'ಪುಷ್ಪ 2' ಸೆಟ್‌ನಿಂದ ಅಲ್ಲು ಅರ್ಜುನ್ ಲುಕ್ ಸೋರಿಕೆ, ಸೀರೆಯಲ್ಲಿ ಕಾಣಿಸಿಕೊಂಡ ಸೂಪರ್ ಸ್ಟಾರ್

pushpa 2
Published on

ಮುಂಬೈ: ಅಲ್ಲು ಅರ್ಜುನ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಪುಷ್ಪ 2' ಈ ವರ್ಷ ಬಿಡುಗಡೆಯಾಗಲಿದೆ. ಇತ್ತೀಚಿನ ದಿನಗಳಲ್ಲಿ ಸೌತ್ ಸೂಪರ್ ಸ್ಟಾರ್ ತಮ್ಮ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಇನ್ನು ಚಿತ್ರದ ಟೀಸರ್ ಆಗಲಿ, ಹಾಡುಗಳಾಗಲಿ ರಿಲೀಸ್ ಆಗಿಲ್ಲ. ಆದರೆ ಇದಕ್ಕೂ ಮುನ್ನ ಪುಷ್ಪ ಸೆಟ್​​​​​​ನ ಫೋಟೋ ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

'ಪುಷ್ಪ 2' ಸೆಟ್‌ನಿಂದ ಸೋರಿಕೆಯಾದ ಈ ವೈರಲ್ ಫೋಟೋದಲ್ಲಿ, ಅಲ್ಲು ಅರ್ಜುನ್ 'ಗಂಗಮ್ಮ ತಳ್ಳಿ' ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಲುಕ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನಲ್ಲೂ ಶೇರ್ ಆಗಿದೆ. ಚಿತ್ರದಲ್ಲಿ, ಸೂಪರ್‌ಸ್ಟಾರ್ ನೀಲಿ ಬಣ್ಣದ ಬನಾರಸಿ ಸೀರೆಯನ್ನು ಧರಿಸಿ ಕುರ್ಚಿಯ ಮೇಲೆ ಕುಳಿತಿದ್ದಾರೆ. ಲೀಕ್ ಆದ ಫೋಟೋಗೆ ಅಭಿಮಾನಿಗಳು ಸಾಕಷ್ಟು ಕಾಮೆಂಟ್​​​ ಮಾಡುತ್ತಿದ್ದಾರೆ.

ಏನಿದು ಗಂಗಮ್ಮ ತಳ್ಳಿ ಜಾತ್ರೆ? 

ಅಲ್ಲು ಅರ್ಜುನ್ ಅವರ 'ಗಂಗಮ್ಮ ತಳ್ಳಿ ಜಾತ್ರೆ' ಲುಕ್ ಕುರಿತು ಮಾತನಾಡುವುದಾದರೆ, 'ಗಂಗಮ್ಮ ತಳ್ಳಿ ಜಾತ್ರೆ' ತಿರುಪತಿಯ ಪ್ರಸಿದ್ಧ ಆಚರಣೆಯಾಗಿದ್ದು, ಇದನ್ನು ಪ್ರತಿ ವರ್ಷ ಒಂದು ವಾರ ಆಚರಿಸಲಾಗುತ್ತದೆ. ಅದರ ಕೊನೆಯ ದಿನ ಗಂಡಸರು ಹೆಣ್ಣಿನ ವೇಷ ಧರಿಸಿ ಗಂಗಮ್ಮನಂತೆ ಕಾಣುತ್ತಾರೆ.

ಸುಕುಮಾರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಪುಷ್ಪ: ದಿ ರೂಲ್' ಚಿತ್ರವು ಈ ವರ್ಷದ ಬಹು ನಿರೀಕ್ಷಿತ ಸೀಕ್ವೆಲ್‌ಗಳಲ್ಲಿ ಒಂದಾಗಿದೆ. ಚಿತ್ರವು ಆಗಸ್ಟ್ 15, 2024 ರಂದು ವಿಶ್ವದಾದ್ಯಂತ ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಸೌತ್ ಚಿತ್ರವು ಬಾಲಿವುಡ್ ನಟ ಅಜಯ್ ದೇವಗನ್ ಅವರ ಚಿತ್ರದೊಂದಿಗೆ ಥಿಯೇಟರ್‌ಗಳಲ್ಲಿ ಪೈಪೋಟಿಗಿಳಿಯಲಿದೆ. ಅಜಯ್ ಅವರ 'ಸಿಂಗಮ್ ಎಗೇನ್' ಆಗಸ್ಟ್ 15, 2024 ರಂದು ಥಿಯೇಟರ್‌ಗಳಿಗೆ ಬರಲಿದೆ.

'ಪುಷ್ಪ: ದಿ ರೂಲ್' ಮೊದಲು, 'ಪುಷ್ಪ: ದಿ ರೈಸ್' 2021 ರಲ್ಲಿ ಬಿಡುಗಡೆಯಾಯಿತು, ಅದು ಬಾಕ್ಸ್ ಆಫೀಸ್​​​ನಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಅಂದಹಾಗೆ ಇದು ಆ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಒಂದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net