ಮಹತ್ವಾಕಾಂಕ್ಷೆ, ನಂಬಿಕೆ ಅಂದರೆ ಗಂಗಾಂಬಿಕೆ

meyar
Published on

ರಾಜಕೀಯ ರಂಗ ಪ್ರವೇಶಿಸುವ ಮುನ್ನ ಎರಡು ದಶಕಗಳ ಕಾಲ ಎಲೆಮರೆ ಕಾಯಿಯಾಗಿದ್ದುಕೊಂಡೇ ಜನಸೇವೆ ಮಾಡುತ್ತಿದ್ದ ಗಂಗಾಂಬಿಕೆ ಮಲ್ಲಿಕಾರ್ಜುನ್, 2010ರಲ್ಲಿ ಮೊದಲ ಬಾರಿಗೆ ಜಯನಗರ ವಾರ್ಡ್ ನಿಂದ ಪಾಲಿಕೆ ಸದಸ್ಯರಾಗಿ ಆಯ್ಕೆಯಾದರು. ಬಳಿಕ 2015ರಲ್ಲಿ ಮತ್ತೊಮ್ಮೆ ಆಯ್ಕೆಯಾದ ಅವರಿಗೆ 18ನೇ ಮಹಿಳಾ ಮೇಯರ್ ಅಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿತು. ಈ ಸಮಯವನ್ನು ಸರಿಯಾಗಿ ವಿನಿಯೋಗಿಸಿಕೊಂಡ ಅವರು, ಬೆಂಗಳೂರನ್ನು ಹಲವು ರೀತಿಯಲ್ಲಿ ಅಭಿವೃದ್ಧಿಗೊಳಿಸಲು ಮುಂದಾದರು. ಇಂತಹ ಅಪರೂಪದ ಸಾಧಕಿಗೆ ‘ವಿಜಯವಾಣಿ’ ಪತ್ರಿಕೆ ಬೆಂಗಳೂರು ರತ್ನ ಪ್ರಶಸ್ತಿ ಮೂಲಕ ಗೌರವಿಸಿದೆ.

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ದೇಶದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ‘ಉಕ್ಕಿನ ಮಹಿಳೆ’ ಎಂದು ಕರೆಸಿಕೊಂಡವರು. ‘ತೊಟ್ಟಿಲು ತೂಗುವ ಕೈ ದೇಶವನ್ನೂ ತೂಗಬಲ್ಲದು’ ಎಂದು ಹೇಳಿದ್ದಲ್ಲದೆ, ಆ ಮಾತನ್ನು ಅಕ್ಷರಶಃ ಅನುಸರಿಸಿ ಸಮರ್ಥ ಆಡಳಿತ ನೀಡಿದವರು. ಹೆಣ್ಣು ಮನಸ್ಸು ಮಾಡಿದರೆ ಯಾವುದೇ ಕೆಲಸದಲ್ಲೂ ಸೈ ಅನ್ನಿಸಿಕೊಳ್ಳಬಲ್ಲಳು. ಛಲ, ವಿಶ್ವಾಸ, ದೃಢತೆಯ ಗುಣಗಳನ್ನು ಬೆಳೆಸಿಕೊಂಡು ಬೆಳೆದವರಲ್ಲಿ ಗಂಗಾಂಬಿಕೆ ಮಲ್ಲಿಕಾರ್ಜುನ್ ಸಹ ಒಬ್ಬರು. ರಾಜಧಾನಿಯಲ್ಲಿ ಈ ಹೆಸರು ಕೇಳದವರಿಲ್ಲ. 52ನೇ ಮೇಯರ್ ಆಗಿ ಕಾರ್ಯನಿರ್ವಹಿಸಿದ ಅವರ ಹಿರಿಮೆ- ಗರಿಮೆಗಳು ವಿಶಿಷ್ಟ.

ಗಂಗಾಂಬಿಕೆ ಜನಿಸಿದ್ದು ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ. ಶಿಕ್ಷಣ ಪಡೆದಿದ್ದು ರಾಮನಗರ ಮತ್ತು ಚನ್ನಪಟ್ಟಣದಲ್ಲಿ. ಪದವಿ ಶಿಕ್ಷಣವನ್ನು ವಿಜಯನಗರದ ಭಾರತೀಯ ಸಂಸ್ಕೃತಿ ವಿದ್ಯಾಪೀಠದಲ್ಲಿ ಪೂರ್ಣಗೊಳಿಸಿದರು. 2002ರಲ್ಲಿ ಮಲ್ಲಿಕಾರ್ಜುನ್ ಅವರನ್ನು ವರಿಸಿದರು. 2002ರಿಂದ 2010ರವರೆಗೆ ಪತಿ ಜತೆ ಸಮಾಜ ಸೇವೆಯಲ್ಲಿ ಕೈಜೋಡಿಸಿದ್ದ ಅವರಿಗೆ, ಅಧಿಕಾರವಿದ್ದರೆ ಸಮಾಜಕ್ಕೆ ಉತ್ತಮ ಕೆಲಸಗಳನ್ನು ಮಾಡಬಹುದು ಎಂಬುದು ಅರಿವಾಯಿತು. ಅದೇ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಸಿಗುವ ಜತೆಗೆ ಗಂಗಾಂಬಿಕೆ ಅವರು ಪ್ರತಿನಿಧಿಸುತ್ತಿದ್ದ ಜಯನಗರ ವಾರ್ಡ್ (153) ‘ಮಹಿಳಾ ಮೀಸಲು’ ಕ್ಷೇತ್ರವಾಯಿತು. 2010ರಲ್ಲಿ ಪಾಲಿಕೆ ಸದಸ್ಯೆಯಾದರು. ಕಾಪೋರೇಟರ್ ಆದ ಬಳಿಕ ಗಂಗಾಂಬಿಕೆ ಅವರಿಗೆ ವಾರ್ಡ್ ಹೊರತುಪಡಿಸಿ ಬೇರೇನೂ ತಿಳಿದಿರಲಿಲ್ಲ. ಜನರೊಡನೆ ಬೆರೆತು, ಜನರಿಗಾಗಿ, ಜನರಿಗೋಸ್ಕರ ಕೆಲಸ ಮಾಡಿದ್ದರಿಂದ 2015ರಲ್ಲಿ 7,800 ಮತಗಳ ಅಂತರದಿಂದ ಜಯಭೇರಿ ಬಾರಿಸಿ ದರು. ಮೇಯರ್ ಪಟ್ಟವನ್ನು ಅಲಂಕರಿಸಿ ಬೆಂಗಳೂರಿನ ಅಭಿವೃದ್ಧಿಗೆ ಶ್ರಮಿಸಿದರು.

