ದತ್ತುಪುತ್ರರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸಲಿಂಗಿ ದಂಪತಿಗೆ 100 ವರ್ಷ ಜೈಲು ಶಿಕ್ಷೆ! Gay couple

Gay couple
Published on

Gay couple : ದತ್ತುಪುತ್ರರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸಲಿಂಗಿ ದಂಪತಿಗೆ ಅಮೆರಿಕದ ಜಾರ್ಜಿಯಾ ನ್ಯಾಯಾಲಯ 100 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ಇಬ್ಬರು ಆರೋಪಿಗಳಾದ ವಿಲಿಯಂ ಡೇಲ್ ಜುಲ್ಲಾಕ್ ಮತ್ತು ಜಕಾರಿ ಝುಲ್ಲಾಕ್​ಗೆ ಶಿಕ್ಷೆ ವಿಧಿಸಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ವಿಲಿಯಂಗೆ 34 ವರ್ಷ ಮತ್ತು ಜಕಾರಿಗೆ 36 ವರ್ಷ. ಆರೋಪಿಗಳಿಬ್ಬರು 12 ಮತ್ತು 10 ವರ್ಷ ವಯಸ್ಸಿನ ಇಬ್ಬರು ಸಹೋದರರನ್ನು ದತ್ತು ಪಡೆದಿದ್ದರು.

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ವಿಡಿಯೋವನ್ನು 2022ರಲ್ಲಿ ಗೂಗಲ್​ಗೆ ಅಪ್​ಲೋಡ್​ ಮಾಡಲಾಗಿದೆ ಎಂಬ ಮಾಹಿತಿಯನ್ನು ವಾಲ್ಟನ್ ಕೌಂಟಿ ಪೊಲೀಸರು ಪಡೆದರು. ಬಳಿಕ ತನಿಖೆ ಕೈಗೆತ್ತಿಕೊಂಡ ಪೊಲೀಸರು ಹಂಟರ್ ಲಾಲೆಸ್ ಎಂಬ ವ್ಯಕ್ತಿಯನ್ನು ಬಂಧಿಸಿದರು. ಜಕಾರಿ ಝುಲ್ಲಾಕ್ ಎಂಬಾತ ಆಕ್ಷೇಪಾರ್ಹ ವಿಡಿಯೋ ಕಳುಹಿಸಿದ್ದ ಲಾಲೆಸ್​ ಎಂದು ಹೇಳಿದಾಗ ಅಸಲಿ ವಿಷಯ ಬೆಳಕಿಗೆ ಬಂದಿದೆ.

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಜಕಾರಿ ಜುಲ್ಲಾಕ್ ಮತ್ತು ವಿಲಿಯಂ ಡೇಲ್ ಜುಲ್ಲಾಕ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆಯ ವೇಳೆ, ಇಬ್ಬರೂ ಸಲಿಂಗಕಾಮಿಗಳು ಮತ್ತು ದಂಪತಿಯಾಗಿ ಒಟ್ಟಿಗೆ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ. ಪೊಲೀಸ್ ತನಿಖೆಯಲ್ಲಿ ಆರೋಪಿಗಳಿಬ್ಬರೂ ದತ್ತು ಪಡೆದ ಮಕ್ಕಳ ಮೇಲೆ ಅತ್ಯಾಚಾರವೆಸಗಿರುವುದು ಪತ್ತೆಯಾಗಿದೆ.

ಜಕಾರಿ ಒಮ್ಮೆ ಸ್ನ್ಯಾಪ್‌ಚಾಟ್‌ನಲ್ಲಿ ಮಕ್ಕಳ ಮೇಲಿನ ದೌರ್ಜನ್ಯದ ಫೋಟೋವನ್ನು ಹಂಚಿಕೊಂಡಿದ್ದ. ಅಲ್ಲದೆ, ತಪ್ಪು ಮಾಡಲು ನಾನು ಇಂದು ರಾತ್ರಿ ನನ್ನ ಮಗನ ಜತೆ ಮಲಗುತ್ತೇನೆ ಎಂದು ಬರೆದುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರು ಸಲಿಂಗಿಗಳಿಗೆ 100 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net