ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ! ಸಂಘರ್ಷದ ಬೆನ್ನಲ್ಲೇ ಇರಾನ್​ಗೆ ಟ್ರಂಪ್​ ಎಚ್ಚರಿಕೆಯ ಗಂಟೆ | Trump

ವಿಜಯವಾಣಿ (56)
Published on

Trump Warning: ಮಧ್ಯಪ್ರಾಚ್ಯ ದೇಶಗಳಲ್ಲಿ ಸದ್ಯ ಸಂಘರ್ಷದ ಕಾವು ಜೋರಾಗಿದೆ. ಇಸ್ರೇಲ್​ ದಾಳಿಗೆ ಇರಾನ್ ಪ್ರತಿದಾಳಿ ನಡೆಸುತ್ತಿದೆ. ಪ್ರಸ್ತುತ ಎರಡೂ ದೇಶಗಳು ಪ್ರತೀಕಾರದ ಅಲೆಯಲ್ಲಿ ಮುನ್ನುಗ್ಗುತ್ತಿದ್ದು, ಕ್ಷಿಪಣಿ-ಡ್ರೋನ್ ದಾಳಿಗಳನ್ನು ನಿರಂತರವಾಗಿ ನಡೆಸುತ್ತಿವೆ. ಸದ್ಯ ಇರಾನ್​ಗೆ ಕಿವಿಮಾತು ನೀಡಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್​, ಸಂಘರ್ಷ ಕಾಡ್ಗಿಚ್ಚಾಗಿ ಹಬ್ಬುವ ಮೊದಲೇ ಉತ್ತಮ ನಿರ್ಣಯ ತೆಗೆದುಕೊಳ್ಳುವುದು ಉತ್ತಮ ಎಂದಿದ್ದಾರೆ.

ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ತನ್ನ ದೇಶದ ಉನ್ನತ ಅಧಿಕಾರಿಗಳು ಮತ್ತು ನಾಗರಿಕರು ಸೇರಿದಂತೆ ಒಟ್ಟು 224ಕ್ಕೂ ಹೆಚ್ಚು ಜನರನ್ನು ಕಳೆದುಕೊಂಡಿರುವ ಇರಾನ್​, ಇದಕ್ಕೆ ಪ್ರತೀಕಾರವಾಗಿ ಕ್ಷಿಪಣಿ ದಾಳಿ ನಡೆಸಿ, ಇಸ್ರೇನ್​ನ 24ಕ್ಕೂ ಅಧಿಕ ಮಂದಿಯ ಪ್ರಾಣ ಕಸಿದುಕೊಂಡಿದೆ. ಇವರಿಬ್ಬರ ಸಂಘರ್ಷದಲ್ಲಿ ಮುಂದೆ ಸಂಭವಿಸುವ ಭಾರೀ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ಮಧ್ಯೆ ಪ್ರವೇಶಿಸಿರುವ ಟ್ರಂಪ್​, ಎಲ್ಲಾ ಮುಗಿದು ಹೋಗುವ ಮುನ್ನ ಒಪ್ಪಂದದ ಮಾತುಕತೆಗಳನ್ನು ಮಾಡಿಕೊಳ್ಳುವುದು ಒಳಿತು ಎಂದು ಇರಾನ್​ಗೆ ಹೇಳಿದ್ದಾರೆ.

ಕೆನಡಾದ ಕನನಾಸ್ಕಿಸ್‌ನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್​, "ಇಲ್ಲಿ ಇರಾನ್ ಯುದ್ಧವನ್ನು ಗೆಲ್ಲುವ ಮಾತಿಲ್ಲ. ಶೀಘ್ರವೇ ಇಸ್ರೇಲ್​ನೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ಒಳಿತು. ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ. ಶೀಘ್ರವೇ ಮಾತುಕತೆಗೆ ಮುಂದಾಗಲಿ" ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net