ಕೃಷ್ಣರಾವ್ ಉದ್ಯಾನವನ್ನು ಕ್ರೀಡಾ ಸಂಕೀರ್ಣ ಮಾಡಿದ ಕೀರ್ತಿ: ಕಸದ ರಾಶಿ ಅನೈತಿಕ ಚಟುವಟಿಕೆಗಳ ತಾಣವಾಗಿದ್ದ ಕೃಷ್ಣರಾವ್ ಉದ್ಯಾನವನ್ನು ಮಾದರಿ ಉದ್ಯಾನವನ್ನಾಗಿ ರೂಪಿಸಲು ಗಂಗಾಂಬಿಕೆ ಅವರು ಪಣ ತೊಟ್ಟಿದ್ದರು. ವಾಯುವಿಹಾರಕ್ಕಾಗಿ ಸುಗಮ ಪಥ ನಿರ್ವಣ, ಪಾಳು ಬಿದ್ದಿದ್ದ ಕಟ್ಟಡ ನವೀಕರಣ, ಗ್ರಂಥಾಲಯ ನಿರ್ವಣ, ಮಕ್ಕಳು ಆಟವಾಡಲು ಆಟಿಕೆಗಳ ಅಳವಡಿಕೆ, ತೆರೆದ ವ್ಯಾಯಾಮ, ಬಾಸ್ಕೆಟ್​ಬಾಲ್ ಕ್ರೀಡಾಂಗಣ ಮತ್ತು ಶಿವಕುಮಾರ ಸ್ವಾಮೀಜಿ ಅವರ ಹೆಸರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಶೆಟಲ್ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ಹಾಗೂ ಅತ್ಯಾಧುನಿಕ ಉಪಕರಣಗಳನ್ನು ಒಳಗೊಂಡ ಮಲ್ಟಿ ಜಿಮ್​ನ್ನು ತೆರೆಯುವ ಮೂಲಕ ಕೃಷ್ಣರಾವ್ ಉದ್ಯಾನವನ್ನು ಉತ್ತಮ ಕ್ರೀಡಾ ತಾಣವಾಗಿ ರೂಪಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದರು.

ಶಿವಕುಮಾರ ಶ್ರೀಗಳ ಹೆಸರು ಅಜರಾಮರ: ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರ ಹೆಸರನ್ನು ಬೆಂಗಳೂರಿನಲ್ಲಿ ಶಾಶ್ವತವಾಗಿ ಉಳಿಸುವ ಅನೇಕ ಕಾರ್ಯಗಳನ್ನು ಗಂಗಾಂಬಿಕೆ ಕೈಗೊಂಡಿದ್ದರು. ನಗರದ ಯಶವಂತಪುರ ವೃತ್ತದಿಂದ ಕನ್ನಮೆಟಲ್ ಕಾರ್ಖಾನೆವರೆಗಿನ ರಸ್ತೆ ಹಾಗೂ ಗೊರಗುಂಟೆಪಾಳ್ಯದಿಂದ ಪ್ರಾರಂಭವಾಗಿ ಕನ್ನಮೆಟಲ್ ಕಾರ್ಖಾನೆ ಬಳಿ ಕೊನೆಗೊಳ್ಳುವ ಮೆಲ್ಸೇತುವೆಗೆ ಶ್ರೀಗಳ ಹೆಸರನ್ನು ನಾಮಕರಣ ಮಾಡಿದ್ದರು. ಶ್ರಿಗಳ ಪುತ್ಥಳಿಯನ್ನು ಸರ್ಕಾರಿ ಸಾಬೂನು ಕಾರ್ಖಾನೆ ವೃತ್ತದಲ್ಲಿ ಅನಾವರಣ ಮಾಡಿದ್ದರು. ರಾಜರಾಜೇಶ್ವರಿನಗರ ಕ್ಷೇತ್ರದ ದೊಡ್ಡಬಿದಿರುಕಲ್ಲು ಗ್ರಾಮದಲ್ಲಿ 2.35 ಎಕರೆ ಪ್ರದೇಶದಲ್ಲಿ ಶ್ರೀಗಳ ಹೆಸರಿನಲ್ಲಿ ‘ಧ್ಯಾನ ಮಂದಿರ’ ನಿರ್ವಣವು ಗಂಗಾಂಬಿಕೆ ಅಧಿಕಾರ ಅವಧಿಯಲ್ಲಿ ನಡೆದಿದೆ.

ಜಯನಗರಕ್ಕೆ ಒಳಚರಂಡಿ ವ್ಯವಸ್ಥೆ: ಜಯನಗರ ತುಂಬಾ ಹಳೆಯ ಬಡಾವಣೆಯಾಗಿದ್ದು, ಮಹಾರಾಜರ ಕಾಲದಲ್ಲಿ ರಚನೆಯಾದ ಮೊದಲ ಬಡಾವಣೆಯಾಗಿದೆ. ಬಳಿಕ ಮುಂದುವರಿದ ತಂತ್ರಜ್ಞಾನದ ಮೂಲಸೌಕರ್ಯ ಒದಗಿಸಿರಲಿಲ್ಲ. ಜನರಿಗೆ ಕಣ್ಣಿಗೆ ಯಾವುದೇ ಸಮಸ್ಯೆಗಳು ಇಲ್ಲವೆಂದು ಕಾಣುತ್ತದೆ. ಆದರೆ, ಜಯನಗರದ ಮೊದಲ ಹಂತದಲ್ಲಿ ಒಳಚರಂಡಿ ವ್ಯವಸ್ಥೆಯೇ ಸರಿಯಾಗಿರಲಿಲ್ಲ. ಅದನ್ನು ಸರಿಪಡಿಸಿದೆ.

