

ನವದೆಹಲಿ: ರಾಜ್ಯಸಭಾ ಸಂಸದ, ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್ ವಿಧಿವಶರಾಗಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು. ಕಳೆದ ಅನೇಕ ತಿಂಗಳುಗಳಿಂದ ಅವರು ಸಿಂಗಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಮರ್ ಸಿಂಗ್ ಅವರು ಪತ್ನಿ ಪಂಕಜಾ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಅಮರ್ ಸಿಂಗ್ 2013ರಲ್ಲಿ ದುಬೈನಲ್ಲಿ ಇದ್ದಾಗ ಕಿಡ್ನಿ ವೈಫಲ್ಯ ಉಂಟಾಗಿ ಆರೋಗ್ಯ ಸಮಸ್ಯೆ ಎದುರಿಸಿದ್ದರು. ಬಳಿಕ 2016ರಲ್ಲಿ ಮತ್ತೆ ರಾಜಕೀಯ ಬದುಕಿಗೆ ಹಿಂದಿರುಗಿದ್ದರು ಸಿಂಗ್. 2020ರ ಮಾರ್ಚ್ ಆರಂಭದಲ್ಲಿ ಅಮರ್ ಸಿಂಗ್ ನಿಧನ ಕುರಿತ ವದಂತಿ ಹರಡಿದಾಗ ಅವರು "ಟೈಗರ್ ಝಿಂದಾ ಹೇ" ಎಂದು ಹೇಳಿಕೆ ನೀಡಿ ಗಮನಸೆಳೆದಿದ್ದರು.