ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿ ನಡೆದಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದರು ಅಮಿತ್​ ಷಾ...

Amit Shah
Published on

ನವದೆಹಲಿ: ಗೃಹ ಸಚಿವ ಅಮಿತ್​ ಷಾ ಅವರಿಗೆ ಕರೊನಾ ಸೋಂಕು ಇರುವುದು ಇಂದು ದೃಢಪಟ್ಟಿದೆ. ಸಚಿವರು ಟ್ವೀಟ್​ ಮೂಲಕ ತಮಗೆ ಕರೊನಾ ಸೋಂಕು ತಗುಲಿದ್ದನ್ನು ತಿಳಿಸಿದ್ದಾರೆ. ಹಾಗೇ ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದಾಗಿ ಹೇಳಿದ್ದಾರೆ.

ಅಷ್ಟೇ ಅಲ್ಲ, ನನ್ನ ಪ್ರಾಥಮಿಕ ಸಂಪರ್ಕಕ್ಕೆ ಬಂದ ಎಲ್ಲರೂ ಕೂಡಲೇ ಕರೊನಾ ಟೆಸ್ಟ್​ ಮಾಡಿಸಿಕೊಳ್ಳಿ ಎಂದೂ ಷಾ ತಿಳಿಸಿದ್ದಾರೆ.

ಹಾಗೇ ಗೃಹಸಚಿವರು ಗುರ್​ಗಾಂವ್​ನಲ್ಲಿರುವ ಮೇದಾಂತಾ ಆಸ್ಪತ್ರೆಯಲ್ಲಿ ಕರೊನಾಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.

ಅಮಿತ್​ ಷಾ ಅವರು ನಾಲ್ಕು ದಿನಗಳ ಹಿಂದೆಯಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಿವಾಸದಲ್ಲಿ ನಡೆದಿದ್ದ ಸಂಪುಟ ಸಭೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಸಾಮಾಜಿಕ ಅಂತರ ನಿಮಯ ಪಾಲನೆಯಾಗಿತ್ತು. ಹಾಗೇ ಪ್ರತಿಯೊಬ್ಬರೂ ಮಾಸ್ಕ್​ ಧರಿಸಿದ್ದರು ಎಂದು ಮೂಲಗಳು ತಿಳಿಸಿವೆ. ಇದೀಗ ಅಮಿತ್​ ಷಾ ಅವರಿಗೆ ಕರೊನಾ ತಗುಲಿದ್ದರಿಂದ ಸಹಜವಾಗಿಯೇ ಅಂದಿನ ಸಭೆಯಲ್ಲಿ ಉಪಸ್ಥಿತರಿದ್ದ ಪ್ರಧಾನಿ ಹಾಗೂ ಉಳಿದ ಸಚಿವರಿಗೆ ಕರೊನಾತಂಕ ಶುರುವಾಗಿದೆ. ಇದನ್ನೂ ಓದಿ: ಶುರುವಾಗಿದೆ ಬಿಗ್​ಬಾಸ್​ ಶೂಟಿಂಗ್​​; ಸೆಟ್​​ನಲ್ಲಿ ಕೆಲಸ ಮಾಡುವವರು 50 ಮಂದಿ ಮಾತ್ರ !

ಇನ್ನು ಪ್ರಧಾನಿ ಕಚೇರಿಯಲ್ಲಿ ಕರೊನಾ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದಕ್ಕೂ ಮುಖ್ಯವಾಗಿ ಹೆಚ್ಚಿನ ಸಭೆಗಳನ್ನು ವರ್ಚ್ಯುವಲ್ ಆಗಿಯೇ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕರೊನಾ ಪಾಸಿಟಿವ್‌: ಅಮಿತ್‌ ಷಾ ಆಸ್ಪತ್ರೆಗೆ- ಏನು ಹೇಳಿದ್ದಾರೆ ಕೇಳಿ…

ಇದೀಗ ಅಮಿತ್​ ಷಾ ಅವರ ಪ್ರಾಥಮಿಕ ಸಂಪರ್ಕಿತರನ್ನು ಟ್ರೇಸ್​ ಮಾಡುವ ಕಾರ್ಯ ನಡೆಯುತ್ತಿದ್ದು, ಕ್ಯಾಬಿನೆಟ್​ ಸಭೆಯಲ್ಲಿ ಇದ್ದವರನ್ನೆಲ್ಲ ಕೊವಿಡ್​-19 ತಪಾಸಣೆಗೆ ಒಳಪಡಿಸಲಾಗುತ್ತಿದೆಯಾ ಎಂಬ ಬಗ್ಗೆ ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net