ಭಾರೀ ಮಳೆಗೆ ನ್ಯೂಯಾರ್ಕ್​ ತತ್ತರ

flood
ನ್ಯಾಯಾರ್ಕ್ ನಲ್ಲಿ ಪ್ರವಾಹ
Published on

ನ್ಯೂಯಾರ್ಕ್ : ಭಾರೀ ಮಳೆ ಅಮೆರಿಕಾದ ಆರ್ಥಿಕ ರಾಜಧಾನಿ ನ್ಯೂಯಾರ್ಕ್ ನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಪ್ರವಾಹದ ಭೀತಿ ಎದುರಾಗಿದೆ. ಜನರು ಮನೆಗಳಲ್ಲೇ ಉಳಿದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದ್ದು, ಸರ್ಕಾರ ತುರ್ತು ಪರಿಸ್ಥಿತಿ ಪ್ರಕಟಿಸಿದೆ.

ಈಶಾನ್ಯ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಶುಕ್ರವಾರ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಅಲ್ಲಿನ ರಸ್ತೆಗಳು, ಸುರಂಗಮಾರ್ಗಗಳು ಜಲಾವೃತಗೊಳ್ಳುವಂತೆ ಮಾಡಿದೆ. ವಿಮಾನ ನಿಲ್ದಾಣಗಳೂ ಇದಕ್ಕೆ ಹೊರತಾಗಿಲ್ಲ.

ದಾಖಲೆ ಮಳೆ:
ಶುಕ್ರವಾರ ರಾತ್ರಿ ಜಾನ್ ಎಫ್. ಕೆನಡಿ ವಿಮಾನ ನಿಲ್ದಾಣದಲ್ಲಿ 21.97 ಸೆಂ.ಮೀ ಮಳೆ ದಾಖಲಾಗಿದೆ. ಇದು 1960 ರಲ್ಲಿ ಡೊನ್ನಾ ಚಂಡಮಾರುತದ ಸಂದರ್ಭ ಬಿದ್ದ ಮಳೆ ದಾಖಲೆಯನ್ನು ಮೀರಿಸಿದೆ ಎಂದು ರಾಷ್ಟ್ರೀಯ ಹವಾಮಾನ ಇಲಾಖೆ ತಿಳಿಸಿದೆ.

ನ್ಯೂಯಾರ್ಕ್​ನ ಬ್ರೂಕ್ಲಿನ್‌ನಲ್ಲಿ ಸುರಂಗಮಾರ್ಗಗಳು, ರಸ್ತೆಗಳು, ನೆಲಮಾಳಿಗೆಗಳು ಜಲಾವೃತಗೊಂಡಿವೆ. ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ಹಠಾತ್ ಪ್ರವಾಹದಿಂದಾಗಿ ರಸ್ತೆ, ರೈಲು ಮತ್ತು ವಿಮಾನ ಸಂಚಾರ ಸ್ಥಗಿತಗೊಂಡಿದೆ.

ಇದನ್ನೂ ಓದಿ


ತಗ್ಗುಪ್ರದೆಶ ಮತ್ತು ನೆಲಮಾಳಿಗೆಯ ಅಪಾರ್ಟ್‌ಮೆಂಟ್‌ಗಳಲ್ಲಿನ ನಿವಾಸಿಗಳು ಎತ್ತರದ ಜಾಗಕ್ಕೆ ಸ್ಥಳಾಂತರಗೊಳ್ಳಬೇಕು ಅಧಿಕಾರಿಗಳು ಸೂಚಿಸಿದ್ದಾರೆ.
ಬ್ರೂಕ್ಲಿನ್​ ಜತೆಗೆ ಡೌನ್‌ಸ್ಟೇಟ್‌ನಾದ್ಯಂತ ಭಾರೀ ಮಳೆ ಮುಂದುವರಿಯುವ ಸಾಧ್ಯತೆಯಿದೆ ಪರಿಸ್ಥಿತಿ ಬಗ್ಗೆ ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ನ್ಯೂಯಾರ್ಕ್ ಗೌರ್ನರ್ ಕಾಥೀ ಹೊಚುಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.


2021 ರ ಸೆಪ್ಟೆಂಬರ್ ನಲ್ಲಿ, ನ್ಯೂಜೆರ್ಸಿ, ನ್ಯೂಯಾರ್ಕ್, ಪೆನ್ಸಿಲ್ವೇನಿಯಾ ಮತ್ತು ಕನೆಕ್ಟಿಕಟ್‌ನಲ್ಲಿ ಭಾರೀ ಮಳೆಗೆ 40 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದನ್ನು ಸ್ಮರಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net