ಟ್ರಂಪ್​ ಹತ್ಯೆಗೆ ಇರಾನ್​ ಸಂಚು..ಯುಎಸ್​ ಗುಪ್ತಚರ ವರದಿ ಹೇಳಿದ್ದೇನು? ವಿವರ ಇಲ್ಲಿದೆ..

Donald Trump
Published on

ವಾಷಿಂಗ್ಟನ್​: ಡೊನಾಲ್ಡ್ ಟ್ರಂಪ್ ಹತ್ಯೆಗೆ ಇರಾನ್ ಸಂಚು ರೂಪಿಸಿತ್ತು ಎಂದು ಅಮೆರಿಕಾ ಭದ್ರತಾ ಅಧಿಕಾರಿಗಳಿಗೆ ಆ ದೇಶದ ಗುಪ್ತಚರ ವರದಿ ತಲುಪಿದೆ.

ಪೆನ್ಸಿಲ್ವೇನಿಯಾದಲ್ಲಿ ಶನಿವಾರ ಟ್ರಂಪ್​ ಮೇಲೆ ಗುಂಡಿನ ದಾಳಿ ನಡೆದಿದ್ದು, ಕೆಲವು ವಾರಗಳ ಮೊದಲು ಸಂಚು ರೂಪಿಸಲಾಗಿತ್ತು. ಇದು ತಿಳಿದ ಕೂಡಲೇ ಅವರಿಗೆ ಭದ್ರತೆಯನ್ನು ಹೆಚ್ಚಿಸಲಾಗಿತ್ತು ಎಂದು ಭದ್ರತಾ ಪಡೆಗಳು ತಿಳಿಸಿವೆ.

ಇನ್ನು ಟ್ರಂಪ್ ಹತ್ಯೆಗೆ ಯತ್ನಿಸಿದ 20 ವರ್ಷದ ಯುವಕನಿಗೂ ಇರಾನ್‌ನ ಪಿತೂರಿಗೂ ಯಾವುದೇ ಸಂಬಂಧವಿಲ್ಲ ಆದರೆ ಟ್ರಂಪ್​ ಟ್ರಂಪ್​ ಅವರಿಗೆ ಜೀವಬೆದರಿಕೆ ಇದ್ದ ಕಾರಣ ಪ್ರಚಾರ ಕಾರ್ಯಕ್ರಮಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಅವರು ಅಧಿಕಾರದಲ್ಲಿದ್ದಾಗ ಇರಾನ್​ ಸುಪ್ರೀಂ ಕಮಾಂಡರ್ ಖಾಸೀಂ ಸುಲೇಮಾನ್​ನನ್ನು ಡ್ರೋನ್ ದಾಳಿಯಲ್ಲಿ ಅಮೆರಿಕ ಕೊಂದಿದ್ದು, ಅಂದಿನಿಂದ ಇರಾನ್‌ನಿಂದ ಬೆದರಿಕೆಗಳು ಬರುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟ್ರಂಪ್​ ಅವರಿಗೆ ಇರುವ ಬೆದರಿಕೆಯ ಕುರಿತು ನಿರಂತರ ಮಾಹಿತಿ ಪಡೆಯುತ್ತಿದ್ದೇವೆ. ಅದಕ್ಕೆ ತಕ್ಕಂತೆ ಭದ್ರತೆ ಹೆಚ್ಚಿಸುತ್ತಿದ್ದೇವೆ. ಅವರಿಗೆ ಇರುವ ಪ್ರತಿ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ. ಎಂದು ಸೇಕ್ರೇಟ್​ ಸರ್ವೀಸಸ್​ ವಕ್ತಾರ ಆಂಟೋನಿ ಗುಗ್ಲಿಯೆಲ್ಮಿ ಹೇಳಿದ್ದಾರೆ.

ಟ್ರಂಪ್ ಸೇರಿದಂತೆ ಯುನೈಟೆಡ್ ಸ್ಟೇಟ್ಸ್‌ನ ಆಡಳಿತಗಾರರಿಗೆ ಇರಾನ್ ಒಡ್ಡುವ ಬೆದರಿಕೆಗಳನ್ನು ಯುಎಸ್ ಭದ್ರತಾ ಅಧಿಕಾರಿಗಳು ಮೇಲ್ವಿಚಾರಣೆ ಮುಂದುವರೆಸಿದ್ದಾರೆ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಅಡ್ರಿಯನ್ ವಾಟ್ಸನ್​ ಬಹಿರಂಗಪಡಿಸಿದ್ದಾರೆ.

ಈ ಸುದ್ದಿಯನ್ನು ಇರಾನ್ ಮಿಷನ್​ ವಿಶ್ವಸಂಸ್ಥೆಯಲ್ಲಿ ತೀವ್ರವಾಗಿ ಖಂಡಿಸಿದೆ. ಅವರು ಆರೋಪಗಳನ್ನು ಸುಳ್ಳು ಮತ್ತು ದುರುದ್ದೇಶಪೂರಿತವೆಂದು ತಳ್ಳಿಹಾಕಿದೆ. ಟ್ರಂಪ್ ಅವರನ್ನು ನ್ಯಾಯಾಲಯದಲ್ಲಿ ಶಿಕ್ಷಿಸಬೇಕಾಗಿದೆ ಎಂದು ಹೇಳಿದೆ.

ಟ್ರಂಪ್​ ಮೇಲೆ ಹತ್ಯೆ ಯತ್ನವಾದ ನಂತರ ಎಕೆ 47 ಹೊಂದಿದ ವ್ಯಕ್ತಿಯೊಬ್ಬನನ್ನು ಭದ್ರತಾ ಪಡೆಗಳು ಬಂಧಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net