ಅಂಬೇಡ್ಕರ್ ವಿಚಾರ ಮನನ ಅಗತ್ಯ

ambedkar
ಅಂಬೇಡ್ಕರ್ ವಿಚಾರಧಾರೆ ಮತ್ತು ಸಮಗ್ರ ಅಭಿವೃದ್ಧಿ ವಿಷಯದ ಕುರಿತ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಡಾ. ಶ್ರೀಕಂಠ ಕೂಡಿಗೆ ಉದ್ಘಾಟಿಸಿದರು. ಡಾ. ನೆಲ್ಲಿಕಟ್ಟೆ ಸಿದ್ದೇಶ್, ಪ್ರೊ. ಕುಮಾರಚಲ್ಯ, ಪ್ರೊ. ಎ.ಬಿ.ರಾಮಚಂದ್ರಪ್ಪ, ಪ್ರೊ. ಹಿರೇಮಣಿ ನಾಯ್ಕ ಮುಂತಾದವರಿದ್ದರು.
Published on

ಶಿವಮೊಗ್ಗ: ವರ್ಣವ್ಯವಸ್ಥೆಯ ಮಾಲಿನ್ಯವನ್ನು ತೊಳೆದವರು ಡಾ. ಬಿ.ಆರ್.ಅಂಬೇಡ್ಕರ್. ಬೌದ್ಧಿಕವಾಗಿ ನಾಶವಾಗುತ್ತಿರುವ ಈ ಕಾಲದಲ್ಲಿ ಅವರ ವಿಚಾರಗಳನ್ನು ಮನನ ಮಾಡಿ ಅನುಷ್ಠಾನಕ್ಕೆ ತರುವ ಅಗತ್ಯವಿದೆ ಎಂದು ಸಾಹಿತಿ ಡಾ. ಶ್ರೀಕಂಠ ಕೂಡಿಗೆ ಹೇಳಿದರು.

ಕುವೆಂಪು ವಿವಿಯಲ್ಲಿ ಪದವಿ ಕಾಲೇಜುಗಳ ಪ್ರಾಧ್ಯಾಪಕರಿಗೆ ಬುಧವಾರ ಏರ್ಪಡಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್ ವಿಚಾರಧಾರೆ ಮತ್ತು ಸಮಗ್ರ ಅಭಿವೃದ್ಧಿ ಕುರಿತ ರಾಜ್ಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ವಿಚಾರಗಳು ಜಾಹೀರಾತು ಮತ್ತು ಪ್ರಚಾರಕ್ಕೆ ಸೀಮಿತವಾಗದೆ ವೈಯಕ್ತಿಕವಾಗಿ ದೇಶದ ಪ್ರತಿಯೊಬ್ಬ ಪ್ರಜೆಯೂ ಅನುಸರಿಸುವಂತಾಗಬೇಕು. ಅದರಲ್ಲೂ ಅಧ್ಯಾಪಕರು ಅಂಬೇಡ್ಕರ್ ವಿಚಾರಧಾರೆಯನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಜವಾಬ್ದಾರಿ ನಿರ್ವಹಿಸಬೇಕು ಎಂದರು.

ನಿವೃತ್ತ ಉಪನ್ಯಾಸಕ ಪ್ರೊ. ಕುಮಾರಚಲ್ಯ ಮಾತನಾಡಿ, ಸಾಮಾಜಿಕ ವ್ಯವಸ್ಥೆಯನ್ನು ಸುಧಾರಿಸುವುದೇ ವೈಚಾರಿಕತೆ. ಇಂದು ಸುಳ್ಳಿನ ಭಯೋತ್ಪಾದಕರಿಂದ ಸುಧಾರಣೆ ತರಲಾಗುತ್ತಿಲ್ಲ. ಅಂತಃಕರಣ ಸತ್ತುಹೋಗಿದೆ. ಸುಧಾರಕರು ಬೆನ್ನ ಹಿಂದಿನ ಬೆಳಕುಗಳಂತೆ. ಹಿಂದಿರುಗಿ ನೋಡಿದಾಗ ಬೆಳಕು ಕಾಣುತ್ತವೆ ಎಂದು ತಿಳಿಸಿದರು.

ಉಪನ್ಯಾಸಕರಾದ ಪ್ರೊ. ಹೂವಯ್ಯ ಗೌಡರ, ಪ್ರೊ. ಎ.ಬಿ.ರಾಮಚಂದ್ರಪ್ಪ, ಪ್ರೊ. ಹಿರೇಮಣಿ ನಾಯ್ಕ, ಪ್ರೊ. ಕೆ.ಆರ್.ಮಂಜುನಾಥ್, ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net