ಅವರ ಜೀವನವನ್ನು ವೆಬ್​ ಸರಣಿ ಮಾಡುವ ಬಯಕೆ ನನ್ನದು: ಅಲ್ಲು ಅರವಿಂದ್​ | Web Series

ವಿಜಯವಾಣಿ - 2025-02-14T171617.995
Published on

Web Series: ಇತ್ತೀಚೆಗಷ್ಟೇ ತೆರೆಕಂಡ ನಟ ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ಅಭಿನಯದ 'ಥಾಂಡೆಲ್' ಚಿತ್ರ ಸೂಪರ್ ಹಿಟ್ ಸಾಲಿಗೆ ಸೇರಿದ್ದು, ತೆಲುಗು ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಚಂದು ಮೊಂಡೆಟಿ ನಿರ್ದೇಶನದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿಸಿದಂತೆ ಉತ್ತಮ ಗಳಿಕೆ ಕಾಣುತ್ತಿದೆ. ಸಿನಿಮಾ ಉತ್ತಮ ಗೆಲುವು ಕಂಡ ಬೆನ್ನಲ್ಲೇ ಚಿತ್ರತಂಡ ಸಕ್ಸಸ್​ ಪಾರ್ಟಿಯನ್ನು ಮಾಡಿ, ಸಂಭ್ರಮಿಸಿತು.

21.27 ಕೋಟಿ ರೂ. ಕಲೆಕ್ಷನ್ ಮಾಡಿರುವ ಥಾಂಡೆಲ್​, ಬಿಡುಗಡೆಯಾದ ಒಂದು ವಾರಕ್ಕೆ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡುತ್ತಿದೆ. ಪ್ರೇಕ್ಷಕರನ್ನು ರಂಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ನಟಿ ಸಾಯಿ ಪಲ್ಲವಿ ಮತ್ತು ನಾಗಚೈತನ್ಯ, ಬೆಳ್ಳಿ ಪರದೆಯ ಮೇಲೆ ಸಖತ್ ಮೋಡಿ ಮಾಡಿದ್ದಾರೆ. ಚಿತ್ರ ಯಶಸ್ವಿಯಾದ ಹಿನ್ನೆಲೆ ಚಿತ್ರತಂಡ ಶ್ರೀಕಾಕುಳಂನಲ್ಲಿ ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿರ್ಮಾಪಕ ಅಲ್ಲು ಅರವಿಂದ್, ಹಲವು ಕುತೂಹಲಕಾರಿ ವಿಚಾರಗಳನ್ನು ಎಲ್ಲರೊಂದಿಗೆ ಹಂಚಿಕೊಂಡರು.

"ನಾವು ಈ ಸಕ್ಸಸ್​ ಕಾರ್ಯಕ್ರಮವನ್ನು ಕುಸ್ತಿಪಟು ಕೋಡಿ ರಾಮಮೂರ್ತಿ ಅವರ ಕ್ರೀಡಾಂಗಣದಲ್ಲಿ ನಡೆಸುತ್ತಿದ್ದೇವೆ. ಇಡೀ ಭಾರತಕ್ಕೆ ಅವರ ಶ್ರೇಷ್ಠತೆ ತಿಳಿದಿದೆ. ಆದರೆ ಅವರನ್ನು ನೆನಪಿಸಿಕೊಳ್ಳುವ ಅವಶ್ಯಕತೆಯೂ ಇದೆ. ಹಲವು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಜನ್ಮ ತಾಳಿದವರು ರಾಮಮೂರ್ತಿ. ಅವರು ವಿಶ್ವಪ್ರಸಿದ್ಧ ವ್ಯಕ್ತಿ. ಈ ಜಿಲ್ಲೆಗೆ ಅನೇಕ ಹೆಸರುಗಳು ಮತ್ತು ಖ್ಯಾತಿಯನ್ನು ತಂದುಕೊಟ್ಟ ಹಿರಿಮೆ ಅವರದ್ದು. ನಾನು ಅವರ ಇತಿಹಾಸವನ್ನು ಓದಿದಾಗ, ಅದನ್ನು ವೆಬ್ ಸರಣಿಯಾಗಿ ಮಾಡುವ ಆಲೋಚನೆ ಹೊಳೆಯಿತು ಎಂದರು.

"ರಾಮಮೂರ್ತಿ ಅವರು ಸಸ್ಯಾಹಾರಿ ಆಗಿದ್ದರು. ಆದರೂ ಸಹ ತಮ್ಮ ಕೈಗಳಿಂದ ಎರಡು ಕಾರುಗಳನ್ನು ತಡೆದಿದ್ದರು ಎಂಬುದನ್ನು ಕೇಳಿದಾಗ ನನಗೆ ನಿಜಕ್ಕೂ ಆಶ್ಚರ್ಯವಾಯಿತು. ಅವರ ಬದುಕು ಅನೇಕರಿಗೆ ಸ್ಫೂರ್ತಿ. ರಾಮಮೂರ್ತಿ ಜೀವನವನ್ನು ವೆಬ್​ ಸರಣಿಯಾಗಿ ಮಾಡಬೇಕು ಎಂಬ ಉತ್ಸಾಹ ನನ್ನಲ್ಲಿ ಮೂಡಿದೆ" ಎಂದು ಅಲ್ಲು ಅರವಿಂದ್ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net