ಪ್ಲಾಸ್ಟಿಕ್ ಸಂಪೂರ್ಣ ನಿಷೇಧ ಆಗದಿರುವುದು ಬೇಸರ: ಮುಂಬೈ, ದೆಹಲಿಯಂತಹ ಮಹಾನಗರಗಳಲ್ಲಿ ಪ್ಲಾ್ಯಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಲ್ಲಿನಂತೆಯೇ ಬೆಂಗಳೂರನ್ನು ಪ್ಲಾ್ಯಸ್ಟಿಕ್​ವುುಕ್ತ ಮಾಡಬೇಕೆಂಬ ಉದ್ದೇಶದಿಂದ ನನ್ನ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುವ ಜತೆಗೆ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಿದ್ದೆ ಎನ್ನುತ್ತಾರೆ ಗಂಗಾಂಬಿಕೆ. ನನ್ನ ಅವಧಿಯಲ್ಲಿ ಬಾಳೆ ಎಲೆ, ಬಟ್ಟೆ ಬ್ಯಾಗ್ ಬಳಕೆ ಹೆಚ್ಚಾಗಿತ್ತು. ಆದರೆ, ಅವರ ನಂತರ ಅಧಿಕಾರಕ್ಕೆ ಬಂದ ಮೇಯರ್ ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಪರಿಣಾಮ ಪ್ಲಾ್ಯಸ್ಟಿಕ್ ಸಂಪೂರ್ಣ ರದ್ದಾಗದಿರುವುದು ಗಂಗಾಂಬಿಕೆ ಅವರಿಗೆ ಬೇಸರ ತರಿಸಿದೆ.

ಕೆಲವು ವಾರ್ಡ್​ಗಳಲ್ಲಿ ಸಂಪೂರ್ಣವಾಗಿ ಪ್ಲಾ್ಯಸ್ಟಿಕ್ ರದ್ದು ಜಾರಿಗೆ ಬಂದಿತ್ತು. ಈ ನಿಯಮವನ್ನು ನಿರಂತರವಾಗಿ ಜಾರಿಗೊಳಿಸಿದ್ದರೆ, ಬೆಂಗಳೂರನ್ನು ಪ್ಲಾ್ಯಸ್ಟಿಕ್​ವುುಕ್ತಗೊಳಿಸಬಹುದಿತ್ತು. ಇದಕ್ಕೆ ಪ್ರತಿಯೊಬ್ಬರ ಸಹಕಾರ, ಬೆಂಬಲ ಬೇಕಾಗುತ್ತದೆ. ತೆರಿಗೆ ಸಂಗ್ರಹಕ್ಕೆ ಆದ್ಯತೆ, ತೆರಿಗೆ ವಸೂಲಾತಿ ಆಂದೋಲನ ಅತಿಹೆಚ್ಚು ತೆರಿಗೆ ಸಂಗ್ರಹವಾಯಿತು. ಕಟ್ಟಡಗಳ ಅಡಮಾನವನ್ನು ಬಿಡಿಸಿಕೊಳ್ಳಲಾಯಿತು. ಕೆರೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಯಿತು. ಭೈರಸಂದ್ರ ಕೆರೆಯನ್ನು ಕಾನೂನು ಹೋರಾಟ ಮಾಡಿ ರಕ್ಷಿಸಲಾಯಿತು. 4-5 ಜಾಗಗಳಲ್ಲಿ ಸ್ಮಶಾನಗಳಿಗೆ ಜಾಗ ಮೀಸಲು, 10 ಕೋಟಿ ರೂ. ವೆಚ್ಚದಲ್ಲಿ ಗವಿ ಗಂಗಾಧರೇಶ್ವರ ದೇಗುಲ ಜೀಣೋದ್ಧಾರ ಮಾಡಲಾಯಿತು. ಕೆಂಪಾಂಬುಧಿ ಕೆರೆ ಅಭಿವೃದ್ಧಿಗೂ 10 ಕೋಟಿ ರೂ. ಅನುದಾನ ನೀಡಲಾಯಿತು ಎಂದು ತಮ್ಮ ಅವಧಿಯ ಬಗ್ಗೆ ಸಂತೃಪ್ತ ನೆನಪುಗಳನ್ನು ಹಂಚಿಕೊಳ್ಳುತ್ತಾರೆ ಗಂಗಾಂಬಿಕೆ.

ಕೆಲಸ ಮಾಡಿದವರನ್ನು ಜನ ಕೈಬಿಡುವುದಿಲ್ಲ : ಬಿಬಿಎಂಪಿ ಚುನಾವಣೆ ವಾರ್ಡ್ ಮರುವಿಂಗಡಣೆ ಮತ್ತು ಮೀಸಲಾತಿ ಯಾವ ರೀತಿಯಲ್ಲಿ ಇರಲಿದೆ ಎಂಬುದನ್ನು ನೋಡಬೇಕಾಗುತ್ತದೆ. ಇದೆಲ್ಲವನ್ನೂ ನೋಡಿ ಖಂಡಿತವಾಗಿಯೂ ಮುಂದುವರಿಯುತ್ತೇವೆ. ನಾವೇ ಸುಮ್ಮನೆ ಕುಳಿತರೂ ಜನರು ನಮ್ಮನ್ನು ಬಿಡುವುದಿಲ್ಲ. ಮೇಯರ್ ಇದ್ದ ವೇಳೆ ಚಿಕ್ಕಪೇಟೆ ಕ್ಷೇತ್ರದಲ್ಲಿ 200 ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನ ನೀಡಲಾಗಿದೆ. ಇದರಲ್ಲಿ ಕೆಲವು ಯೋಜನೆಗಳು ಕಾರ್ಯಗತವಾಗಿಲ್ಲವೆಂಬ ಬೇಸರವಿದೆ. ಕ್ಷೇತ್ರದ ಎಲ್ಲ 7 ವಾರ್ಡ್​ನ ಜನರ ಸಂಪರ್ಕದಲ್ಲಿದ್ದೇನೆ. ಮುಂದಿನ ದಿನಗಳಲ್ಲಿಯೂ ಅವಕಾಶ ಸಿಕ್ಕರೆ, ಜನಸೇವೆ ಮಾಡುತ್ತೇನೆ ಎಂಬುದು ಗಂಗಾಂಬಿಕೆ ಸ್ಪಷ್ಟೋಕ್ತಿ.

