

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 11ರಿಂದ 17ರವರೆಗೆ ನಡೆಯಲಿರುವ ‘ಹರ್ ಘರ್ ತಿರಂಗಾ’ ಕಾರ್ಯಕ್ರಮವು ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಲು ಜನರನ್ನು ಪೋ›ತ್ಸಾಹಿಸುವ ಉದ್ದೇಶದಿಂದ ಕೂಡಿದೆ. ಬರುವ ಸ್ವಾತಂತ್ರೊ್ಯೕತ್ಸವದಂದು ಕನಿಷ್ಠ 20 ಕೋಟಿ ಧ್ವಜಗಳು ಹಾರಬೇಕೆಂಬ ನಿರೀಕ್ಷೆ ಸರ್ಕಾರದ್ದಾಗಿದೆ.
ಭಾರತದ ಧ್ವಜ ಸಂಹಿತೆ 2002ರ ಪ್ರಕಾರ ಈ ಮೊದಲು ಕೈಮಗ್ಗ ಮತ್ತು ಕೈಯಿಂದ ನೇಯ್ದ ಖಾದಿಯಿಂದ ಮಾಡಿದ ಬಟ್ಟೆಗಳಿಂದ ಮಾತ್ರ ರಾಷ್ಟ್ರಧ್ವಜಗಳನ್ನು ತಯಾರಿಸಲು ಅನುಮತಿ ಇತ್ತು. 2021ರ ಡಿಸೆಂಬರ್ 30ರಂದು ಈ ಧ್ವಜ ಸಂಹಿತೆಗೆ ತಿದ್ದುಪಡಿ ತರಲಾಯಿತು. ಕೈಮಗ್ಗ ಅಥವಾ ಕೈಯಿಂದ ತಯಾರಿಸಲಾದ ಬಟ್ಟೆಯಿಂದ ಮಾತ್ರವಲ್ಲದೆ, ಯಂತ್ರದಿಂದ ತಯಾರಿಸಿದ ಹತ್ತಿ, ಪಾಲಿಯೆಸ್ಟರ್, ಉಣ್ಣೆ, ರೇಷ್ಮೆ, ಖಾದಿ ಬಟ್ಟೆಯಿಂದಲೂ ರಾಷ್ಟ್ರಧ್ವಜ ಮಾಡಬಹುದು ಎಂದು ಈ ತಿದ್ದುಪಡಿ ಹೇಳುತ್ತದೆ. ಆದರೆ, ತಿದ್ದುಪಡಿಗೆ ಕೆಲ ವಲಯಗಳಿಂದ ವಿರೋಧ ಸಹ ವ್ಯಕ್ತವಾಗಿದೆ.
ಭಾರತದ ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸಲು ಮತ್ತು ‘ಹರ್ ಘರ್ ತಿರಂಗಾ’ (ಪ್ರತಿ ಮನೆಯಲ್ಲಿ ತಿರಂಗಾ) ಅಭಿಯಾನದ ಆರಂಭದ ಪೂರ್ವದಲ್ಲಿ ಧ್ವಜ ಸಂಹಿತೆಗೆ ಮಾಡಿದ ಬದಲಾವಣೆಯ ಪರಿಣಾಮವಾಗಿ ತ್ರಿವರ್ಣ ಧ್ವಜದ ವೆಚ್ಚವು ಕಡಿಮೆಯಾಗಬಹುದು ಎಂದು ಸರ್ಕಾರ ನಿರೀಕ್ಷಿಸುತ್ತಿದೆ.
ಧ್ವಜ ಸಂಹಿತೆಯ ಬದಲಾವಣೆಯು ಸರ್ಕಾರದ ’ಹರ್ ಘರ್ ತಿರಂಗಾ’ದ ಸಾಮೂಹಿಕ ಅಭಿಯಾನಕ್ಕೆ ಪೂರಕ ಬಲವನ್ನು ಒದಗಿಸುವ ನಿರೀಕ್ಷೆಯಿದೆ. ಈ ಅಭಿಯಾನವನ್ನು 2022ರ ಆಗಸ್ಟ್ 15ರಂದು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಜನರು ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಲು ಪ್ರೋತ್ಸಾಹ ನೀಡುವುದು ಈ ಅಭಿಯಾನದ ಉದ್ದೇಶವಾಗಿದೆ.
ಈ ಅಭಿಯಾನವು ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿದೆ. ದೇಶಾದ್ಯಂತ ಕನಿಷ್ಠ 20 ಕೋಟಿ ರಾಷ್ಟ್ರಧ್ವಜಗಳನ್ನು ಮಾರಾಟ ಮಾಡುವ ಮತ್ತು ಹಾರಿಸುವ ಗುರಿಯನ್ನು ಹೊಂದಿದೆ. ಕೋವಿಡ್ -19 ಸಾಂಕ್ರಾಮಿಕ ಹರಡಿದ ಸಮಯದಲ್ಲಿ ಮಾಸ್ಕ್ ಮತ್ತು ಪಿಪಿಇ ಕಿಟ್ಗಳನ್ನು ತಯಾರಿಸಿದ ಸ್ವ-ಸಹಾಯ ಗುಂಪುಗಳಿಂದ ಇನ್ನು ಮುಂದೆ ಧ್ವಜ ತಯಾರಿಕೆಯು ಬೃಹತ್ ಪ್ರಮಾಣದಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಹರ್ ಘರ್ ತಿರಂಗಾ ಅಭಿಯಾನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವ ನಿರೀಕ್ಷೆಯಿದೆ. ರಾಷ್ಟ್ರಧ್ವಜಗಳನ್ನು ಉಚಿತವಾಗಿ ವಿತರಿಸಲಾಗುವುದಿಲ್ಲ. ಜನರು ಧ್ವಜವನ್ನು ಖರೀದಿಸುವುದರಿಂದ ಅವರಲ್ಲಿ ಹೆಮ್ಮೆಯ ಭಾವನೆ ಮೂಡುತ್ತದೆ ಎಂದು ಸರ್ಕಾರ ಹೇಳಿದೆ.
