ಬಿಹಾರದ ಬೂಟುಗಳಿಗೆ ಬೇಡಿಕೆ..ರಷ್ಯಾ ಸೇನೆಗೆ ಸರಬರಾಜು!

shoos
Published on

ಪಾಟ್ನಾ: ರಷ್ಯಾ ಮತ್ತು ಉಕ್ರೇನ್ ನಡುವೆ ದೀರ್ಘ ಕಾಲದ ಯುದ್ಧ ಮುಂದುವರಿದಿದೆ. ರಷ್ಯಾ ಸೈನಿಕರು ಧರಿಸುವ ಬೂಟುಗಳು ಭಾರತದಲ್ಲಿ ತಯಾರಾದವು ಎಂದು ಬಹುತೇಕ ಜನರಿಗೆ ತಿಳಿದಿರಲಿಕ್ಕಿಲ್ಲ. ಈ ಬೂಟುಗಳನ್ನು ಬಿಹಾರದ ಹಾಜಿಪುರದಲ್ಲಿ ತಯಾರಿಸಲಾಗುತ್ತದೆ.

ರಷ್ಯಾಕ್ಕೆ ಬೂಟುಗಳನ್ನು ರಫ್ತು ಮಾಡುವ ಅತಿದೊಡ್ಡ ಸಂಸ್ಥೆಗಳಲ್ಲಿ ಹಾಜಿಪುರದ ಕಾಂಪಿಟೆನ್ಸ್ ಎಕ್ಸ್‌ಪೋರ್ಟ್ಸ್ ಒಂದಾಗಿದೆ. ಈ ಶೂಗಳ ತೂಕವು ಹಗುರವಾಗಿರುತ್ತದೆ. ಇವುಗಳನ್ನು ಧರಿಸುವುದರಿಂದ ಭಾರ ಎನಿಸುವುದಿಲ್ಲ. ಇವುಗಳಿಗೆ ಬಳಸುವ ಸೋಲ್ ಕೂಡ ವಿಶಿಷ್ಟವಾಗಿದೆ. ಹೀಗಾಗಿ ರಷ್ಯಾದಲ್ಲಿ ಈ ಬೂಟುಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಎನ್ನಲಾಗಿದೆ.

ಕಾಂಪಿಟೆನ್ಸ್ ಎಕ್ಸ್‌ಪೋರ್ಟ್ಸ್ ಕಂಪನಿಯಲ್ಲಿ 300 ಉದ್ಯೋಗಿಗಳಿದ್ದು, ಅವರಲ್ಲಿ ಶೇ.70ರಷ್ಟು ಮಹಿಳೆಯರು ಇದ್ದಾರೆ. ಕಳೆದ ವರ್ಷ ರೂ.100 ಕೋಟಿ ರೂ.ಮೌಲ್ಯದ 1.5 ಮಿಲಿಯನ್ ಜೋಡಿ ಶೂಗಳನ್ನು ರಫ್ತು ಮಾಡಲಾಗಿದೆ. ಮುಂದಿನ ವರ್ಷ ಶೇ.50ರಷ್ಟು ಹೆಚ್ಚಿಸುವ ಉದ್ದೇಶದಿಂದ ಮುನ್ನಡೆಯುತ್ತಿದ್ದೇವೆ ಎಂದು ಸಂಸ್ಥೆ ಮುಖ್ಯಸ್ಥ ಸಾಹಿಬ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net