KL Rahul: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಯಲ್ಲಿ ಭಾರತ ಭರ್ಜರಿ ಜಯ ಸಾಧಿಸಿತು. ಎರಡೂ ಸರಣಿಯನ್ನು ಗೆದ್ದು ಬೀಗಿದ ಟೀಮ್ ಇಂಡಿಯಾಗೆ ಕ್ರಿಕೆಟ್ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ, ಅಭಿನಂದನೆಗಳು ಹರಿದುಬಂದಿತು. ಏಕದಿನ ಸರಣಿಯ ಎರಡು ಪಂದ್ಯಗಳಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ತೋರಿದ ಕಳಪೆ ಪ್ರದರ್ಶನದ ಬಗ್ಗೆ ಇದೀಗ ಇಂಗ್ಲೆಂಡ್ ತಂಡದ ಮಾಜಿ ಬ್ಯಾಟರ್ ಕೆವಿನ್ ಪೀಟರ್ಸನ್ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಭೂಮಿ ಮನುಷ್ಯ ಜೀವನಕ್ಕೆ ಆಧಾರ: ಶ್ರೀಧರ್ ಭಟ್ ಅಭಿಪ್ರಾಯ ಹುಣ್ಣಿಮೆ ಆಚರಣೆ
ಇದೇ ಫೆ.19ರಿಂದ ಪ್ರಾರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿಯನ್ನು ಗಮನದಲ್ಲಿಟ್ಟುಕೊಂಡು ಮಾತನಾಡಿರುವ ಕೆವಿನ್, “ಕೆ.ಎಲ್. ರಾಹುಲ್ ಅವರನ್ನು 6ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಕಳಿಸುತ್ತಿರುವುದು ಸರಿಯಲ್ಲ. ಈ ವಿಷಯದಲ್ಲಿ ಮ್ಯಾನೇಜ್ಮೆಂಟ್ ತನ್ನ ನಿರ್ಧಾರವನ್ನು ಬದಲಿಸಬೇಕು. ಎಡ-ಬಲ ಬ್ಯಾಟಿಂಗ್ ಸಂಯೋಜನೆಯನ್ನು ಕಾಯ್ದುಕೊಳ್ಳುವ ಪ್ರಯತ್ನದಲ್ಲಿ, ಮ್ಯಾನೇಜ್ಮೆಂಟ್ ಅಕ್ಷರ್ ಪಟೇಲ್ ಅವರನ್ನು ಮೊದಲ ಎರಡು ಪಂದ್ಯಗಳಿಗೆ 5ನೇ ಕ್ರಮಾಂಕದಲ್ಲಿ ಆಡಿಸಿತು ಮತ್ತು ರಾಹುಲ್ರನ್ನು ಆರನೇ ಕ್ರಮಾಂಕದಲ್ಲಿ ಆಡಿಸಿತು” ಎಂದರು.
“ಮ್ಯಾನೇಜ್ಮೆಂಟ್ನ ಈ ನಿರ್ಧಾರ ಫಲಿಸಿತು. ಅಕ್ಷರ್ 52 ಮತ್ತು ಅಜೇಯ 41 ರನ್ ಗಳಿಸುವ ಮೂಲಕ ಭಾರತದ ಗೆಲುವಿಗೆ ಕಾರಣರಾದರು. ಆದಾಗ್ಯೂ, ರಾಹುಲ್ 6ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ತೀರ ಪರದಾಡಿದರು. ಮೂರು ಏಕದಿನ ಪಂದ್ಯಗಳ ಪೈಕಿ ಎರಡೂ ಇನ್ನಿಂಗ್ಸ್‌ಗಳಲ್ಲಿ ಕೇವಲ 12 ರನ್‌ಗಳನ್ನು ಮಾತ್ರ ಗಳಿಸಲು ಶಕ್ತರಾದರು. ಆದರೆ, ಮೂರನೇ ಸರಣಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, ರಾಹುಲ್ರನ್ನು 5ನೇ ಕ್ರಮಾಂಕದಲ್ಲಿ ಆಡಲು ಬಡ್ತಿ ನೀಡಿತು. 29 ಎಸೆತಗಳಲ್ಲಿ 40 ರನ್ ಬಾರಿಸುವ ಮೂಲಕ ರಾಹುಲ್ ಕಮ್ಬ್ಯಾಕ್ ಮಾಡಿದರು” ಎಂದರು.
ಇದನ್ನೂ ನೋಡಿ: DK Suresh Press Meet | ಸಾಲದ ಹೊರೆಯನ್ನ ಜನರ ಮೇಲೆ ಹಾಕ್ತಿರೋದು ಕೇಂದ್ರ ಸರ್ಕಾರನೇ
“ನಾನು ಕೆ.ಎಲ್. ರಾಹುಲ್ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದನ್ನು ಇಷ್ಟಪಡುತ್ತೇನೆ. ಕಾರಣ, ಅವರು ಕ್ರೀಸ್ಗೆ ಬಂದ ತಕ್ಷಣ ಸೆಟಲ್ ಆಗಲು ಸಮಯ ತೆಗೆದುಕೊಳ್ಳುತ್ತಾರೆ. ಏಕಾಏಕಿ ಬಾರಿಸಲು ಮುಂದಾಗುವುದಿಲ್ಲ. ಕೆಲವೇ ಓವರ್‌ಗಳು ಬಾಕಿ ಉಳಿದಿರುವಾಗ ಅಖಾಡಕ್ಕೆ ಬಂದು ಅಬ್ಬರದ ಬ್ಯಾಟಿಂಗ್ ಮಾಡುವ ಬ್ಯಾಟರ್ ರಾಹುಲ್ ಅಲ್ಲ. ಅವರಿಗೆ ಒಂದಷ್ಟು ಸಮಯದ ಅಗತ್ಯತೆ ಇದೆ. ಹೀಗಾಗಿ ಅವರಿಗೆ ಐದನೇ ಕ್ರಮಾಂಕ ಸೂಕ್ತ. ಮ್ಯಾನೇಜ್ಮೆಂಟ್ ಕೂಡ ಅವರನ್ನು ಐದನೇ ಸ್ಲಾಟ್ನಲ್ಲಿ ಆಡಿಸುವುದೇ ಉತ್ತಮ” ಎಂದು ಹೇಳಿದರು,(ಏಜೆನ್ಸೀಸ್).
ಶೀಘ್ರವೇ ಆರ್ಬಿಐನಿಂದ ಹೊಸ 50 ರೂ. ನೋಟು ರಿಲೀಸ್! ಈ ನಿರ್ಧಾರದಿಂದ ಹಳೆಯ ನೋಟುಗಳ ಗತಿ ಏನು? ಇಲ್ಲಿದೆ ಉತ್ತರ | RBI