

ಶಿವಮೊಗ್ಗ: ಸಿನಿಮೊಗೆ-ಶಿವಮೊಗ್ಗ ಚಿತ್ರ ಸಮಾಜದಿಂದ ರಾಜ್ಯ ಮಟ್ಟದ ಅಂಬೆಗಾಲು-6 ಕಿರುಚಿತ್ರ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಬೆಳ್ಳಿಮಂಡಲದ ಕಾರ್ಯಾಧ್ಯಕ್ಷ, ಅಂಬೆಗಾಲು ಕಿರುಚಿತ್ರ ಸ್ಪರ್ಧೆಯ ಸಂಚಾಲಕ ಡಿ.ಎಸ್.ಅರುಣ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕಿರುಚಿತ್ರ ಸ್ಪರ್ಧೆ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಯುವಜನರಲ್ಲಿ ಚಲನಚಿತ್ರ ಕುರಿತು ಅರಿವು ಮೂಡಿಸುವ ಹಾಗೂ ಸೃಜನಶೀಲತೆ ಪ್ರೊತ್ಸಾಹಿಸುವ ದೃಷ್ಟಿಯಿಂದ ಸ್ಪರ್ಧೆ ಅಯೋಜಿಸಲಾಗಿದೆ ಎಂದರು.
ಶೀರ್ಷಿಕೆ ಹಾಗೂ ಟೈಟಲ್ ಕಾರ್ಡ್ ಸೇರಿ 5ರಿಂದ 7 ನಿಮಿಷಗಳ ಕಿರುಚಿತ್ರಗಳನ್ನು ಸ್ಪರ್ಧೆಗೆ ಕಳುಹಿಸಬಹುದು. ಮೊಬೈಲ್ ಸೇರಿ ಯಾವುದೇ ಕ್ಯಾಮರಾ ಬಳಸಿ ಚಿತ್ರೀಕರಣ ಮಾಡಬಹುದು. ಸಂಪೂರ್ಣ ಸ್ವಂತಿಕೆಯ ನಿರ್ದೇಶನದ ಯಾವುದೇ ವಿಷಯವನ್ನು ಕುರಿತು ಕಿರುಚಿತ್ರ ನಿರ್ಮಿಸಬಹುದು. ಹಾಸ್ಯ ಕಥಾನಕವುಳ್ಳ ಕಿರುಚಿತ್ರಗಳಿಗೆ ವಿಶೇಷ ಆದ್ಯತೆಯಿದೆ ಎಂದು ತಿಳಿಸಿದರು.
ಅರ್ಜಿಗಳನ್ನು ಬಿಎಚ್ ರಸ್ತೆಯ ದೀಪಕ್ ಪೆಟ್ರೋಲ್ ಬಂಕ್‌ನಲ್ಲಿ ಪಡೆದು, ಜು.31ರೊಳಗೆ ಸಲ್ಲಿಸಬಹುದು. ಕಿರುಚಿತ್ರಗಳನ್ನು ನಾಲ್ಕು ಎಚ್‌ಡಿ ಶ್ರೇಣಿಯ ಡಿವಿಡಿ ಸಹಿತ ಆ.30ರೊಳಗೆ ಸಲ್ಲಿಸಬೇಕು. ಮಾಹಿತಿಗೆ ವೈದ್ಯ(98444 56505), ಡಾ. ನಾಗಭೂಷಣ (9449284495) ಮಂಜುನಾಥ್ (9686559950) ಇವರನ್ನು ಸಂಪರ್ಕಿಸಬಹುದು.
ಬೆಳ್ಳಿಮಂಡಲದ ಸಂಚಾಲಕ ವೈದ್ಯ, ಪ್ರಮುಖರಾದ ಡಾ. ನಾಗಭೂಷಣ, ಜಿ.ವಿಜಯಕುಮಾರ್, ಕೆ.ಎಸ್.ಚೇತನ್, ಚೇತನ್ (ಶ್ರೀನಿ), ಆನಂದ, ಚಂದ್ರಶೇಖರ್, ಶಿವಾನಂದ್, ಸುಕುಮಾರ್, ಸಂತೋಷ್, ಮಂಜುನಾಥ್, ಶಿವು, ಎನ್.ಬಿ.ರವೀಶ ಇತರರಿದ್ದರು.