ನ್ಯೂಡ್​ ಕ್ಲಬ್​ನಲ್ಲೇ ಕರೊನಾ ಲಸಿಕೆ! ವ್ಯಾಕ್ಸಿನ್​ ವಿತರಣೆಗೆ ವಿಶೇಷ ಮಾರ್ಗ ಹುಡುಕಿಕೊಂಡ ಅಮೆರಿಕ

america
Published on

ವಾಷಿಂಗ್ಟನ್: ಕರೊನಾಗೆ ಲಸಿಕೆಯೊಂದೇ ಪರಿಹಾರ. ವಿಶ್ವದ ಪ್ರತಿಯೊಬ್ಬರೂ ಲಸಿಕೆ ಪಡೆದರೆ ಸೋಂಕನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗುತ್ತದೆ. ಹೀಗಿದ್ದರೂ ಜನರು ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ. ಅದೇ ಕಾರಣಕ್ಕೆ ಅಮೆರಿಕದಲ್ಲಿ ವಿವಿಧ ರೀತಿಯ ಪ್ರಯೋಗಗಳನ್ನು ಮಾಡಲಾಗುತ್ತಿದೆ. ಇದೀಗ ನ್ಯೂಡ್ ಕ್ಲಬ್​ ಒಂದನ್ನೇ ಲಸಿಕೆ ಕೇಂದ್ರವನ್ನಾಗಿ ಬದಲಾಯಿಸಿ ಲಸಿಕೆ ವಿತರಿಸಲಾಗುತ್ತಿದೆ.

ಅಮೆರಿಕದ ಲಾಸ್ ಏಂಜಲ್ಸ್​ನಲ್ಲಿ ಇಂತದ್ದೊಂದು ವಿಚಿತ್ರ ಪ್ರಯತ್ನ ನಡೆದಿದೆ. ಸಾಮಾನ್ಯವಾಗಿ ಜನರು ನ್ಯೂಡ್​ ಕ್ಲಬ್​ಗಳಿಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಅದೇ ಕಾರಣಕ್ಕೆ ಆ ಕ್ಲಬ್​ ಅನ್ನೇ ಲಸಿಕಾ ಕೇಂದ್ರವನ್ನಾಗಿಸಲಾಗಿದೆ. ಹಗಲು ಹೊತ್ತಿನಲ್ಲಿ ಅಲ್ಲಿ ಲಸಿಕೆ ನೀಡಿದರೆ, ಸಂಜೆ ಕ್ಲಬ್​ ಎಂದಿನಂತೆ ಕೆಲಸ ಮಾಡುತ್ತದೆ. ಈ ರೀತಿ ಕೇಂದ್ರ ಆರಂಭವಾದಾಗಿನಿಂದ ಪ್ರತಿನಿತ್ಯ ನೂರಾರು ಜನರು ಅಲ್ಲಿ ಲಸಿಕೆ ಪಡೆಯುತ್ತಿರುವುದಾಗಿ ಹೇಳಲಾಗಿದೆ.

ಒಂದು ನ್ಯೂಡ್​ ಕ್ಲಬ್​ ಅನ್ನೇ ಲಸಿಕಾ ಕೇಂದ್ರವಾಗಿಸಲಾಗಿದೆ ಎಂದರೆ ಆ ಲಸಿಕೆಯ ಅವಶ್ಯಕತೆ ಎಷ್ಟಿದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಹಾಗೆಯೇ ಲಸಿಕೆ ವಿತರಣೆಗೆ ಸರ್ಕಾರ ಪಡುತ್ತಿರುವ ಕಷ್ಟವನ್ನೂ ಪ್ರಶಂಶಿಸಬೇಕು. ಅದೇ ಕಾರಣಕ್ಕೆ ನಾನೂ ಕ್ಲಬ್​ಗೆ ತೆರಳಿ ಲಸಿಕೆ ಹಾಕಿಸಿಕೊಂಡು ಬಂದಿದ್ದೇನೆ ಎನ್ನುತ್ತಾರೆ ನ್ಯೂಡ್​ ಕ್ಲಬ್​ನಲ್ಲಿ ಲಸಿಕೆ ಪಡೆದ ವ್ಯಕ್ತಿಯೊಬ್ಬರು.

ಈಗಾಗಲೇ ಅಮೆರಿಕದಲ್ಲಿ ಲಸಿಕೆ ವಿತರಣೆಗಾಗಿ ಅನೇಕ ಪ್ರಯತ್ನಗಳು ನಡೆಯುತ್ತಿವೆ. ಫ್ರೆಂಚ್​ ಫ್ರೈಸ್​, ಬಿಯರ್​, ಗೇಮ್​ಗಳ ಟಿಕೆಟ್​ಗಳು ಹೀಗೇ ನಾನಾ ರೀತಿಯ ಉಡುಗೊರೆ ಕೊಟ್ಟು ಜನರಿಗೆ ಲಸಿಕೆ ನೀಡಲಾಗುತ್ತಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net