

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ತುಳುನಾಡಿನವರು ಸತ್ಯವನ್ನು ಆರಾಧನೆ ಮಾಡುವವರು. ಪ್ರಕೃತಿ, ಕೃಷಿ, ಪಶು ಸಂಗೋಪನೆ ಇಲ್ಲದೆ ದೈವಾರಾಧನೆ ಇಲ್ಲ. ಹಾಗಾಗಿಯೇ ಇಲ್ಲಿನ ದೈವಾರಾಧನೆ ಮಹತ್ತರವಾದುದು ಎಂದು ತುಳು ಸಾಹಿತ್ಯ ವಿದ್ವಾಂಸ ದಯಾನಂದ ಕತ್ತಲ್ಸಾರ್ ಹೇಳಿದರು.
ಗುರುವಾಯನಕೆರೆ ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಬ್ರಹ್ಮಕುಂಭಾಭಿಷೇಕ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ಯಾವುದೇ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುವಾಗ ನಮ್ಮ ವಸ್ತ್ರಸಂಹಿತೆಯ ಬಗೆಗೆ ಗಮನ ಇರಬೇಕು. ನಾಗಾರಾಧನೆಯ ಬನದಲ್ಲಿ ಕಾಂಕ್ರೀಟ್ ಕಟ್ಟೆ ಬಂದಿದೆ. ಗೋವಿನ ಕೆಚ್ಚಲು ಕೊಯ್ಯುವ ವಿಕೃತಕಾರಿ ಸಮಾಜ ಸೃಷ್ಟಿಯಾಗಿರುವುದು ಸಮಾಜದ ಘೋರ ದುರಂತ. ಅನ್ನದಾನ ಪರಮ ಶ್ರೇಷ್ಠ, ಆದರೆ ಬಫೆ ವ್ಯವಸ್ಥೆ ಬಂದಿರುವುದು ಹಿಂದು ಸಮಾಜಕ್ಕೆ ಅಂಟಿದ ಮಹಾಪಾಪ ಎಂದರು.
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿದರು. ದೈವಸ್ಥಾನದ ಆಡಳಿತ ಮೊಕ್ತೇಸರ ಸುಕೇಶ್ ಕುಮಾರ್ ಕಡಂಬು, ಬ್ರಹ್ಮಕುಂಭಾಭಿಷೇಕ ಕಾರ್ಯಾಧ್ಯಕ್ಷ ಸುಮಂತ್ ಕುಮಾರ್ ಜೈನ್, ಸಂತೋಷ್ ಕುಮಾರ್ ಜೈನ್ ಪಡಂಗಡಿ, ರಾಜು ಶೆಟ್ಟಿ ಬೆಂಗತ್ಯಾರು, ಜಯಂತ್ ಶೆಟ್ಟಿ ಭಂಡಾರಿಗುಡ್ಡೆ, ಗೋಪಾಲ ಶೆಟ್ಟಿ ಕೊರ್ಯಾರು, ಗಂಗಾಧರ ಆಚಾರ್ಯ ಗುರುವಾಯನಕೆರೆ, ಸತ್ಯಶಂಕರ ಭಟ್ ಅರಮಲೆಬೆಟ್ಟ, ರಾಜಪ್ಪ ಶೆಟ್ಟಿ ಸುದೆಕ್ಕಾರ್, ಪ್ರದೀಪ್ ಶೆಟ್ಟಿ ಸಾಯಿರಾಂ, ವಿಠಲ ಶೆಟ್ಟಿ ಪಾಡ್ಯಾರು, ನಿರಂಜನ ಮಲ್ಲಿ ಸುದೆಕ್ಕಾರ್, ಪ್ರಭಾಕರ ಬಂಗೇರ ಪಡಿಪ್ಪಿರೆ, ಸಚಿನ್ ಶೆಟ್ಟಿ ಕಜೆ ಉಪಸ್ಥಿತರಿದ್ದರು. ಬ್ರಹ್ಮಕುಂಭಾಭಿಷೇಕ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ ಸ್ವಾಗತಿಸಿದರು. ಪ್ರಜ್ವಿತ್ ರೈ ಕಾರ್ಯಕ್ರಮ par ನಿರೂಪಿಸಿದರು.
ದೇವರು ಎಂಬ ನಂಬಿಕೆಯೇ ಭಾರತವನ್ನು ಕಾಪಾಡುತ್ತಾ ಬಂದಿದೆ. ಈ ದೇಶದ ಆಧ್ಯಾತ್ಮಿಕ ಶಕ್ತಿ ಅಪಾರ. ಅತ್ಯಂತ ಶ್ರೀಮಂತ ಆಧ್ಯಾತ್ಮಿಕ ಚಿಂತನೆಯನ್ನು ನಮ್ಮ ಹಿರಿಯರು, ಸಾಧು ಸಂತರು ಕೊಟ್ಟಿದ್ದಾರೆ. ಹಾಗಾಗಿಯೇ ಜಾತಿ, ಮತ ಭೇದವಿಲ್ಲದೆ ಭಕ್ತಿ-ಭಾವದ ಸಂಗಮವನ್ನು ಕುಂಭ ಮೇಳದಲ್ಲಿ ನೋಡುತ್ತಿದ್ದೇವೆ. ಪ್ರತಾಪಸಿಂಹ ನಾಯಕ್ ವಿಧಾನ ಪರಿಷತ್ ಸದಸ್ಯ https://www.vijayavani.net/mangalore-madusoodana-kushe-college-sendoff https://www.vijayavani.net/areca-growers