ದಸಂಸ ಸಂಘಟನೆಗಳಿಂದ ಅಂಬೇಡ್ಕರ್ ಆಶಯ ಈಡೇರಿಸುವ ಕೆಲಸ

06 SARAG 3
ಸರಗೂರು ತಾಲೂಕಿನ ಅಂಬೇಡ್ಕರ್ 67ನೇ ಪರಿನಿರ್ವಾಣ ದಿನವನ್ನು ಆಚರಿಸಲಾಯಿತು.ನಾರಾಯಣ, ಬಸವರಾಜು, ಸಣ್ಣಕುಮಾರ್, ಗೋವಿಂದರಾಜು ಮತ್ತಿತರರಿದ್ದರು.
Published on

ಸರಗೂರು: ಅಂಬೇಡ್ಕರ್ ಸಾಧನೆ ಮತ್ತು ಆಶಯಗಳನ್ನು ಮುನ್ನಡೆಸುವ ಕೆಲಸವನ್ನು ದಲಿತ ಸಂಘರ್ಷ ಸಮಿತಿ ಸಂಘಟನೆಗಳು ಮಾಡುತ್ತಿವೆ ಎಂದು ದಸಂಸ ಅಂಬೇಡ್ಕರ್ ಸಂಘಟನೆಯ ಜಿಲ್ಲಾ ಪ್ರಧಾನ ಸಂಚಾಲಕ ಮಲ್ಲಹಳ್ಳಿ ನಾರಾಯಣ್ ತಿಳಿಸಿದರು.

ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ಬುಧವಾರ ಅಂಬೇಡ್ಕರ್ ಅವರ 67ನೇ ಪರಿನಿರ್ವಾಣ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಸಮಾಲೋಚನೆ ಸಭೆಯಲ್ಲಿ ಮಾತನಾಡಿದರು.

ಅಂಬೇಡ್ಕರ್ ಅವರನ್ನು ಇಡೀ ವಿಶ್ವವೇ ಸ್ಮರಿಸುವಂತಹ ದಿನ, ಇದನ್ನು ಯಾರೂ ಕಡೆಗಣಿಸಬಾರದು ಎಂದರು. ಅಂಬೇಡ್ಕರ್ ಅವರ ಕನಸಿನ ಭಾರತವನ್ನು ನಿರ್ಮಾಣ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಆದರೆ ಅದರ ವಿರುದ್ಧ ದಿಕ್ಕಿನಲ್ಲಿ ಭಾರತ ಸಾಗುತ್ತಿದೆ. ಜಾತ್ಯತೀತ ರಾಷ್ಟ್ರ ಆಗಬೇಕಾದ ದೇಶ ಕೆಸರಿನಲ್ಲಿ ಸಿಲುಕಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಉಪ ಪ್ರಧಾನ ಸಂಚಾಲಕ ದೊಡ್ಡಸಿದ್ದು ಮಾತನಾಡಿ, ಇಂದು ದೇಶದಲ್ಲಿ ಹಿಂಸಾಚಾರ, ಕೋಮುವಾದ, ಜಾತಿವಾದ ರಾಷ್ಟ್ರವನ್ನು ಆಳುತ್ತಿವೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಇದಕ್ಕೆ ಹೊರತಾಗಿಲ್ಲ, ಜಾತಿವಾದ ಎಲ್ಲೆಡೆ ಬೇರೂರಿರುವುದು ಆತಂಕವನ್ನುಂಟು ಮಾಡುತ್ತಿದೆ ಎಂದರು.
ಯಾವ ಆಶಯವನ್ನು ಇಟ್ಟುಕೊಂಡು ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿದ್ದಾರೋ ಅದು ಜಾರಿಯಾಗದೆ ಇರುವುದು ದುರದೃಷ್ಟಕರ ಎಂದರು.

ಸಂಘಟನಾ ಸಂಚಾಲಕರು ಬಸವರಾಜು, ಜಿಲ್ಲಾ ಸಂಘಟನಾ ಸಂಚಾಲಕ ದೇವರಸನಹಳ್ಳಿ ಕುಮಾರ್, ಜಿಲ್ಲಾ ಮಹಿಳಾ ಸಂಚಾಲಕಿ ಮಹದೇವಮ್ಮ, ಎಚ್.ಡಿ.ಕೋಟೆ ಸಂಚಾಲಕ ಸಣ್ಣಕುಮಾರ್, ನಂಜನಗೂಡು ಸಂಚಾಲಕ ಗೋಣಹಳ್ಳಿ ನಾರಾಯಣಸ್ವಾಮಿ, ಶಿವಣ್ಣ ಬೊಮ್ಮನಹಳ್ಳಿ, ಸರಗೂರು ಸಂಚಾಲಕ ಕೂಡಗಿ ಗೋವಿಂದರಾಜು, ನಾಗೇಂದ್ರ ಮೊಳೆಯೂರು ಕಾವಲ್, ಮಣಿಕಂಠ ಮಠದಕಟ್ಟೆ, ಕೃಷ್ಣ ಎನ್. ಕುರ್ಣೇಗಾಲ, ಭಾನುಪ್ರಕಾಶ್ ದೇವಲಾಪುರ, ಮಹದೇವಮೂರ್ತಿ ಮಸಹಳ್ಳಿ, ಮಹದೇವಮೂರ್ತಿ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net