ಚಾಲುಕ್ಯ ವೃತ್ತದಲ್ಲಿ ಮನೆ ಸದಸ್ಯರ ಸಂಪೂರ್ಣ ಬೆಂಬಲ: ಮಹಿಳೆಗೆ ಹೆಚ್ಚಿನ ಅವಕಾಶ ನೀಡಬೇಕೆಂದು ಹತ್ತಾರು ಕಾರ್ಯಕ್ರಮಗಳಲ್ಲಿ ಮಾತನಾಡುತ್ತಾರೆ. ಹಾಗೆಯೇ ನಮ್ಮ ಮನೆಯಲ್ಲಿ ನನಗೆ ಸಂಪೂರ್ಣ ಸಹಕಾರವಿತ್ತು, ಮನೆಯ ಜವಾಬ್ದಾರಿ ಜತೆಗೆ ಜನಪ್ರತಿನಿಧಿಯಾದಲ್ಲಿ ಸಮ ರ್ಪಕವಾಗಿ ನ್ಯಾಯ ಒದಗಿಸುವ ಶಕ್ತಿ ನನ್ನಲ್ಲಿದೆ ಎಂದು ಪತಿ ಮತ್ತು ಮನೆಯ ಸದಸ್ಯರು ತಿಳಿದಿದ್ದರು. ಈ ಭರವಸೆ ಮೇಲೆಯೇ ಸಂಪೂರ್ಣ ಸಹಕಾರ ನೀಡಿದರು. ಮೇಯರ್ ಆಗಿದ್ದ ಒಂದು ವರ್ಷ ಮನೆಗೂ ಸಮಯ ನೀಡದೆ, ಸಮರ್ಥವಾಗಿ ಕೆಲಸ ಮಾಡಲು ಸಾಧ್ಯವಾಯಿತು. ಪಾಲಿಕೆ ಸದಸ್ಯರಾಗಿ ಆಯ್ಕೆಯಾದ ನಂತರ ಜನರಿಗಾಗಿ ಕೆಲಸ ಮಾಡಬೇಕೆಂಬ ಬದ್ಧತೆಯನ್ನು ರೂಢಿಸಿಕೊಂಡೆ. ಆದರೆ, ಬಹುತೇಕ ಮಂದಿ ಮಹಿಳೆಯರು ಪಾಲಿಕೆ ಸದಸ್ಯೆಯಾಗುತ್ತಾರೆ. ಆದರೆ, ಅವರ ಪತಿ ಆಡಳಿತ ಮಾಡುತ್ತಾರೆ ಎಂಬ ಮಾತಿದೆ. ಇದನ್ನು ಸುಳ್ಳು ಮಾಡಬೇಕೆಂದು ಹಠ ತೊಟ್ಟು ಕೆಲಸ ಮಾಡಿದೆ. ಇದು ತುಂಬಾ ಖುಷಿ ನೀಡಿದೆ.

ಮೇಯರ್ ಅವಧಿಯ ಸವಾಲು : ಮೇಯರ್ ಅವಧಿಯಲ್ಲಿ ತುಂಬಾ ಸವಾಲುಗಳಿತ್ತು. ಜನರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿಸುವುದು ಸುಲಭವಲ್ಲ. ಇವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದ್ದರಿಂದ ಯಾವುದೂ ಅಡ್ಡಿಯಾಗಲಿಲ್ಲ. ಸುಲಲಿತವಾಗಿ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ ಎಂಬ ತೃಪ್ತಿ ಇದೆ.

ತಿಳಿಯುತ್ತದೆ. ಆದರೆ, ಬಸವಣ್ಣನ ಪ್ರತಿಮೆ ಮರಗಳ ಕೊಂಬೆಗಳಿಂದ ಮರೆಯಾಗಿತ್ತು. ಬಸವ ಜಯಂತಿಯಂದು ಮಾತ್ರ ಪ್ರತಿಮೆ ಕಾಣುತ್ತಿತ್ತು. ಇದೇ ವೇಳೆಗೆ ಕಾರ್ಯಕ್ರಮ ವೊಂದರಲ್ಲಿ ಬಸವ ಸಮಿತಿ ಮನವಿ ಮೇರೆಗೆ ನವೀಕರಣ ಮಾಡಲಾಯಿತು. ನಗರದ ಕೇಂದ್ರ ಭಾಗದ ಚಾಲುಕ್ಯ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆ ಸ್ಥಳವನ್ನು ಗಂಗಾಂಬಿಕೆ ಕಾಲದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಳಿಸುವ ಕೆಲಸ ಮಾಡಲಾಯಿತು.

ಚಾಲುಕ್ಯ ವೃತ್ತದಲ್ಲಿ ತೆರಿಗೆ ಸಂಗ್ರಹದಲ್ಲಿ ಹೆಚ್ಚಳ: ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹಕ್ಕೆ ಹೆಚ್ಚು ಒತ್ತು ನೀಡಿದ ಮೇಯರ್ ಅಂದರೆ ಅದು ಗಂಗಾಂಬಿಕೆ ಆಗಿದ್ದರು. ಪಾಲಿಕೆಯ 8 ವಲಯಗಳಿಗೂ ಭೇಟಿ ನೀಡಿ ಕಂದಾಯ ಅಧಿಕಾರಿಗಳ ಜತೆ ನಿರಂತರ ಸಭೆಗಳನ್ನು ನಡೆಸಿ ಆಸ್ತಿ ತೆರಿಗೆ ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಎಲ್ಲ ವಲಯಗಳಲ್ಲಿಯೂ ಪ್ರತಿ ಬುಧವಾರ ಆಂದೋಲನ ನಡೆಸಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಆಸ್ತಿ ಮಾಲೀಕರಿಗೆ ನೋಟಿಸ್ ಜಾರಿ ಮಾಡುವಂತೆ ಮತ್ತು ವಾರಕ್ಕೊಮ್ಮೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಪರಿಣಾಮ, ಕೇವಲ 100 ದಿನಗಳಲ್ಲಿ ಸುಮಾರು 1,800 ಕೋಟಿ ರೂ. ತೆರಿಗೆ ಸಂಗ್ರಹಿಸಲಾಗಿತ್ತು.

