

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಘನ್ಯತಾಜ್ಯವನ್ನು ಅಕ್ರಮವಾಗಿ ಅನ್ಯ ರಾಜ್ಯಕ್ಕೆ ಮಾರಾಟ ಆರೋಪದಡಿ ಐವರ ವಿರುದ್ಧ ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ಎ್ಐಆರ್ ದಾಖಲಾಗಿದೆ.
ಹರ್ಷಿದ್, ಸಂತೋಷ್, ಮಲ್ಲೇಶಪ್ಪ, ಕೆಂಪಯ್ಯ, ಶಿವಕುಮಾರ್ ವಿರುದ್ಧ ದೂರು ದಾಖಲಾಗಿದೆ.
ಸಾಮಾಜಿಕ ಕಾರ್ಯಕರ್ತ ರಾಮಲಿಂಗಾ ರೆಡ್ಡಿ ಎಂಬುವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿ ಹರ್ಷಿದ್ ಬಂಧಿಸಿ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೈಸ್ ರಸ್ತೆ ಸಮೀಪದ ವಿಟ್ಟಸಂದ್ರದಲ್ಲಿ ಬಿಬಿಎಂಪಿಯ ಅನುಮತಿ ಇಲ್ಲದೆ ಕಾನೂನು ಬಾಹಿರವಾಗಿ
ನಾಲ್ಕು ಚಿಕ್ರದ ೫ ವಾಹನಗಳನ್ನು ಬಳಸಿ ಬೊಮ್ಮನಹಳ್ಳಿ ವಲಯದ ೧೬ ವಾರ್ಡ್‌ಗಳಲ್ಲಿನ ಅಂದಾಜು ೮೦೦ ಅಂಗಡಿಗಳಿಂದ ಪ್ರಾಣಿ ತ್ಯಾಜ್ಯವನ್ನ ಸಂಗ್ರಹಿಸಿ, ಅದನ್ನು ಆಂಧ್ರ ಪ್ರದೇಶದ ಕ್ಯಾಂಟರ್ ವಾಹನದ ಮೂಲಕ ಹೊರ ರಾಜ್ಯಕ್ಕೆ ಸಾಗಿಸುತ್ತಿದ್ದವರ ಮಾಹಿತಿ ಪಡೆದು ೧೧೨ ಸಂಖ್ಯೆಗೆ ಕರೆ ಮಾಡಿ ವಿಷಯ ತಿಳಿಸಲಾಯಿತು. ಬಿಬಿಎಂಪಿ ಇಲಾಖೆಯಿಂದ ಅಧಿಕೃತವಾಗಿ ಸೇವಾದಾರರಾದ ಆದೇಶ ಪತ್ರ ಇಲ್ಲದೆ ವಾಹನಗಳಿಗೆ ಬಿಬಿಎಂಪಿ ಎಂದು ಸ್ಟಿಕರ್ ಅಂಟಿಸಿದ್ದರು. ಬಿಬಿಎಂಪಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಬೆಂಗಳೂರು ಆಗೋ ಪ್ರೋಟೀನ್‌ನ ಹರ್ಷಿದ್ ಕೋಳಿ ಅಂಗಡಿಗಳಿಂದ ಸಂಗ್ರಹಿಸಿದ ಪ್ರಾಣಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ರೆಂಡರಿಂಗ್ ಮಾಡದೆ ಹೊರ ರಾಜ್ಯಕ್ಕೆ ಸಾಗುತ್ತಿದ್ದರು. ಈ ರೀತಿಯ ಅಕ್ರಮದಲ್ಲಿ ತೊಡಗಿದ್ದವರ ಮೇಲೆ ಕ್ರಮ ಜರುಗಿಸುವಂತೆ ದೂರಿನಲ್ಲಿ ಸಾಮಾಜಿಕ ಕಾರ್ಯಕರ್ತ ರಾಮಲಿಂಗಾ ರೆಡ್ಡಿ ಮನವಿ ಮಾಡಿದ್ದರು. ದೂರಿನ ಆಧಾರದ ಮೇಲೆ ಆರೋಪಿ ಹರ್ಷಿದ್‌ನನ್ನು ಬಂಧಿಸಿ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.