

ರಾಣೆಬೆನ್ನೂರ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ ಹಾಗೂ ಸದನದಲ್ಲಿ ಸಚಿವೆ ಲಕ್ಷಿ$್ಮ ಹೆಬ್ಬಾಳ್ಕರ್ ಕುರಿತು ಅಶ್ಲೀಲ ಪದ ಬಳಕೆ ವಿಪ ಸದಸ್ಯ ಸಿ.ಟಿ. ರವಿ ಹೇಳಿಕೆ ಖಂಡಿಸಿ ಕಾಂಗ್ರೆಸ್ ತಾಲೂಕು ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ನೇತೃತ್ವ ವಹಿಸಿದ್ದ ಗ್ರಾಮೀಣ ಟಕದ ಅಧ್ಯಕ್ಷ ಮಂಜನಗೌಡ ಪಾಟೀಲ ಮಾತನಾಡಿ, ದೇಶಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕ ಡಾ. ಬಿ.ಆರ್. ಅಂಬೇಡ್ಕರ್ ಅವರು ಎಲ್ಲ ವರ್ಗದ ಜನರ ಆಶಾಕಿರಣವಾಗಿದ್ದಾರೆ. ಅಂತವರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಗುರವಾಗಿ ಮಾತನಾಡಿದ್ದು ಅಕ್ಷಮ್ಯ ಅಪರಾಧ. ಈ ಕೂಡಲೇ ಅವರು ಕ್ಷಮೆಯಾಚಿಸಬೇಕು. ಜತೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ದೇಶದಲ್ಲಿ ಮಹಿಳೆಯರಿಗೆ ವಿಶೇಷವಾದ ಗೌರವ ಸ್ಥಾನವಿದೆ. ಅದನ್ನು ಮರೆತ ಒಬ್ಬ ಜನಪ್ರತಿನಿಧಿಯಾದ ವ್ಯಕ್ತಿ ಸದನದೊಳಗೆ ನಡೆದುಕೊಂಡ ರೀತಿ ಮಹಿಳಾ ಸಮಾಜ ತಲೆ ತಗ್ಗಿಸುವಂತಾಗಿದೆ. ಇದನ್ನು ಖಂಡಿಸುತ್ತೇವೆ. ಈ ಘಟನೆಯನ್ನು ರಾಜ್ಯಪಾಲರು ಗಂಭೀರವಾಗಿ ಪರಿಗಣಿಸಿ ಸಿ.ಟಿ ರವಿ ಅವರ ವಿಪ ಸದಸ್ಯ ಸ್ಥಾನವನ್ನು ವಜಾಗೊಳಿಸಬೇಕು. ಅವರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಬಂದ ತಹಸೀಲ್ದಾರ್ ಆರ್.ಎಚ್. ಭಾಗವಾನ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ನಗರ ಘಟಕದ ಅಧ್ಯಕ್ಷ ಶೇರುಖಾನ್ ಕಾಬೂಲಿ, ಪ್ರಮುಖರಾದ ಚಂದ್ರಣ್ಣ ಬೇಡರ, ಜಯಶ್ರೀ ಪೀಸೆ, ರವೀಂದ್ರಗೌಡ ಪಾಟೀಲ, ರೇಖಾ ಮಾದಮ್ಮನವರ, ಭಾರತಿ ಸುರವನ್ನಿ, ಚಂದ್ರಕಲಾ ಬ್ರಿಷ್ಟಣ್ಣನವರ, ಬೇಬಕ್ಕ ಮೆಣಸಿನಹಾಳ, ನೂರಜಹಾನ್ ನಂದ್ಯಾಲ, ಸುಜಾತಾ ಬಕರೆಡ್ಡಿ, ಭವ್ಯ ಅರಕೇರಿ, ಪದ್ಮಾ ಹೊಸಮನಿ, ಲಕ್ಷಿ$್ಮ ಕದರಮಂಡಲಗಿ, ಅಂಬಿಕಾ ಶೇಷಗಿರಿ, ಭಾಗ್ಯ ಕಲಾಲ, ರೇಖಾ ಗುಳೇದ ಮತ್ತಿತರರರು ಪಾಲ್ಗೊಂಡಿದ್ದರು.