ಅಡಮಾನವಿಟ್ಟಿದ್ದ ಕಟ್ಟಡಗಳಿಗೆ ಮುಕ್ತಿ : ಹಿಂದಿನ ಅವಧಿಯಲ್ಲಿ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಪಾಲಿಕೆಯ 11 ಆಸ್ತಿಗಳನ್ನು ಅಡಮಾನವಿಟ್ಟು ಹುಡ್ಕೋ ಸಂಸ್ಥೆಯಿಂದ 1,796 ಕೋಟಿ ರೂ. ಸಾಲ ಪಡೆಯಲಾಗಿತ್ತು. ಈ ಪೈಕಿ ಕಾಂಗ್ರೆಸ್ ಅಧಿಕಾರವಧಿಯಲ್ಲಿ ಕೆಂಪೇಗೌಡ ಮ್ಯೂಸಿಯಂ, ಮೇಯೋಹಾಲ್, ಜಾನ್ಸನ್ ಮಾರುಕಟ್ಟೆ ಮತ್ತು ಮಲ್ಲೇಶ್ವರ ಮಾರುಕಟ್ಟೆ ಸೇರಿ ವರ್ಷದ ಅವಧಿಯಲ್ಲಿ 6 ಕಟ್ಟಡಗಗಳನ್ನು ಪಾಲಿಕೆ ವಶಕ್ಕೆ ಪಡೆದಿದ್ದ ಕೀರ್ತಿ ಗಂಗಾಂಬಿಕೆ ಅವರಿಗೆ ಸಲ್ಲುತ್ತದೆ.

ಚಾಲುಕ್ಯ ವೃತ್ತದಲ್ಲಿ ಬಸವೇಶ್ವರ ಪ್ರತಿಮೆ:  ಚಾಲುಕ್ಯ ವೃತ್ತದಲ್ಲಿ ಸಂಚರಿಸುವವರಿಗೆ ಬಸವೇಶ್ವರ ವೃತ್ತವೆಂದು ತಿಳಿಯುತ್ತದೆ. ಆದರೆ, ಬಸವಣ್ಣನ ಪ್ರತಿಮೆ ಮರಗಳಪರಿಸರಸ್ನೇಹಿ ಗಣಪ : ಗಣೇಶ ಚತುರ್ಥಿ ವೇಳೆ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿಗಳ ಬಳಕೆ ಕಡಿಮೆ ಮಾಡುವ ಉದ್ದೇಶದಿಂದ ಗಂಗಾಂಬಿಕೆ ಅವರು ಪರಿಸರಸ್ನೇಹಿ ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸುವಂತೆ ಜನರಲ್ಲಿ ಅರಿವು ಮೂಡಿಸಿದ್ದರು. ಶಾಲಾಮಕ್ಕಳು, ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಜಾಥಾ ನಡೆಸಿ ಜಾಗೃತಿ ಮೂಡಿಸಿದ್ದರು.

ಕೊಂಬೆಗಳಿಂದ ಮರೆಯಾಗಿತ್ತು. ಬಸವ ಜಯಂತಿಯಂದು ಮಾತ್ರ ಪ್ರತಿಮೆ ಕಾಣುತ್ತಿತ್ತು. ಇದೇ ವೇಳೆಗೆ ಕಾರ್ಯಕ್ರಮ ವೊಂದರಲ್ಲಿ ಬಸವ ಸಮಿತಿ ಮನವಿ ಮೇರೆಗೆ ನವೀಕರಣ ಮಾಡಲಾಯಿತು. ನಗರದ ಕೇಂದ್ರ ಭಾಗದ ಚಾಲುಕ್ಯ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆ ಸ್ಥಳವನ್ನು ಗಂಗಾಂಬಿಕೆ ಕಾಲದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಳಿಸುವ ಕೆಲಸ ಮಾಡಲಾಯಿತು.

ವಾಯು ಶುದ್ಧೀಕರಣ: ಬೆಂಗಳೂರಿನಲ್ಲಿ 80 ಲಕ್ಷ ರೂ.ಗಳಿಗೂ ಅಧಿಕ ವಾಹನಗಳಿದ್ದು,. ಪ್ರತಿ ವರ್ಷ ಶೇ.10 ಮಾಲಿನ್ಯ ಹೆಚ್ಚಳವಾಗುತ್ತಿದೆ. ಇದರಿಂದ ವಾಯುಮಾಲಿನ್ಯ ಹೆಚ್ಚಳವಾಗುತ್ತಿದೆ. ರಾಜಧಾನಿಯಲ್ಲಿ ಹೆಚ್ಚುತ್ತಿರುವ ಆಯುಮಾಲಿನ್ಯ ನಿಯಂತ್ರಣ ಕ್ಕಾಗಿ ಎಟೆಕ್ ಟ್ರೋನ್ ಸಂಸ್ಥೆ ಜತೆ ನಗರದ 500 ಜಂಕ್ಷನ್​ಗಳಲ್ಲಿ ವಾಯು ಶುದ್ಧೀಕರ ಘಟಕ ಅಳವಡಿಸಲು ಒಡಂಬಡಿಕೆ ಮಾಡಿಕೊಂಡಿದ್ದರು.

