ವಾಕ್ಸಮರಕ್ಕಿಳಿದ ಮೆಗಾ​- ಅಲ್ಲು ಫ್ಯಾನ್ಸ್​..ಪವನ್​ ಎಂಟ್ರಿ! ಮುಂದೇನು?

ap
Published on

AlluArjun, Fans, Trolling, PawanKalyan, Puhpa 2

ಹೈದರಾಬಾದ್​: ಈ ಹಿಂದೆ ಅರಣ್ಯ ರಕ್ಷಿಸುವ ಸಿನಿಮಾಗಳು ಬರುತ್ತಿದ್ದವು. ಆದರೀಗ ಅರಣ್ಯ ಕಡಿದು, ಹೇಗೆ ಕಳ್ಳತನ ಮಾಡಬೇಕು ಎಂಬ ಸಿನಿಮಾಗಳು ಬರುತ್ತಿವೆ ಎಂದು ಉಪಮುಖ್ಯಮಂತ್ರಿ ಪವನ್​ ಕಲ್ಯಾಣ್​ ಅರಣ್ಯ ಕಾರ್ಯಕ್ರಮವೊಂದರಲ್ಲಿ ಹೇಳಿದ್ದೇ ತಡ, ಮೆಗಾಸ್ಟಾರ್​ ಅಭಿಮಾನಿಗಳು ಮತ್ತು ಅಲ್ಲು ಬೆಂಬಲಿಗರ ನಡುವೆ ಟಾಕ್​ವಾರ್ ಶುರುವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಅಲ್ಲು ಅರ್ಜುನ್​ ಮತ್ತು ಪವನ್​ ಕಲ್ಯಾಣ್​ ​ ಪರ -ವಿರೋಧ ವಾಕ್ಸಮರ ನಡೆಯುತ್ತಿದೆ.

ಟ್ವಿಟರ್​ನಲ್ಲಿ ಪವನ್ ಮಾತಿಗೆ ವ್ಯಂಗ್ಯ ಮಾಡಲಾಗುತ್ತಿದೆ. ಇಲ್ಲಿಯವರೆಗೂ ಒಂದು ಲೆಕ್ಕಾಚಾರ, ಇನ್ಮುಂದೆ ಬೇರೆಯದೇ ಲೆಕ್ಕಾಚಾರ.. ಇತ್ಯರ್ಥ ಮಾಡೋಣ ಬನ್ನಿ ಎಂದು ಅಲ್ಲು ಅರ್ಜುನ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

ನಂದ್ಯಾಲ ಧಾರಾವಾಹಿಯಿಂದ ಶುರುವಾದ ಅಲ್ಲು ಮತ್ತು ಮೆಗಾ ವಾಕ್ಸಮರ ಇದೀಗ ಪರಾಕಾಷ್ಠೆ ಹಂತ ತಲುಪಿದೆ. ಆಂಧ್ರಪ್ರದೇಶ ಚುನಾವಣೆಯಲ್ಲಿ ವೈಸಿಪಿ ಅಭ್ಯರ್ಥಿಗೆ ಅಲ್ಲು ಅರ್ಜುನ್ ಬೆಂಬಲ ನೀಡಿದ್ದು, ಚಿರಂಜೀವಿ ಕುಟುಂಬದ ನಾಗಬಾಬು ವ್ಯಂಗ್ಯ, ಸಾಯಿ ಧರಂ ತೇಜ್‌ಗೆ ಅಲ್ಲು ಅರ್ಜುನ್​ ಅನ್‌ಫಾಲೋ ಮಾಡಿರುವುದು, ನಿಹಾರಿಕಾ ಪ್ರತಿಕ್ರಿಯೆ ನೀಡಿದ್ದು ಇಲ್ಲಿಯವರೆಗೆ ಬಿಸಿಬಿಸಿ ಚರ್ಚೆಗೆ ಗ್ರಾಸವೊದಗಿಸಿತ್ತು. ಆದರೆ, ಇದಕ್ಕೆ ಪವನ್ ಕಲ್ಯಾಣ್ ಎಂಟ್ರಿಕೊಟ್ಟಾಗ 'ಮೆಗಾ ಮತ್ತು ಅಲ್ಲು' ವಾಗ್ಯುದ್ಧ ಶುರುವಾಯಿತು. ಸದ್ಯ, ಬನ್ನಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪವನ್ ಕಲ್ಯಾಣ್ ವಿರುದ್ಧ ತಿರುಗಿಬಿದ್ದಿದ್ದಾರೆ.

ಇಲ್ಲಿತನಕ ಮುಸುಕಿನ ಗುದ್ದಾಟದಂತಿದ್ದ ಈ ವಿವಾದ ಇದೀಗ ನೇರ ಅಭಿಮಾನಿಗಳನ್ನು ಸಮರಕ್ಕೆ ಎಳೆತಂದಿದೆ. ಮೆಗಾ ಅಭಿಮಾನಿಗಳು - ಬನ್ನಿ ಅಭಿಮಾನಿಗಳು ಕಾಮೆಂಟ್‌ಗಳಲ್ಲಿ ಜಗಳವಾಡುತ್ತಿದ್ದಾರೆ.

ಇನ್ನು ಪವನ್ ಕಲ್ಯಾಣ್ ಪುಷ್ಪ ಸಿನಿಮಾ ಬಗ್ಗೆ ವ್ಯಂಗ್ಯವಾಡಿದ್ದರೆ, ಪವನ್​ ಸಿನಿಮಾ, ಪಾತ್ರಗಳ ಬಗ್ಗೆ ಅಲ್ಲು ಅರ್ಜುನ್​ ಅಭಿಮಾನಿಗಳು ಸಹ ವ್ಯಂಗ್ಯ ಮಾಡುತ್ತಿದ್ದಾರೆ. ಜಗನ್​ ಪಕ್ಷವಾದ ವೈಸಿಪಿ ಅಭಿಮಾನಿಗಳು ಮತ್ತು ಸಾಮಾಜಿಕ ಮಾಧ್ಯಮ ವಿಭಾಗವು ಅಲ್ಲು ಅಭಿಮಾನಿಗಳಿಗೆ ಸಂಪೂರ್ಣ ಬೆಂಬಲವನ್ನು ನೀಡಿರುವುದು ರಾಜಕೀಯ ಸಮರಕ್ಕೂ ಇದು ವೇದಿಕೆ ಕಲ್ಪಿಸಿಕೊಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net