ನಾವು ಧರ್ಮದ ಆಧಾರದಲ್ಲಿ ಆಡಳಿತ ನಡೆಸುತ್ತಿಲ್ಲ!

Amit Shah
Published on

ಬೆಂಗಳೂರು: ನಾವು ಧರ್ಮದ ಆಧಾರದಲ್ಲಿ ಆಡಳಿತ ನಡೆಸುತ್ತಿಲ್ಲ. ನಮ್ಮ ಯೋಜನೆಗಳು ಧರ್ಮಾಧಾರಿತ ಅಲ್ಲ. ವಿಕಾಸದ ಹಾದಿಯಲ್ಲಿ ನಾವು ಎಲ್ಲಾ ವರ್ಗದವರನ್ನು ಜತೆಗೆ ಕರೆದೊಯ್ಯುತ್ತಿದ್ದೇವೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಐಡಿಯಾಲಜಿ ಜನತೆಯ ಮುಂದಿದೆ. ಕೇಂದ್ರ, ರಾಜ್ಯ ಸರ್ಕಾರಗಳ ಯೋಜನೆ, ಕಾರ್ಯಕ್ರಮಗಳ ಅಧ್ಯಯನ, ಅಂಕಿ ಅಂಶಗಳ ಅಧ್ಯಯನ ಮಾಡಿಯೇ ಜನ ಯಾರಿಗೆ ಮತ ನೀಡಬೇಕೆಂಬುದನ್ನು ನಿರ್ಧರಿಲಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದ್ದಾರೆ.

ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಷಾ, ಹಲವು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ನಡೆಸುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರದ ಪರಿಸ್ಥಿತಿ‌ ಮತ್ತು ಮುಂಚಿನ ಪರಿಸ್ಥಿತಿಗಳನ್ನು ಗಮನಿಸಿ. ಬಿಜೆಪಿ ಅಧಿಕಾರಕ್ಕೆ ಬರುವ ಮೊದಲ ಅರವತ್ತು ವರ್ಷ ದೇಶದಲ್ಲಿ ಭ್ರಷ್ಟಾಚಾರ ಅಗಾಧ ಇತ್ತು. ಮಂತ್ರಿಗಳೆಲ್ಲ‌ ತಾವೇ ಪ್ರಧಾನಿ ಎಂಬ ಭಾವನೆಯಿಂದ ವರ್ತಿಸುತ್ತಿದ್ದರು. 2014ರ‌ ಬಳಿಕ ದೇಶದ ಚಿತ್ರಣ ಬದಲಾವಣೆಯತ್ತ ಸಾಗಿದ್ದು, ನಂತರದ ಭಾರತವೇ ಬೇರೆ ಎಂದು ಹೇಳಿದರು. ಇದನ್ನೂ ಓದಿ: ಲೇಖಕಿ ವೈದೇಹಿ ಅವರಿಗೆ ‘ನೃಪತುಂಗ ಸಾಹಿತ್ಯ ಪ್ರಶಸ್ತಿ’

ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಈ ದೇಶಕ್ಕೆ ಪಿಡುಗಗುಳಾಗಿದ್ದ ಜಾತಿವಾದ, ಕುಟುಂಬವಾದ, ತುಷ್ಟೀಕರಣವನ್ನು ದೂರ ಮಾಡಿತು. ಜನ ಮೆಚ್ಚುಗೆಯ ಬದಲಾಗಿ ಜನರಿಗಾಗಿ ಮೋದಿ ಅನೇಕ ಯೋಜನೆಗಳನ್ನು ಹೊರ ತಂದರು. ಈ ದೇಶದ 10 ಕೋಟಿ ಮನೆಗಳಲ್ಲಿ ಶೌಚಾಲಯ ಇರಲಿಲ್ಲ. ಆ ಕುಟುಂಬಗಳ ಮಹಿಳೆಯರಿಗೆ ಆಗುತ್ತಿದ್ದ ಹಿಂಸೆ, ಮುಜುಗರದ ಬಗ್ಗೆ ಹೋಚಿಸಿ. ಇಂತಹ ಮನೆಗಳಿಗೆ ಮೋದಿ ಶೌಚಾಲಯ ಕೊಟ್ಟರು. ಗ್ಯಾಸ್, ವಿದ್ಯುತ್ ಒದಗಿಸಿದರು. 80 ಕೋಟಿ ಜನರು ಬಡತನದಲ್ಲಿ ಬೇಯುತ್ತಿದ್ದರು. ಆದರೆ ಇಂದು ಈ ಜನರ ಮನೆಗಳಲ್ಲಿ ನೆಮ್ಮದಿ ಇದೆ ಎಂದರು.

ಉಕ್ರೇನ್​ನಿಂದ 35 ಸಾವಿರ ವಿದ್ಯಾರ್ಥಿಗಳನ್ನು ದೇಶಕ್ಕೆ ಸುರಕ್ಷಿತವಾಗಿ ಕರೆತರಲಾಯ್ತು. ಕಾಶ್ಮೀರಕ್ಕೆ ಈ ವರ್ಷ 1.80 ಲಕ್ಷ ಪ್ರವಾಸಿಗರು ಭೇಟಿ ಕೊಟ್ಟಿದ್ದಾರೆ. ಯಾವುದೇ ಹಿಂಸಾಚಾರ ಆಗಿಲ್ಲ. ಇದು ಇದು ಸಾಧ್ಯವಾಗಿದ್ದು ಮೋದಿಯಿಂದ ಎಂದರು. ಇದನ್ನೂ ಓದಿ: ಜೆಡಿಎಸ್ ಜಿಲ್ಲಾಧ್ಯಕ್ಷರ ಕಾರು ಹಾಗೂ ಟ್ಯಾಂಕರ್ ನಡುವೆ ಅಪಘಾತ; ಮೂವರು ಗಂಭೀರ

ಪಿಎಫ್ಐ ಅಪಾಯಕಾರಿ ಸಂಘಟನೆ ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ನಮ್ಮ ಸರ್ಕಾರ ಪಿಎಫ್ಐ ಸಂಘಟನೆಯನ್ನು ನಿಷೇಧ ಮಾಡಿದೆ. ಮೆಟ್ರೋ, ರಸ್ತೆ, ಹೆದ್ದಾರಿ ಮೂಲಸೌಕರ್ಯ ಅಭಿವೃದ್ಧಿ ಆಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಕಾಶಿ ವಿಶ್ವನಾಥ ದೇಗುಲ, ಸೋಮನಾಥೇಶ್ವರ ದೇಗುಲ ಜೀರ್ಣೋದ್ಧಾರ ಮಾಡಿದ್ದೇವೆ. ಕನ್ನಡ, ತೆಲುಗು, ತಮಿಳು ಎಲ್ಲವೂ ನಮ್ಮ ಭಾಷೆಯಾಗಿದ್ದು, ಮಾತೃಭಾಷೆಯಲ್ಲೇ ಶಿಕ್ಷಣಕ್ಕೆ ಆಧ್ಯತೆ ಕೊಡಲಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net