VIDEO| ಸ್ವಿಮ್ಮಿಂಗ್​ ಮಾಡುತ್ತಾ ಭಾರಿ ಗಾತ್ರದ ಶಾರ್ಕ್​ ಎದರು ಹೋದ ಈಜುಗಾರ: ಮುಂದೇನಾಯ್ತು ನೀವೇ ನೋಡಿ!​

Shark
Published on

ಮ್ಯಾಡ್ರಿಡ್​: ಈಜುಗಾರನೊಬ್ಬ ದೈತ್ಯ ಹಾಗೂ ಅಪಾಯಕಾರಿ ಶಾರ್ಕ್ ಸಮೀಪದಲ್ಲೇ ಸ್ವಿಮ್ಮಿಂಗ್​ ಮಾಡುವ ಮೂಲಕ ಎದೆಗಾರಿಕೆ ಪ್ರದರ್ಶಿಸಿದ್ದು, ಈಜುಗಾರನನ್ನು ಶಾರ್ಕ್​ ನೋಡಿತೋ? ಇಲ್ಲವೋ? ಅವನ ಹತ್ತಿರವೇ ಹಾದುಹೋದ ಘಟನೆ ಸ್ಪೇನ್​ನ ಮಲಾಗ್​ನಲ್ಲಿರುವ ಬೀಚ್​ನಲ್ಲಿ ನಡೆದಿದೆ.

ಮಲಾಗ್​ನ ಆಳವಾದ ತೀರ ಪ್ರದೇಶದಲ್ಲಿ ಶುಕ್ರವಾರ ಪ್ರಸಂಗ ಜರುಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವಿಡಿಯೋದಲ್ಲಿ ಏನಿದೆ?: ತನ್ನ ಎದುರಿಗೆ ಬರುವ ಶಾರ್ಕ್​ ಅನ್ನು ನೋಡುವ ಈಜುಗಾರ ಕೊಂಚವೂ ಭೀತಿಗೆ ಓಳಗಾಗದೇ ನೀರಿನಲ್ಲಿ ಮುಳುಗಿ ಏಳುತ್ತಾನೆ. ಶಾರ್ಕ್​ ಆತನ ಹತ್ತಿರವೇ ಹಾದು ಹೋಗುವಾಗ ಅದರ ಸಮೀಪವೇ ಆತ ಈಜುತ್ತಿರುತ್ತಾನೆ. ಹತ್ತಿರದಲ್ಲೇ ಬೋಟ್​ ಒಂದು ಕಾಣಿಸುವುದನ್ನು ನೋಡಿದರೆ, ಈಜುವುದಕ್ಕಾಗಿಯೇ ಬೋಟ್​ ತೆಗೆದುಕೊಂಡು ಹೋಗಿ ಮಧ್ಯದಲ್ಲಿ ನಿಲ್ಲಿಸಿ, ಬೋಟ್​ನಿಂದ ಜಂಪ್​ ಮಾಡಿ ಈಜುತ್ತಿದ್ದ ಎಂದು ತಿಳಿಯುತ್ತದೆ.

ಅದೃಷ್ಟವಶಾತ್​ ಶಾರ್ಕ್​ ಆತನನ್ನು ನೋಡಿಲ್ಲ ಎಂದೆನಿಸುತ್ತಿದೆ. ಒಂದು ವೇಳೆ ಶಾರ್ಕ್​ ಆತನನ್ನು ನೋಡಿದ್ದರೆ, ಅಲ್ಲಿ ನಡೆಯುತ್ತಿದ್ದ ಕತೆಯೇ ಬೇರೆ ಎನ್ನುತ್ತಾರೆ ಪರಿಣಿತರು. ಅಲ್ಲದೆ, ಶಾರ್ಕ್​ ಬರೋಬ್ಬರಿ 20 ಅಡಿ ಉದ್ದ ಇರಬಹುದೆಂದು ಅಂದಾಜಿಸಲಾಗಿದೆ. ಏನೇ ಆಗಲಿ ಅಪಾಯಾಕಾರಿ ಶಾರ್ಕ್​ ಎದುರು ನಿಂತ ಆತನ ಧೈರ್ಯವನ್ನು ಮೆಚ್ಚಲೇ ಬೇಕು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net