ಸಂಸದರ ಮೇಲೆ ಹಲ್ಲೆ ಆರೋಪ; ರಾಹುಲ್​ ಗಾಂಧಿ ವಿರುದ್ಧ ತನಿಖೆಗೆ ವಿಶೇಷ ತಂಡಗಳು ರಚನೆ! | Rahul Gandhi

dk (42)
Published on

ನವದೆಹಲಿ: ಸಂಸತ್​ ಆವರಣದಲ್ಲಿ ನಡೆದ ಗಲಾಟೆಯಲ್ಲಿ ಬಿಜೆಪಿ ಸಂಸದರ ಮೇಲೆ ವಿಪಕ್ಷ ನಾಯಕ ರಾಹುಲ್​ ಗಾಂಧಿ ಹಲ್ಲೆ(Rahul Gandhi) ಮಾಡಿ ಗಾಯಗೊಳಿಸಿದ್ದಾರೆ ಎಂಬ ಆರೋಪದ ಮೇಲಿನ ಪ್ರಕರಣದ ತನಿಖೆಯನ್ನು ನಡೆಲು ವಿಶೇಷ ತನಿಖಾ ತಂಡಗಳು ರಚಿಸಲಾಗಿದೆ ಎಂದು ವರದಿಯಾಗಿದೆ.

ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ವಿವಾದತ್ಮಾಕ ಹೇಳಿಕೆ ನೀಡಿದ್ದಾರೆ ಎಂದು ಶಾ ವಿರುದ್ಧ ಕಾಂಗ್ರೆಸ್​ ನಾಯಕರು, ಪ್ರತಿಭಟನೆ ನಡೆಸುವ ವೇಳೆ ರಾಹುಲ್​ ಗಾಂಧಿ ವಿರುದ್ಧ 'ದೈಹಿಕ ಹಲ್ಲೆ ಮತ್ತು ಪ್ರಚೋದನೆ'' ಆರೋಪದ ಮೇಲೆ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ.

''ಈ ಪ್ರಕರಣದ ಸಂಬಂಧ ದೆಹಲಿ ಕ್ರೈಬ್ರಾಂಚ್​ ಪೊಲೀಸರು ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದಾರೆ. ಪ್ರತ ತಂಡಗಳಲ್ಲಿ ಏಳು ಸದಸಸ್ಯರಿದ್ದು, ಸಹಾಯಕ ಪೊಲೀಸ್​ ಆಯುಕ್ತ, ಇಬ್ಬರು ಇನ್ಸ್​ಪೆಕ್ಟರ್​ಗಳು ಮತ್ತು ಮೂವರು ಸಬ್​ ಇನ್ಸ್​ಪೆಕ್ಟರ್​ಗಳು ಒಳಗೊಂಡಿದ್ದಾರೆ. ಈ ತಂಡಗಳು ವರದಿಯನ್ನು ನೇರವಾಗಿ ಪೊಲೀಸ್​ ಉಪ ಆಯುಕ್ತರಿಗೆ ಸಲ್ಲಿಸುತ್ತದೆ ಎಂದು ವರದಿಗಳು ಉಲ್ಲೇಖಿಸಿವೆ''.

ಈ ಪ್ರಕರಣದಲ್ಲಿ ಇಬ್ಬರು ಬಿಜೆಪಿ ಸಂಸದರಾದ ಪ್ರತಾಪ್​ ಸಾರಂಗಿ ಮತ್ತು ಮುಖೇಶ್​ ರಜಪೂತ್​ ಅವರು ಸಂಸತ್ತಿನಲ್ಲಿ ನಡೆದ ಗದ್ದಲದಲ್ಲಿ ಗಾಯಗೊಂಡಿದ್ದರು. ಈ ಇಬ್ಬರನ್ನು ಚಿಕಿತ್ಸೆಗೆಗಾಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಇಬ್ಬರ ಸಂಸದರ ಗಾಯಗಳಿಗೆ ರಾಹುಲ್​ ಗಾಂಧಿಯೇ ನೇರ ಕಾರಣ ಎಂದು ಬಿಜೆಪಿ ಆರೋಪಿಸಿದೆ.

ಇತ್ತ ಗದ್ದಲಕ್ಕೆ ಕಾರಣ ಬಿಜೆಪಿಯೇ ಎಂದು ಆರೋಪಿಸಿರುವ ಕಾಂಗ್ರೆಸ್​. ಬಿಜೆಪಿ ನಾಯಕರು ಮಲ್ಲಿಕಾರ್ಜುನ್​ ಖರ್ಗೆ ಅವರನ್ನು ತಳ್ಳಿದ್ದಾರೆ. ಅವರ ಮೊಣ ಕಾಲಿಗೆ ಗಾಯವಾಗಿದೆ ಎಂದು ಆರೋಪಿಸಿದೆ. ಬಳಿಕ ಎರಡು ಪಕ್ಷ ನಾಯಕರು ಪೊಲೀಸ್​ ಠಾಣೆಯಲ್ಲಿ ಪರಸ್ಪರ ದೂರು ನೀಡಿದ್ದಾರೆ,(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net