

ನವದೆಹಲಿ: ಶಶಿ ತರೂರ್ರನ್ನು ಬಾತ್ರೂಮಿನಲ್ಲಿ ಕೂಡಿ ಹಾಕದೇ ಇದ್ದದ್ದು ಅವರ ಪುಣ್ಯ ಎಂದು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಕಾಂಗ್ರೆಸ್ನ ಕಾಲೆಳೆದಿದ್ದಾರೆ.
'ಶಶಿ ತರೂರ್ ಚುನಾವಣೆಯಲ್ಲಿ, ಸೋತಿದ್ದು ಅಳುಮುಂಜಿ ಆಗಿದ್ದಾರೆ. ಅವರು ಕಾಂಗ್ರೆಸ್ನಿಂದ ನ್ಯಾಯೋಚಿತ ಚುನಾವಣೆಯನ್ನು ನಿರೀಕ್ಷಿಸಬಾರದಿತ್ತು. ಅವರನ್ನು ಬಾತ್ರೂಮಿನಲ್ಲಿ ಕೂಡಿ ಹಾಕದೆ ಇದ್ದದ್ದು ಅವರ ಪುಣ್ಯ.' ಎಂದು ಅಮಿತ್ ಮಾಳವೀಯ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಘೋಷಣೆ ಆದ ಬೆನ್ನಲ್ಲೇ ಅಮಿತ್ ಮಾಳವೀಯ 'ಶಶಿ ತರೂರ್ರಿಗೆ ಇನ್ನು ಕೆಟ್ಟ ದಿನಗಳು ಬರಲಿವೆ. ಗಾಂಧಿಗಳ ವಿರುದ್ಧ ಹೋದದ್ದಕ್ಕೆ ಅವರಿಗೆ ಅವಮಾನ ಮಾಡಲಾಗುವುದು' ಎಂದು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.