ಅದಾನಿ ಮಗನ ಮದುವೆಗೆ ಅಮೆರಿಕನ್​ ಪಾಪ್ ಗಾಯಕಿ ಟೇಲರ್​ ಸ್ವಿಫ್ಟ್​: ಭಾರತದಲ್ಲಿ ಇದೇ ಮೊದಲ ಪ್ರದರ್ಶನ! |Taylor Swift

dk (54)
Published on

ಮುಂಬೈ: ಭಾರತದ ಬೃಹತ್​ ಉದ್ಯಮಿ ಗೌತಮ್​​ ಅದಾನಿ ಅವರ ಮಗ ಜೀತ್ ಅವರ​ ವಿವಾಹದ ಪೂರ್ವ ಕಾರ್ಯಕ್ರಮದಲ್ಲಿ ಪಾಪ್​ ಗಾಯಕಿ ಟೇಲರ್​ ಸ್ವಿಫ್ಟ್(Pop singer Taylor Swift) ಭಾಗಿಯಾಗಲಿದ್ದಾರೆ ಎಂದು ವರದಿಯಾಗಿದೆ.

ಜೀತ್​ ಅದಾನಿ ಮತ್ತು ದಿವಾ ಷಾ ಮದುವೆ ಹಿನ್ನೆಲೆ ಪೂರ್ವ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರದರ್ಶನ ನೀಡಲು ಗಾಯಕಿ ಜತೆ ಅದಾನಿ ಮತ್ತು ಟೇಲರ್ ಪರ ತಂಡಗಳು ಮಾತುಕತೆ ನಡೆಸುತ್ತಿದ್ದಾರೆ. ಒಂದು ವೇಳೆ ಗಾಯಕಿ ಟೇಲರ್​ ಸ್ವಿಫ್ಟ್ ಒಪ್ಪಿದರೆ ಭಾರತಕ್ಕೆ ಪಾದರ್ಪಣೆ ಮಾಡುವ ಮೂಲಕ ಮೊದಲ ಪ್ರದರ್ಶನ ನೀಡಲಿದ್ದಾರೆನ ಎಂದು ವರದಿ ಉಲ್ಲೇಖಿಸಿವೆ.

2014ರಲ್ಲಿ ಭಾರತಕ್ಕೆ ಬರುವ ಆಸೆಯನ್ನು ​ಗಾಯಕಿ ಟೇಲರ್​ ಈ ಮುಂಚೆ ವ್ಯಕ್ತಪಡಿಸಿದ್ದರು. ಆದರೆ, ಅನಾನುಕೂಲ ಕಾರಣಗಳಿಂದ ಭಾರತಕ್ಕೆ ಬರಲು ಆಗಲಿಲ್ಲ ಎಂದು ಟೇಲರ್​​ ಆಪ್ತ ಮೂಲಗಳು ತಿಳಿಸಿವೆ. ಅಲ್ಲದೆ, ಸ್ವತ ಟೇಲರ್​​ ಅವರೇ ಇದರ ಬಗ್ಗೆ ಮಾತನಾಡಿದ್ದು, ಭಾರತದ(ಸಂಗೀತ) ಹಾಡುಗಳು ಎಂದರೆ ನನಗೆ ತುಂಬಾ ಇಷ್ಟ. ಪ್ರತಿ ಹಾಡುಗಳು ನನ್ನನ್ನು ರೋಮಾಂಚಗೊಳಿಸುತ್ತವೆ. ನೇರವಾಗಿ ಫ್ಯಾನ್ಸ್​​ಗಳ ಸಂಪರ್ಕವು ಸಿಗಲಿದೆ ಎಂದು ಬಾಲಿವುಡ್​ನಲ್ಲಿ ಕೆಲಸ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದರು.

ಜೀತ್​ ಅದಾನಿ ಮತ್ತು ದಿವಾ ಷಾ ಮದುವೆ ಈ ವರ್ಷದ(2025) ಕೊನೆಯಲ್ಲಿ ಮದುವೆಯಾಲಿದ್ದಾರೆ. ಮದುವೆಯ ಸಿದ್ಧತೆಗಳು ಕೂಡ ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ.(ಏಜೆನ್ಸೀಸ್​)

​https://www.vijayavani.net/virat-is-indias-best-white-ball-player-than-sachin-sourav-ganguly-praises-kohli

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net