Divorce ವದಂತಿ ನಡುವೆಯೇ ಒಟ್ಟಾಗಿ ಫೋಟೋಗೆ ಪೋಸ್​ ನೀಡಿದ ಐಶ್ವರ್ಯಾ-ಅಭಿಷೇಕ್​; ಫೋಟೋ ವೈರಲ್​

Aishwarya Abhishek
Published on

ಮುಂಬೈ: ಮಾಜಿ ವಿಶ್ವ ಸುಂದರಿ, ಬಾಲಿವುಡ್​ ಬ್ಯೂಟಿ ಐಶ್ವರ್ಯಾ ರೈ ಬಚ್ಚನ್​ (Aishwarya Rai Bachchan) ಹಾಗೂ ಅಭೀಷೇಕ್​ ಬಚ್ಚನ್​ ಇತ್ತೀಚಿನ ದಿನಗಳಲ್ಲಿ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಡಿವೋರ್ಸ್ (Divorce)​ ವಿಚಾರವಾಗಿ ಹೆಚ್ಚು ಸುದ್ದಿಯಲ್ಲಿರುವ ಈ ಜೋಡಿಯು ಇದೀಗ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ವಿಚ್ಛೇದನ ವದಂತಿಗೆ ತೆರೆ ಎಳೆದಿದ್ದಾರೆ.

ಕುಟುಂಬದ ಕಾರ್ಯಕ್ರಮದಲ್ಲಿ ದಂಪತಿ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ವಿಚ್ಛೇದನ ವದಂತಿಗೆ ತೆರೆ ಎಳೆದಿದ್ದು, ದಂಪತಿ ಒಟ್ಟಾಗಿ ಫೋಟೋಗೆ ಫೋಸ್​ ನೀಡಿದ್ಧಾರೆ. ಇದರ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಅನಂತ್​ ಅಂಬಾನಿ ಮದುವೆಯಲ್ಲಿ ದಂಪತಿ ಪ್ರತ್ಯೇಕವಾಗಿ ಫೋಟೋಗೆ ಪೋಸ್​ ನೀಡುವ ಮೂಲಕ ವಿಚ್ಛೇದನ ವದಂತಿಗೆ ಇಂಬು ನೀಡಿದ್ದರು. ಆದರೆ, ಆ ಬಳಿಕ ನಡೆದ ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ದಂಪತಿ ವಿಚ್ಛೇದನ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net