ವಸ್ತುಗಳು, ಹಸು, ಎಮ್ಮೆ ಅಲ್ಲ ಇದು ಒಳ ಉಡುಪು ಹರಾಜು! 7 ಲಕ್ಷ ರೂ. ದಾಖಲೆ ಮೊತ್ತಕ್ಕೆ ಸೇಲ್ ಆದ ಅಂಡರ್‌ವೇರ್! Underwear Auctioned Rupees 7 Lakh

Underwear
Published on

Underwear Auctioned Rupees 7 Lakh: ಹರಾಜಿನಲ್ಲಿ ಹಸು, ನಿಂಬೆ ಹಣ್ಣು, ಮದ್ಯ ದುಬಾರಿ ಮೊತ್ತಕ್ಕೆ ಮಾರಾಟವಾದಂತಹ ಸುದ್ದಿಗಳನ್ನು ಕೇಳಿದ್ದೇವೆ. ಆದರೆ ಇಲ್ಲೊಂದು ಅಂಡರ್‌ವೇರ್‌ ಬರೋಬ್ಬರಿ 7 ಲಕ್ಷ ರೂ. ದಾಖಲೆ ಬೆಲೆಗೆ ಸೇಲ್‌ ಆಗಿದೆ.

ಅಮೆರಿಕದಲ್ಲಿ ನಡೆದ ಹರಾಜಿನಲ್ಲಿ ಬರೋಬ್ಬರಿ 7 ಲಕ್ಷ ರೂ. ದಾಖಲೆ ಮೊತ್ತಕ್ಕೆ ಅಂಡರ್‌ವೇರ್‌ ಸೇಲ್‌ ಆಗಿದೆ. ಇಲ್ಲಿ ನಡೆದ ವಿಶಿಷ್ಟ ಹರಾಜಿನಲ್ಲಿ,

ಮಾಜಿ ಅಧ್ಯಕ್ಷ ಜಾನ್ ಎಫ್. ಕೆನಡಿ (ಜೆಎಫ್‌ಕೆ) ಧರಿಸಿದ್ದ ಒಳ ಉಡುಪು 7.5 ಲಕ್ಷ ರೂ.ಗೆ ಮಾರಾಟವಾಗಿದೆ. 1940 ರ ದಶಕದ ಈ ಒಳ ಉಡುಪುಗಳ ಮೇಲೆ ‘Jack’ ಎಂಬ ಕಸೂತಿ ಮಾಡಲಾಗಿತ್ತು. ಹೆಚ್ಚಿನ ಬಿಡ್‌ನಿಂದಾಗಿ ಈ ಹರಾಜು ಚರ್ಚೆಯ ವಿಷಯವಾಗಿತ್ತು.  $9,100 ಡಾಲರ್‌ ಅಂದ್ರೆ ಸುಮಾರು ರೂ. 7.5 ಲಕ್ಷ ರೂ. ಗೆ ಮಾರಾಟವಾಗಿದೆ.

ಈ ಹರಾಜಿನಲ್ಲಿ ಫೇಸ್‌ಬುಕ್‌ ಸಹ-ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ಗೆ ಸೇರಿದ ಹೂಡಿ ಮತ್ತು ಆಪಲ್‌ ಸಹ-ಸಂಸ್ಥಾಪಕ ಸ್ಟೀವ್‌ ಜಾಬ್ಸ್‌ ಅವರ ಬೋ ಟೈಯನ್ನು ಕೂಡಾ ಹರಾಜಿನಲ್ಲಿ ಇಡಲಾಗಿತ್ತು. ಇನ್ನೂ ಮಾರ್ಕ್‌ ಜುಕರ್‌ಬರ್ಗ್‌ ಹೂಡಿ ಬಟ್ಟೆ $15,875 (ಸುಮಾರು 13 ಲಕ್ಷ ರೂ.) ಗೆ ಮಾರಾಟವಾಯಿತು. ಈ ವಿಶಿಷ್ಟ ಹರಾಜಿನ ಸುದ್ದಿ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ.

ಹರಾಜಿನಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಧರಿಸಿದ್ದ ಗಾಲ್ಫ್ ಶೂಗಳು ಮತ್ತು ಬಿಲ್ ಕ್ಲಿಂಟನ್, ಡ್ಯಾನ್ ಅಯ್ಕ್ರಾಯ್ಡ್, ಅಲ್ ಗೋರ್ ಮತ್ತು ಜಿಮ್ ಕಿಟ್​ ಅವರು ಸಹಿ ಮಾಡಿದ ಸನ್​​ಗ್ಲಾಸ್​​ ಕೂಡ ಇತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net