ಟೇಕ್ ಆಫ್ ವೇಳೆ ನಿಯಂತ್ರಣ ಕಳೆದುಕೊಂಡ ಹೆಲಿಕಾಪ್ಟರ್..ಅಮಿತ್ ಶಾ ಪಾರು!

chaper
Published on

ಪಾಟನಾ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೆಲಿಕಾಪ್ಟರ್ ಟೇಕ್ ಆಫ್ ಆಗುವ ವೇಳೆ ಸ್ವಲ್ಪ ಹೊತ್ತಿನಲ್ಲೇ ನಿಯಂತ್ರಣ ಕಳೆದುಕೊಂಡಿದೆ. ಸೋಮವಾರ ಬಿಹಾರದ ಬೇಗುಸರಾಯ್‌ನಿಂದ ಟೇಕಾಫ್ ಆಗುತ್ತಿದ್ದಾಗ ಈ ಘಟನೆ ನಡೆದಿದೆ. ಪೈಲಟ್‌ ರ ಸಮಯೋಚಿತ ತೀರ್ಮಾನದಿಂದ ಭಾರೀ ಅನಾಹುತ ತಪ್ಪಿದೆ. ಅಮಿತ್ ಶಾ ಬಿಹಾರದಲ್ಲಿ ಚುನಾವಣಾ ಪ್ರಚಾರ ಸಭೆಗೆ ಬಂದಿದ್ದರು.

ಘಟನೆಯ ವಿಡಿಯೋ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಲಾಗಿದೆ. ಹೆಲಿಕಾಪ್ಟರ್ ಟೇಕ್ ಆಫ್ ಆಗುತ್ತಿರುವುದನ್ನು ವೀಡಿಯೂ ತೋರಿಸುತ್ತದೆ. ಬಲಕ್ಕೆ ತಿರುಗುತ್ತದೆ ಮತ್ತು ಬಹುತೇಕ ನೆಲವನ್ನು ಸ್ಪರ್ಶಿಸುತ್ತದೆ. ಆದರೆ ಸ್ವಲ್ಪಹೊತ್ತಿನಲ್ಲೇ ಪೈಲಟ್ ನಿಯಂತ್ರಣವನ್ನು ಮರಳಿ ಪಡೆಯುತ್ತಾನೆ.

ಬಿಹಾರದಲ್ಲಿ ಬಿಜೆಪಿ 17 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಎನ್‌ಡಿಎಗೆ ಮರಳಿದ ನಿತೀಶ್ ಕುಮಾ‌ರ್ ಅವರ ಜೆಡಿಯು ಎಲ್ಲಾ 16 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಇತರ ಮಿತ್ರಪಕ್ಷಗಳಾದ ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ ಮತ್ತು ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನ್ ಅವಾಮ್ ಮೋರ್ಚಾ ಕ್ರಮವಾಗಿ 5 ಮತ್ತು 1 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ಇದುವರೆಗೆ ರಾಜ್ಯದ ಒಂಬತ್ತು ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net