ಭೂಮಿ ಮನುಷ್ಯ ಜೀವನಕ್ಕೆ ಆಧಾರ: ಶ್ರೀಧರ್ ಭಟ್ ಅಭಿಪ್ರಾಯ ಹುಣ್ಣಿಮೆ ಆಚರಣೆ

New Project (11)
Published on

ಬೆಳ್ತಂಗಡಿ: ರತ್ನಮಾನಸ ಜೀವನ ಶಿಕ್ಷಣ ವಸತಿ ನಿಲಯದಲ್ಲಿ ಭೂಮಿ ಹುಣ್ಣಿಮೆ ಆಚರಿಸಲಾಯಿತು.

ಶ್ರೀ.ಧ.ಮಂ ಪದವಿ ಕಾಲೇಜಿನ ಸಂಸ್ಕೃತ ಮುಖ್ಯಸ್ಥ ಶ್ರೀಧರ್ ಭಟ್ ಮಾತನಾಡಿ, ಭೂಮಿ ನಮ್ಮ ಬದುಕಿಗೆ ಆಧಾರವಾಗಿದೆ. ಗಿಡಮರ ಬೆಳೆಯಲು, ಒಳ್ಳೆಯ ಫಲ ನೀಡಲು ಮಣ್ಣು ಬೇಕು. ಈ ಭೂಮಿ ಹುಣ್ಣಿಮೆಯಂದು ಭೂಮಿ ತಾಯಿ ಪೂಜೆಯನ್ನು ಹಿಂದಿನಿಂದಲೂ ಮಾಡುತ್ತಾ ಬಂದಿರುತ್ತಾರೆ. ಇಂದಿನಿಂದ ಭೂಮಿ ತಾಯಿ ಫಲವತ್ತತೆಗೆ ತಯಾರಾಗಿದ್ದಾಳೆ ಎಂಬ ಮಾತಿದೆ. ಈ ಸಂಪ್ರದಾಯ ಮುಂದಿನ ಪೀಳಿಗೆಗೆ ಹೇಳಿಕೊಡಬೇಕು ಎಂದರು.

ರತ್ನಮಾನಸ ವಸತಿ ನಿಲಯ ಪಾಲಕ ಯತೀಶ್ ಕೆ.ಬಳಂಜ ಮಾತನಾಡಿ, ಈ ದಿನ ಭೂಮಿ ತಾಯಿ ಋತುಮತಿ ಆಗುವ ದಿನ. ಈ ದಿನ ಭೂಮಿಗೆ ಯಾವುದೇ ತೊಂದರೆಯಾಗುವ ಕೆಲಸ ಮಾಡಬಾರದು ಎಂದು ಹೇಳುತ್ತಾರೆ. ಭೂಮಿ ತಾಯಿಗೆ ನಮಸ್ಕರಿಸಿ ಕ್ಷಮೆ ಕೇಳಬೇಕು ಎಂದರು.

ವಿದ್ಯಾರ್ಥಿಗಳು ರತ್ನಮಾನಸದ ಎದುರುಗಡೆ ಸೆಗಣಿ ಸಾರಿಸಿ ಭೂಮಿಗೆ ಎಣ್ಣೆ ಹೊಯ್ದು ಕುಂಕುಮ, ಧೂಪ, ದೀಪ ಇಟ್ಟು, ಅಕ್ಕಿ ಮತ್ತು ಹುರುಳಿಯಿಂದ ಮಾಡಲಾದ ಪುಡಿ(ನನ್ನರಿ), ಗೋಳಿ ಎಲೆಯಿಂದ ಮಾಡಲಾದ ಕಡಬು ಇಟ್ಟು ಪೂಜಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net