

ಬೆಂಗಳೂರು: ರಾತ್ರಿ 2 ಗಂಟೆವರೆಗೆ ರೆಸ್ಟೋರೆಂಟ್, ಬಾರ್, ಪಬ್ ತೆರೆಯಲು ಅನುಮತಿ ನೀಡುವಂತೆ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್ ಅವರಿಗೆ ಹೋಟೆಲ್ ಮಾಲೀಕರ ಸಂಘ ಮನವಿ ಮಾಡಿದೆ.
ಪಬ್ ಮತ್ತು ಬಾರ್ ಆ್ಯಂಡ್ ರೆಸ್ಟೋರೆಂಟ್ ತೆರೆದಿಡಲು ಪ್ರಸ್ತುತ ನೀಡಿರುವ ಅವಧಿಯನ್ನು ಒಂದು ಗಂಟೆಗಳ ಕಾಲ ಹೆಚ್ಚುವರಿ ಮಾಡಬೇಕು ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಬಾಡಿಗೆ, ಗ್ಯಾಸ್, ಸಿಬ್ಬಂದಿ ನಿರ್ವಹಣೆಗೆ ಹೆಚ್ಚು ವೆಚ್ಚ ಭರಿಸುತ್ತಿದ್ದೇವೆ. ಶೇ.೧೮ ಹೆಚ್ಚಳ ಜಿಎಸ್‌ಟಿ ಕಟ್ಟುತ್ತಿದ್ದೇವೆ. ಉದ್ಯಮಕ್ಕೆ ಲೈಸೆನ್ಸ್ ಪಡೆಯುವ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ. ಹೀಗಾಗಿ ಮಧ್ಯರಾತ್ರಿ ೨ ಗಂಟೆವರೆಗೆ ಅವಧಿ ವಿಸ್ತರಣೆಗೆ ಹೋಟೆಲ್ ಮಾಲೀಕರ ಸಂಘ ಮನವಿ ಮಾಡಿದೆ.
ಈಜಿ ಆ್ ಡೂಯಿಂಗ್ ಬಿಜಿನೆಸ್ ಅಡಿಯಲ್ಲಿ ಎಲ್ಲಾ ಲೈಸನ್ಸ್‌ಗಳಿಗೆ ಸಿಂಗಲ್ ವಿಂಡೋ ಕ್ಲಿಯರೆನ್ಸ್‌ಗೆ ಅವಕಾಶ ಕೊಡಬೇಕು. ಟ್ರೇಡ್, ಎ್ಎಸ್‌ಎಸ್‌ಎಐ ಲೈಸನ್ಸ್‌ಗಳನ್ನು ಒಂದೇ ಬಾರಿ ತೆಗೆದುಕೊಳ್ಳುವಂತೆ ಮಾಡಬೇಕು. ೨೪/೭ ತೆರೆದಿಡಲು ಅಗತ್ಯವಿರುವ ಅನುಮತಿ ನೀಡಬೇಕು. ನಮ್ಮ ಉದ್ಯಮಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಕನಿಷ್ಠ ಆರು ತಿಂಗಳಿಗೊಮ್ಮೆ ಸಭೆ ನಡೆಸಿ ವಿಚಾರ ವಿನಿಮಯ ಮಾಡಬೇಕು ಸೇರಿದಂತೆ ಮತ್ತಿತರ ಬೇಡಿಕೆಗಳಿಗೆ ಮನವಿ ಮಾಡಿದ್ದಾರೆ.
ಡಿಸಿಎಂಗೂ ಪತ್ರ ಬರೆದಿದ್ದರು:
ಬಿಬಿಎಂಪಿ ವ್ಯಾಪ್ತಿಯ ಪಬ್‌ಗಳು, ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ಮುಚ್ಚುವ ಸಮಯವನ್ನು ವಿಸ್ತರಿಸುವಂತೆ ಹೋಟೆಲ್ ಅಸೋಸಿಯೇಷನ್ ಜು. ೮ ರಮದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಪತ್ರ ಬರೆದು ಮನವಿ ಮಾಡಿತ್ತು.
ಎಲ್ಲ ಹೋಟೆಲ್ಗಳ ಪ್ರಸ್ತುತ ಮುಚ್ಚುವ ಸಮಯವನ್ನು ಮಧ್ಯರಾತ್ರಿ ೧ ಗಂಟೆಗೆ ಮಿತಿಗೊಳಿಸಲಾಗಿದೆ. ಸುಮಾರು ೮ ರಿಂದ ೧೦ ತಿಂಗಳ ಹಿಂದೆ ಎಲ್ಲಾ ಹೋಟೆಲ್ಗಳಿಗೆ, ವಿಶೇಷವಾಗಿ ಆಸ್ಪತ್ರೆಗಳು ಮತ್ತು ವಿಮಾನ ನಿಲ್ದಾಣಗಳ ಬಳಿ ಇರುವವರಿಗೆ ೨೪/೭ ಸಮಯ ತೆರೆದಿಡಲು ವಿನಂತಿ ಮಾಡಿಕೊಂಡಿದ್ದೆವು. ಸಾಮಾನ್ಯವಾಗಿ ತಡರಾತ್ರಿಯವರೆಗೆ ಪ್ರಯಾಣಿಸುವ ಗ್ರಾಹಕರಿಗೆ ಸೇವೆ ನೀಡಲು ಪ್ರಸ್ತುತ ಸಮಯವನ್ನು ೧ ಗಂಟೆಗೆ ಹೆಚ್ಚಿಸುವಂತೆ ನಾವು ಕೇಳಿಕೊಳ್ಳುತ್ತಿದ್ದೇವೆ ಎಂದು ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿ. ಸಿ ರಾವ್ ತಿಳಿಸಿದ್ದಾರೆ.
ಬೆಂಗಳೂರು ನಗರಕ್ಕೆ ವಿದೇಶಿ ಪ್ರಯಾಣಿಕರು, ವಿದೇಶಿ ಅತಿಥಿಗಳು ಹೆಚ್ಚಾಗಿ ಬರುತ್ತಾರೆ. ಕೆಲವು ಸಮಯದಲ್ಲಿ ವಿಮಾನಗಳು ತಡವಾಗಿ ಬರುತ್ತದೆ. ಅವರು ಆ ಸಮಯದಲ್ಲಿ ಊಟ ಮತ್ತು ಮದ್ಯಕ್ಕೆ ಬೇಡಿಕೆ ಇಡುತ್ತಾರೆ. ಹೀಗಾಗಿ ಪ್ರಸ್ತುತ ನೀಡಿರುವ ಅವಧಿಯನ್ನು ಒಂದು ಗಂಟೆಗಳ ಕಾಲ ಹೆಚ್ಚುವರಿ ಮಾಡಬೇಕು. ಇದರಿಂದ ಯಾರಿಗೂ ತೊಂದರೆಯಾಗುವುದಿಲ್ಲ. ಸರ್ಕಾರಕ್ಕೆ ಹೆಚ್ಚಿನ ಆದಾಯ ಬರುತ್ತದೆ. ಈ ಸಂಬಂಧ ಸದ್ಯದಲ್ಲಿಯೇ ಡಿಸಿಎಂ ಭೇಟಿಯಾಗುತ್ತೇವೆ.
-ಪಿ.ಸಿ ರಾವ್, ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