ಅವುಗಳಲ್ಲಿ ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, 1984 ರಲ್ಲಿ ಪದ್ಮಶ್ರೀ, 2021ರಲ್ಲಿ ಪದ್ಮಭೂಷಣ ಮತ್ತು 2015ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನ ಪಡೆದುಕೊಂಡಿದ್ದಾರೆ. 32 ವರ್ಷಗಳ ನಂತರ, ಅಮಿತಾಬ್ ಬಚ್ಚನ್ ತಲೈವರ್ 170 ರಲ್ಲಿ ರಜನಿಕಾಂತ್ ಅವರೊಂದಿಗೆ ಮತ್ತೆ ಒಂದಾಗಲಿದ್ದು, ಟಿಜೆ ಜ್ಞಾನವೇಲ್ ತಲೈವರ್ 170 ಚಿತ್ರವನ್ನ ನಿರ್ದೇಶಿಸಲಿದ್ದಾರೆ.

ಇನ್ನು ಬಿಗ್​​ ಬಿ ಅವರ ಕೆಬಿಸಿ (ಕೋನ್​ ಬನೇಗಾ ಕರೋರ್​ ಪತಿ) ಶೋ ಬಗ್ಗೆ ಎರಡು ಮಾತಿಲ್ಲ ಯಾಕಂದ್ರೆ ಪ್ರತಿಯೊಂದೂ ಸಂಚಿಕೆಯನ್ನ ಬಿಗ್​ ಬಿ ಮತ್ತಷ್ಟು ಇಂಟ್ರೆಸ್ಟಿಂಗ್​​ ಮಾಡುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net