ವಿವಿಧ ದೇಗುಲಗಳಲ್ಲಿ ಅಮಾವಾಸ್ಯೆ ಪೂಜೆ

DEC. 13, HNPUR., FILE 1.
ಹೊಳೆನರಸೀಪುರ ಪಟ್ಟಣದ ಶ್ರೀ ಶಂಕರಮಠದಲ್ಲಿ ಕಾರ್ತಿಕ ಅಮಾವಾಸ್ಯೆಯ ದೀಪೋತ್ಸವ ಪ್ರಯುಕ್ತ ಪ್ರಾಂಗಣವನ್ನು ದೀಪಗಳಿಂದ ಅಲಂಕರಿಸಿ, ಪೂಜಿಸಲಾಯಿತು.
Published on

ಹೊಳೆನರಸೀಪುರ: ಪಟ್ಟಣದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ, ಶ್ರೀ ಶಂಕರಮಠ, ಶ್ರೀ ರಾಘವೇಂದ್ರಸ್ವಾಮಿ ಮಠ, ಶ್ರೀ ಕನ್ನಿಕಾ ಪರಮೇಶ್ವರಿ, ಮಾವಿನಕೆರೆ ಶ್ರೀ ವೆಂಕಟರಮಣಸ್ವಾಮಿ, ಹಳೇಕೋಟೆ ಬೆಟ್ಟದ ಶ್ರೀ ರಂಗನಾಥಸ್ವಾಮಿ ಹಾಗೂ ಶ್ರೀ ಈಶ್ವರ ದೇವಾಲಯಗಳಲ್ಲಿ ಕಾರ್ತಿಕ ಅಮಾವಾಸ್ಯೆಯ ದೀಪೋತ್ಸವದ ಪ್ರಯುಕ್ತ ಶ್ರೀ ಸ್ವಾಮಿಯ ಮೂರ್ತಿಗಳಿಗೆ ಪಂಚಾಮೃತ ಅಭಿಷೇಕ ನಡೆಸಿ ವಿವಿಧ ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಿ ಪೂಜಿಸಲಾಯಿತು.


ದೇವಾಲಯಗಳ ಆವರಣದಲ್ಲಿ ಗೋಧೂಳಿ ಲಗ್ನದಲ್ಲಿ ರಂಗೋಲಿ ಚಿತ್ತಾರ ಬಿಡಿಸಿ, ಸಹಸ್ರಾರು ದೀಪಗಳಿಂದ ಅಲಂಕರಿಸಲಾಗಿತ್ತು. ಹಾಗೂ ರಥದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮುಖ್ಯರಸ್ತೆಗಳಲ್ಲಿ ಉತ್ಸವ, ಪ್ರಾಕಾರೋತ್ಸವದ ನಂತರ ಮಹಾಮಂಗಳಾರತಿ ನಡೆಸಿ, ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ಪಟ್ಟಣದ ದೇವಾಂಗದ ಶ್ರೀ ಬನಶಂಕರಿ, ಈಡಿಗರ ರಾಮಮಂದಿರ, ಮಡಿವಾಳ ರಾಮಮಂದಿರ, ಶ್ರೀ ಕಾಳಿಕಾಂಬ, ಕೋಟೆ ಮಾರಮ್ಮ, ಶ್ರೀ ಲಕ್ಷ್ಮಣೇಶ್ವರಸ್ವಾಮಿ, ಶ್ರೀ ಓಂಕಾರೇಶ್ವರ, ಸೀತಾವಿಲಾಸ ರಸ್ತೆಯ ಶ್ರೀ ವೀರಭದ್ರೇಶ್ವರಸ್ವಾಮಿ ಹಾಗೂ ಮೈಲಾರ ಲಿಂಗೇಶ್ವರಸ್ವಾಮಿ, ಶ್ರೀ ಸಿಂಗಮ್ಮ, ಹುಣಸೇಮರ ಆಂಜನೇಯ, ಕುರುಹಿನಶೆಟ್ಟಿ ರಾಮಮಂದಿರ, ಕೊಳಲು ಗೋಪಾಲಕೃಷ್ಣ, ಶ್ರೀ ಶನೈಶ್ಚರ ಹಾಗೂ ಇತರ ದೇವಾಲಯಗಳಲ್ಲಿ ದೇವರ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿ, ಸಂಪ್ರದಾಯದಂತೆ ಪೂಜಿಸಲಾಯಿತು. ಸುಮಂಗಲಿಯರು ದೇವಾಲಯಗಳ ಪ್ರಾಂಗಣದಲ್ಲಿ ರಂಗೋಲಿಯ ಚಿತ್ತಾರ ಬಿಡಿಸಿ, ದೀಪಗಳಿಂದ ಆಕರ್ಷಕವಾಗಿ ಅಲಂಕರಿಸಿ, ದೀಪೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net