ಅಮೃತ ಮಹೋತ್ಸವದ ಶುಭ ಸಂದರ್ಭದಲಿ ್ಲೇಂದ್ರ ಸರ್ಕಾರ ಹಮ್ಮಿಕೊಂಡಿರುವ ‘ಹರ್ ಘರ್ ತಿರಂಗಾ’ ಒಳ್ಳೆಯ ಕಾರ್ಯಕ್ರಮ. ನಾವೆಲ್ಲರೂ ಮಾಡಲೇಬೇಕಾದ ಕಾರ್ಯಕ್ರಮ. ಆದರೆ, ಪ್ರತಿ ಮನೆಯ ಮೇಲೆ ವಿದೇಶಿ ವಸ್ತ್ರದಿಂದ ಉತ್ಪಾದಿಸಿದ ಬಾವುಟ ಹಾರಿಸುವ ಬಗೆ ನನಗೆ ಅರ್ಥವಾಗುತ್ತಿಲ್ಲ. ಮೇಡ್ ಇನ್ ಇಂಡಿಯಾ ಎಂಬ ಘೋಷಣೆ ನೀಡಿದ ಕೇಂದ್ರ ಸರ್ಕಾರವೇ ಅದರ ಆಶಯವನ್ನು ಕತ್ತು ಹಿಚುಕಿದಂತಾಗುವುದಿಲ್ಲವೆ?
ಪ್ರತಿ ಮನೆಯ ಮೇಲೆ ಖಾದಿ ಬಾವುಟವನ್ನೇ ಹಾರಿಸಿದಿದ್ದರೆ. ದೇಶದ ಲಕ್ಷಾಂತರ ನೂಲು ಸುತ್ತುವ ಬಡ ಮಹಿಳೆಯರಿಗೆ ಕೆಲಸ ಒದಗಿಸಿದಂತಾಗುತ್ತಿರಲಿಲ್ಲವೇ? ಹಾಗೆ ಮಾಡಿದ್ದರೆ ಈ ಸರ್ಕಾರದ ತಲೆಯ ಮೇಲೊಂದು ಗರಿ ಮೂಡಿರುತ್ತಿತ್ತಲ್ಲವೇ? ಸ್ವಾವಲಂಬನೆಯತ್ತ ದೃಢವಾದ ಹೆಜ್ಜೆ ಆಗುತ್ತಿತ್ತಲ್ಲವೇ? ಆದರೆ, ಅಮೃತ ಮಹೋತ್ಸವದ ಶುಭ ಸಂದರ್ಭದಲ್ಲಿಯೇ ಖಾದಿ ಬಾವುಟವನ್ನು ಅಧಿಕೃತವಾಗಿ ಕೆಳಗಿಳಿಸಲಾಗಿದೆ. ಹೀಗೆ ಮಾಡಿ, ದೇಶದ ಬಾವುಟ ಮತ್ತು ಗ್ರಾಮೀಣ ಕೈ ಉತ್ಪಾದಕರ ನಡುವೆ ಇದ್ದ ಖಾದಿ ಎಂಬ ಸಂಬಂಧವನ್ನು ಹರಿದು ಹಾಕಲಾಗಿದೆ. ಇದೊಂದು ದುರಂತವೇ ಸರಿ.
ಈಗಾಗಲೇ ಖಾದಿ ಮತ್ತು ಕೈ ಉತ್ಪನ್ನಗಳು ಸತ್ತೇ ಹೋಗಿವೆ. ಆಧುನಿಕ ಸಂದರ್ಭದಲ್ಲಿ ವಾಸ್ತವವಾಗಿ ಆಗಿ ಹೋಗಿರುವ ಈ ದುರಂತವನ್ನು ಹೀಗೆ ಮಾಡುವ ಮೂಲಕ ಸರ್ಕಾರವೇ ಸ್ಥಿರಗೊಳಿಸಿದಂತಾಗಲಿಲ್ಲವೇ? ‘ಹರ್ ಘರ್ ತಿರಂಗಾ’ ಯೋಜನೆ ರೂಪಿಸಿದ ಸಂದರ್ಭದಲ್ಲೇ ಬಾವುಟದ ಅಗತ್ಯತೆ ಕುರಿತು ಬೇಡಿಕೆ ಇಟ್ಟಿದ್ದರೆ. ಸಾಕಾಗುವಷ್ಟು ಉತ್ಪಾದಿಸಲು ಖಾದಿ ಸಂಸ್ಥೆಗಳು ಸಿದ್ಧವಿದ್ದವು. ಅದನ್ನು ಬಿಟ್ಟು ಅನಗತ್ಯ ಕಾರಣ ನೀಡುತ್ತಿದೆ. ಖಾದಿ ಗೋದಾಮಿನಲ್ಲಿ ಲಕ್ಷಾಂತರ ಮೀಟರ್ ಬಟ್ಟೆ ಖರ್ಚಾಗದೆ ಉಳಿದಿದೆ. ಅದನ್ನು ಯಾರು ಬಳಸುತ್ತಾರೆ? ಸರ್ಕಾರವೇ ಹೀಗೆ ಮಾಡಿದರೆ ನಾಳೆ ಖಾದಿ ಸಂಸ್ಕೃತಿಯನ್ನು ಕಾಪಾಡುವವರು ಯಾರು?