ಮೇಯರ್ ಅವಧಿಯ ಸಾಧನೆ

ಬಸವೇಶ್ವರ ಪ್ರತಿಮೆ: ಚಾಲುಕ್ಯ ವೃತ್ತದಲ್ಲಿ ಸಂಚರಿಸುವವರಿಗೆ ಬಸವೇಶ್ವರ ವೃತ್ತವೆಂದು ತಿಳಿಯುತ್ತದೆ. ಆದರೆ, ಬಸವಣ್ಣನ ಪ್ರತಿಮೆ ಮರಗಳ ಕೊಂಬೆಗಳಿಂದ ಮರೆಯಾಗಿತ್ತು. ಬಸವ ಜಯಂತಿಯಂದು ಮಾತ್ರ ಪ್ರತಿಮೆ ಕಾಣುತ್ತಿತ್ತು. ಇದೇ ವೇಳೆಗೆ ಕಾರ್ಯಕ್ರಮ ವೊಂದರಲ್ಲಿ ಬಸವ ಸಮಿತಿ ಮನವಿ ಮೇರೆಗೆ ನವೀಕರಣ ಮಾಡಲಾಯಿತು. ನಗರದ ಕೇಂದ್ರ ಭಾಗದ ಚಾಲುಕ್ಯ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆ ಸ್ಥಳವನ್ನು ಗಂಗಾಂಬಿಕೆ ಕಾಲದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಳಿಸುವ ಕೆಲಸ ಮಾಡಲಾಯಿತು.

ವಾರ್ಡ್ ಸಮಿತಿಗಳಿಗೆ ಒತ್ತು : ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್ ಸಮಿತಿಗಳನ್ನು ರಚಿಸಿ ಆಯಾ ವಾರ್ಡ್​ನಲ್ಲಿರುವ ಸಮಸ್ಯೆಗಳನ್ನು ಮೂಲದಲ್ಲೇ ಇತ್ಯರ್ಥ ಮಾಡಿಕೊಳ್ಳುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಅದರಂತೆ, ನಿಯಮಾನುಸಾರ ವಾರ್ಡ್ ಸಮಿತಿಗಳನ್ನು ರಚಿಸಲಾಗಿತ್ತು. ಆದರೆ, ಸಮಿತಿಗಳಲ್ಲಿನ ಹಲವು ಗೊಂದಲಗಳಿಂದ ಸರಿಯಾಗಿ ಸಭೆಗಳು ನಡೆಯುತ್ತಿರಲಿಲ್ಲ. ಇದನ್ನು ಮನಗಂಡು ಎಲ್ಲ ವಾರ್ಡ್​ಗಳಲ್ಲಿಯೂ ಪ್ರತಿ ತಿಂಗಳ ಮೊದಲ ಶನಿವಾರ ಆಯಾ ವಾರ್ಡ್ ಕಚೇರಿಗಳಲ್ಲಿ ಸ್ಥಳೀಯ ಸದಸ್ಯರ ಅಧ್ಯಕ್ಷತೆಯಲ್ಲಿ ಸಮಿತಿ ಸಭೆ ನಡೆಸುವಂತೆ ನಿರ್ಣಯ ಕೈಗೊಂಡರು.

ಪ್ಲಾಸ್ಟಿಕ್ ನಿಷೇಧಕ್ಕೆ ದಿಟ್ಟ ನಿರ್ಧಾರ: ಪ್ಲಾಸ್ಟಿಕ್ ಮುಕ್ತ ಬೆಂಗಳೂರನ್ನಾಗಿ ರೂಪಿಸಲು ಪಣತೊಟ್ಟಿದ್ದ ಗಂಗಾಂಬಿಕೆ ಅವರು ಈ ನೆಲೆಯಲ್ಲಿ ಜನರಿಗೆ ಅರಿವು ಮೂಡಿಸಲು ಶಾಲಾಮಕ್ಕಳು ಹಾಗೂ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ನಗರದಾದ್ಯಂತ ಜಾಥಾ ಹಮ್ಮಿಕೊಂಡಿದ್ದರು. ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾ್ಯಸ್ಟಿಕ್ ತಯಾರಿಕಾ ಘಟಕಗಳು, ಸಗಟು ಮಳಿಗೆಗಳು ಹಾಗೂ ಬೀದಿಬದಿ ಅಂಗಡಿಗಳ ಮೇಲೆ ಆರೋಗ್ಯಾಧಿಕಾರಿಗಳು ದಾಳಿ ನಡೆಸಿ ಪ್ಲಾ್ಯಸ್ಟಿಕ್ ಜಪ್ತಿ ಮಾಡುವ ಜತೆಗೆ ದಂಡ ವಿಧಿಸುವ ಪ್ರಕ್ರಿಯೆಗೆ ಚಾಲನೆ ನೀಡಿದರು. ಪ್ಲಾ್ಯಸ್ಟಿಕ್​ಗೆ ಪರ್ಯಾವಾಗಿ ಬಳಸುವ ಪರಿಸರಸ್ನೇಹಿ ವಸ್ತುಗಳನ್ನು ಬಳಕೆ ಮಾಡುವಂತೆ ನಾಗರಿಕರಲ್ಲಿ ಅರಿವು ಮೂಡಿಸಲು ‘ವಿಶೇಷ ಮೇಳ’ ಆಯೋಜಿದ್ದರು. 60ಕ್ಕೂ ಹೆಚ್ಚಿನ ಸಂಖ್ಯೆಯ ಪ್ಲಾ್ಯಸ್ಟಿಕೇತರ ವಸ್ತುಗಳ ಉತ್ಪಾದಕರು, ವಿತರಕರು, ಮಾರಾಟಗಾರರು ಮೇಳದಲ್ಲಿ ಭಾಗವಹಿಸಿ ಪರಿಸರಸ್ನೇಹಿ ವಸ್ತುಗಳನ್ನು ಪ್ರದರ್ಶಿಸಿದ್ದರು.

