'ಪುಷ್ಪ 3' ಕುರಿತು ಅಲ್ಲು ಅರ್ಜುನ್​ ಹೇಳಿದ್ದೇನು? ಇಲ್ಲಿದೆ ಮಾಹಿತಿ..

pushpa
Published on

ಹೈದರಾಬಾದ್: ಅಲ್ಲು ಅರ್ಜುನ್ ನಾಯಕನಾಗಿ ನಟಿಸಿರುವ ಮತ್ತು ಸುಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರ 'ಪುಷ್ಪ - ದಿ ರೂಲ್'. ಇದು ಆ.15 ರಂದು ಬಿಡುಗಡೆಯಾಗಲಿದೆ. ಈ ಹಿಂದೆ ಪುಷ್ಪ 3 ಚಿತ್ರದ ಸೀಕ್ವೆಲ್ ಬರಲಿದೆ ಎಂಬ ವರದಿಗಳು ಬಂದಿದ್ದವು. ಪುಷ್ಪಾ: ದಿ ರೈಸ್ ಜರ್ಮನಿಯ ಬರ್ಲಿನ್ ಯುರೋಪರ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಈ ಸಮಾರಂಭದಲ್ಲಿ ಭಾಗವಹಿಸಿದ್ದ ಅಲ್ಲು ಅರ್ಜುನ್ ಸೀಕ್ವೆಲ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

"ವಿದೇಶಗಳಲ್ಲಿ ಪ್ರೇಕ್ಷಕರು ಈ ಚಿತ್ರವನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ನಾವು ನೋಡಬೇಕಾಗಿದೆ. ಅಲ್ಲಿ ಅವರು ಯಾವ ರೀತಿಯ ಚಲನಚಿತ್ರಗಳನ್ನು ನೋಡುತ್ತಾರೆ ಮತ್ತು ಅವರ ಆಲೋಚನೆಗಳು ಏನೆಂದು ನಾವು ಅರ್ಥಮಾಡಿಕೊಳ್ಳಬೇಕು. ಎಲ್ಲವೂ ಸರಿಯಾಗಿ ನಡೆದರೆ ಭಾಗ 3 ಗೆ ಅವಕಾಶವಿದೆ. ನಾವು ಕಥೆಯನ್ನು ಮುಂದುವರಿಸಲು ಬಯಸುತ್ತೇವೆ. ಅದನ್ನು ತೆರೆಗೆ ತರಲು ಉತ್ತಮ ಐಡಿಯಾಗಳಿವೆ.ಮೊದಲ ಭಾಗಕ್ಕೆ ಹೋಲಿಸಿದರೆ ಈ ಚಿತ್ರದ ಪಾತ್ರಗಳ ನಡುವಿನ ಸಂಘರ್ಷವೇ ಹೆಚ್ಚು. ಅದರಲ್ಲೂ ಪುಷ್ಪರಾಜ್ ಮತ್ತು ಭನ್ವರ್ ಸಿಂಗ್ ಶೇಖಾವತ್ ಅವರ ಪಾತ್ರ, ತೆರೆಯ ಮೇಲೆ ಅವರ ನಿರ್ವಹಣೆ ಹಾಗೂ ಎದುರಿಸುವ ಸನ್ನಿವೇಶಗಳು ರೋಚಕ. ಈ ಚಿತ್ರದ ನಂತರ ಅನೇಕ ಆಸಕ್ತಿದಾಯಕ ಯೋಜನೆಗಳು ಸಾಲುಗಟ್ಟಿವೆ. ಪ್ರತಿಯೊಂದು ಚಿತ್ರವೂ ದೊಡ್ಡದಾಗಿದೆ." ಎಂದರು.

ಮತ್ತೊಂದೆಡೆ, ಸಂದರ್ಶನವೊಂದರಲ್ಲಿ ರಶ್ಮಿಕಾ ಪುಷ್ಪ 2 ಬಗ್ಗೆ ಮಾತನಾಡಿದ್ದಾರೆ. ಪುಷ್ಪ 2 ಚಿತ್ರ ಎಲ್ಲರನ್ನೂ ರಂಜಿಸಲಿದೆ ಎಂಬ ಭರವಸೆ ಇದೆ. ಈ ಸಿನಿಮಾದ ಬಗ್ಗೆ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆಗಳಿರುವುದು ನಮಗೆ ಗೊತ್ತಿದೆ. ನಿಮ್ಮ ಕಲ್ಪನೆಗೆ ತಕ್ಕಂತೆ ನಿರ್ಮಿಸಲು ಉತ್ಸುಕರಾಗಿದ್ದೇವೆ. ಪುಷ್ಪ ಇದು ಎಂದಿಗೂ ಮುಗಿಯದ ಕಥೆ. ಇದನ್ನು ಯಾವುದೇ ರೀತಿಯಲ್ಲಿ ಮಾಡಬಹುದು. ಎಂದಿದ್ದಾರೆ.

ಪುಷ್ಪಾ, ದಿ ರೂಲ್ 2021 ರಲ್ಲಿ ಬಿಡುಗಡೆಯಾದ ಸೂಪರ್ ಹಿಟ್ ಚಿತ್ರ. ಪುಷ್ಪ: ದಿ ರೈಜ್​. ಇದರ ಮುಂದುವರಿದ ಭಾಗವಾಗಿ ತೆರೆಗೆ ಬರಲಿರುವುದು 'ಪುಷ್ಪ - ದಿ ರೂಲ್'. ಈ ಚಿತ್ರದ ನಟನೆಗಾಗಿ ಅಲ್ಲು ಅರ್ಜುನ್ ರಾಷ್ಟ್ರೀಯ ಶ್ರೇಷ್ಠ ನಟ ಪ್ರಶಸ್ತಿ ಪಡೆದಿದ್ದು ಗೊತ್ತೇ ಇದೆ. ಫಹದ್ ಫಾಜಿಲ್, ಸುನೀಲ್ ಮತ್ತು ಅನಸೂಯಾ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net