ಭೈರಸಂದ್ರ ಕೆರೆ ರಕ್ಷಣೆ: ತಮ್ಮ ಅವಧಿಯಲ್ಲಿ ಕೆರೆಗಳ ಸಂರಕ್ಷಣೆಗೆ ಮೊದಲ ಆದ್ಯತೆ ನೀಡಿದ್ದ ಗಂಗಾಂಬಿಕೆ ಅವರು ತಮ್ಮ ವಾರ್ಡ್ ಜಯನಗರ ವ್ಯಾಪ್ತಿಗೆ ಬರುವ ಭೈರಸಂದ್ರ ಕೆರೆಯನ್ನು ಬಿಡಿಎ ಯಿಂದ ಬಿಬಿಎಂಪಿಗೆ ಹಸ್ತಾಂತರಿಸಿದ್ದರು. ಕೆರೆ ಸುತ್ತಲಿನ ಜಾಗವನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದರು. ಸತತ ಹೋರಾಟ ಮಾಡಿ ಕೆರೆಯನ್ನು ರಕ್ಷಣೆ ಮಾಡಿದ್ದರು. ಮಾತ್ರವಲ್ಲ, ಈ ಕೆರೆ ಅಭಿವೃದ್ಧಿಗೆ 10 ಕೋಟಿ ರೂ. ವಿಶೇಷ ಅನುದಾನ ನೀಡಿ ಅಲ್ಲಿಯೂ ಅಭಿವೃದ್ಧಿ ಕೆಲಸ ಮಾಡಿಸುವಲ್ಲಿ ಕ್ರಮ ಕೈಗೊಂಡಿದ್ದರು.

ಸ್ಮಶಾನಗಳಿಗೆ ಭೂಮಿ ಮಂಜೂರು : ಬೆಂಗಳೂರು 225 ಚದರ ಕಿ.ಮೀ. ವಿಸ್ತೀರ್ಣದಿಂದ 800 ಚದರ ಕಿ.ಮೀ. ವ್ಯಾಪ್ತಿಗೆ ವಿಸ್ತರಣೆಯಾದ ಬಳಿಕ ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದು ರುದ್ರಭೂಮಿಗಳಿರಲಿಲ್ಲ. ಇದನ್ನು ಮನಗಂಡ ಗಂಗಾಂಬಿಕೆ ಅವರು ಸರ್ಕಾರದ ಗಮನಕ್ಕೆ ತಂದಿದ್ದರು. ಬಳಿಕ ಕುದುರೆ ಗೆರೆ, ಬಾಗಲೂರು, ಶಿವನಪುರ, ಹುಲ್ಲೆಗೌಡನಹಳ್ಳಿ ಮತ್ತು ದೇವಸಂದ್ರ ಸೇರಿ ಸುಮಾರು 8 ಎಕರೆ ಪ್ರದೇಶವನ್ನು ರುದ್ರಭೂಮಿ ನಿರ್ವಣಕ್ಕೆ ಸೂಚನೆ ನೀಡಲಾಗಿತ್ತು. ಹೊಸ ರುದ್ರಭೂಮಿಗಳ ನಿರ್ವಣಕ್ಕಾಗಿ ಬಜೆಟ್​ನಲ್ಲಿ 40 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದರು.

ಪ್ರವಾಹ ತಡೆಗೆ ಪರಿಹಾರ: ಬೆಂಗಳೂರಿನಲ್ಲಿ 842 ಕಿ.ಮೀ. ಉದ್ದದ ರಾಜಕಾಲುವೆಗಳಿದ್ದು, ಸರಿಯಾದ ನಿರ್ವಹಣೆ ಮಾಡದ ಪರಿಣಾಮ ಪ್ರತೀ ವರ್ಷ ಮಳೆಗಾಲದಲ್ಲಿ ಪ್ರವಾಹ ಉಂಟಾಗಿ ಅವಘಢಗಳು ಸಂಭವಿಸುತ್ತಿದ್ದವು. ಅದನ್ನು ತಡೆಯುವ ಉದ್ದೇಶದಿಂದ ಮೊದಲ ಬಾರಿಗೆ ಪ್ರವಾಹ ತಡೆಯಲು 36.40 ಕೋಟಿ ರೂ. ವೆಚ್ಚದಲ್ಲಿ 184 ಕಿಮೀ ಉದ್ದದ ರಾಜಕಾಲುವೆಯಲ್ಲಿ ಹೂಳು ತೆರವಿಗೆ ಕ್ರಮ ಕೈಗೊಂಡಿದ್ದರು. ನಾಯಂಡಹಳ್ಳಿ ಜಂಕ್ಷನ್ ಬಳಿ ಪ್ರತಿ ವರ್ಷ ಮಳೆಗಾಲದಲ್ಲಿ ಕೃತಕ ನೆರೆ ಸೃಷ್ಟಿಯಾಗುತ್ತಿತ್ತು. ಕಾರು, ದ್ವಿಚಕ್ರ ವಾಹನಗಳು ವೃಷಭಾವತಿ ರಾಜಕಾಲುವೆಗೆ ಕೊಚ್ಚಿಹೋಗುವ ಸ್ಥಿತಿ ಇತ್ತು. ಸಾಕಷ್ಟು ವರ್ಷಗಳಿಂದ ಹಲವು ಯೋಜನೆ ರೂಪಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಆದರೆ, ಗಂಗಾಂಬಿಕೆ ಅವರು 21 ಫ್ರೀಕಾಸ್ಟ್ ಎಲಿಮೆಂಟ್ಸ್ ಹಾಗೂ ತಡೆಗೋಡೆ ನಿರ್ವಿುಸಿದ ಯೋಜನೆಯಿಂದ ಪರಿಹಾರ ಕಂಡುಕೊಳ್ಳಲಾಯಿತು.

ಸೇತುವೆಗಳ ಸೌಂದಯೀಕರಣ: ಪಾಲಿಕೆ ವ್ಯಾಪ್ತಿಯ 22 ಮೇಲ್ಸೇತುವೆ ಹಾಗೂ ಕೆಳ ಸೇತುವೆಗಳ ನವೀಕರಣ ಮತ್ತು ಬಣ್ಣ ಬಳಿದು ಸೌಂದಯೀಕರಣಗೊಳಿಸಲು ಗಂಗಾಂಬಿಕೆ ಅವರು ವಿಶೇಷ ಕಾಳಜಿ ವಹಿಸಿದ್ದರು. 4 ಕೋಟಿ ರೂ. ವೆಚ್ಚ ದಲ್ಲಿ 22 ಮೇಲ್ಸೇತುವೆ ಹಾಗೂ ಕೆಳ ಸೇತುವೆಗಳ ಅಂದ ಹೆಚ್ಚಿಸಿದ್ದರು.

ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ ಗೌರವ: ಬೆಂಗಳೂರು ನಿರ್ವತೃ ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ ಬಿಬಿಎಂಪಿ ನೀಡುವ ಪ್ರಶಸ್ತಿ ಸಂಖ್ಯೆ ಕಡಿಮೆ ಮಾಡಿ, ಪ್ರಶಸ್ತಿ ಮೊತ್ತವನ್ನು ಹೆಚ್ಚಳ ಮಾಡಿದ್ದರು. ಸಾಕಷ್ಟು ಸಂಖ್ಯೆಗೆ ನೀಡುತ್ತಿದ್ದ ಪ್ರಶಸ್ತಿ ಸಂಖ್ಯೆಯನ್ನು 100ಕ್ಕೆ ಇಳಿಸಿದ್ದರು. ಕಾರ್ಯಕ್ರಮದಲ್ಲಿ ಯಾವುದೇ ಗೊಂದಲಗಳಾಗದಂತೆ ಸುಸಜ್ಜಿತ ನಿರ್ವಹಣೆ ಮಾಡಿದ್ದರು.

ಕೌಟುಂಬಿಕ ಜವಾಬ್ದಾರಿ ಜತೆ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿದ್ದ ಗಂಗಾಂಬಿಕೆ ಮಲ್ಲಿಕಾರ್ಜುನ ಅವರು ಎರಡೂ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಬಿಬಿಎಂಪಿ ಮಹಾಪೌರ ಸ್ಥಾನದ ಘನತೆಗೆ ಚ್ಯುತಿಬಾರದಂತೆ ಸೇವೆ ಸಲ್ಲಿಸಿ ಹೆಣ್ಣು. ಸಂಸಾರದ ಜತೆಗೆ ಉತ್ತಮ ಆಡಳಿತ ನೀಡಬಲ್ಲಳು ಎಂಬುದನ್ನು ನಿರೂಪಿಸಿದವರು. ಸಿದ್ದಗಂಗಾ ಮಠದ ಜತೆ ಉತ್ತಮ ಬಾಂಧವ್ಯ ಹೊಂದಿದ್ದು, ಕಾಯಕ ಸೇವಾ ನಿಷ್ಠೆ ಅನನ್ಯವಾದುದು. ಸತಿಪತಿಗಳೊಂದಾದ ಭಕ್ತಿ ಹಿತವಾಗಿಪು್ಪದು ಶಿವಂಗೆ ಅನ್ನುವಂತೆ ಗಂಗಾಬಿಕೆ ಮಲ್ಲಿಕಾರ್ಜುನ್ ನಡೆದುಕೊಂಡಿದ್ದಾರೆ.| ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಠಾಧ್ಯಕ್ಷರು, ಸಿದ್ಧಗಂಗಾ ಮಠಅಧಿಕಾರ ಬಂದಾಗ ಶಾಶ್ವತವಾಗಿ ಜನರ ಮನಸ್ಸಿನಲ್ಲಿ ಉಳಿಯುವ ಕೆಲಸ ಮಾಡಬೇಕು. ಅಂತಹ ಅಪರೂಪದ ವ್ಯಕ್ತಿತ್ವ ಗಂಗಾಂಬಿಕಾ ಮಲ್ಲಿಕಾರ್ಜುನ್ ಅವರದ್ದು. ಹಲವರ ದೃಷ್ಟಿಯಲ್ಲಿ ಗಂಗಾಂಬಿಕೆ ಅವರು ಇಂದಿಗೂ ಮೇಯರ್ ಆಗಿಯೇ ಉಳಿದಿದ್ದಾರೆ ವಿನಃ ಮಾಜಿ ಆಗಿಲ್ಲ. ಅದಕ್ಕೆ ಕಾರಣ ಅವರು ಮಾಡಿರುವ ಕೆಲಸಗಳು. ಬೆಂಗಳೂರಿನ ಅಭಿವೃದ್ಧಿಯಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಗಂಗಾಂಬಿಕೆ ಅವರು ವಿಭೂತಿಪುರ ವೀರಸಿಂಹಾಸನ ಮಠಕ್ಕೂ ಕೂಡ ಯಾರೂ ಮರೆಯಲಾಗದ ಕೊಡುಗೆ ನೀಡಿದ್ದಾರೆ. ಶ್ರೀಮಠದಿಂದ ನಡೆಯುತ್ತಿರುವ ಚಾರಿಟಬಲ್ ಆಸ್ಪತ್ರೆಯ ಉಚಿತ ಡಯಾಲಿಸಿಸ್ ಕೇಂದ್ರಕ್ಕೆ ಒಂದು ಕೋಟಿ ರೂಪಾಯಿ ಅನುದಾನವನ್ನು ನೀಡಿ ಪ್ರತಿವರ್ಷ ಸಾವಿರಾರು ಬಡರೋಗಿಗಳು ಉಚಿತ ಡಯಾಲಿಸಿಸ್ ಸೌಲಭ್ಯ ಪಡೆದುಕೊಳ್ಳಲು ಕಾರಣೀಭೂತರಾಗಿದ್ದಾರೆ.| ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ವಿಭೂತಿಪುರ ಮಠ‘ಬೆಂಗಳೂರು ರತ್ನ’ ಪ್ರಶಸ್ತಿ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ. ನಮ್ಮ ಕೆಲಸಗಳನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ. ಇದರ ಜತೆಗೆ ಬೆಂಗಳೂರಿನ ಅಭಿವೃದ್ಧಿಗಾಗಿ ದುಡಿಯಲು ಪ್ರೇರಣೆ ನೀಡಿದೆ. ನಮ್ಮ ಆತ್ಮವಿಶ್ವಾಸ ಹೆಚ್ಚಿಸಲು ಸಹ ಕಾರಣವಾಗಿದೆ.| ಗಂಗಾಂಬಿಕೆ ಮಲ್ಲಿಕಾರ್ಜುನ್ ಮಾಜಿ ಮೇಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net