ರಾಜ್ಯದಲ್ಲಿ ನೆಲೆಸಿರುವವರೆಲ್ಲ ಕನ್ನಡಿಗರೇ, ಕನ್ನಡ ನೆಲ,ಜಲ ಬಳಸುತ್ತಿರುವ ಹೊರ ರಾಜ್ಯದವರು ಪ್ರಪಂಚಕ್ಕೆ ಕನ್ನಡ ಸಂಸ್ಕೃತಿಯ ಮಹತ್ವ ಸಾರಬೇಕು. ವಾಸ್ತು ತಜ್ಞ ಗಜೇಂದ್ರ ಬಾಬು ಸಲಹೆ

New Project (6)
Published on

ಬೆಂಗಳೂರು: ಹೊರ ರಾಜ್ಯದಿಂದ ಬಂದು ಕರ್ನಾಟಕದಲ್ಲಿ ನೆಲೆಸಿರುವ ಎಲ್ಲರು ಕನ್ನಡಿಗರೇ ಹಿಗಾಗಿ ಕನ್ನಡ ಭಾಷೆ ನೆಲ,ಜಲ,ನಾಡಿನ ಹಿರಿಮೆಯನ್ನು ತಾವೇಲ್ಲರೂ ಅರಿಯಬೇಕು ಎಂದು ಖ್ಯಾತ ಜ್ಯೋತಿಷ್ಯ ತಜ್ಞ ಗಜೇಂದ್ರ ಬಾಬು ತಿಳಿಸಿದ್ದಾರೆ.

ಮಹದೇವಪುರ ಕ್ಷೇತ್ರದ ಮಂಡೂರು ವ್ಯಾಪ್ತಿಯ ನಿಂಬೆಕಾಯಿ ಪುರದಲ್ಲಿ ಪೃಕ್ಸ್ಸಾ ಸಿಲ್ವಾನಾ ಕನ್ನಡ ಅಭಿಮಾನಿಗಳ ಸಂಘದ ಆಯೋಜಸಿದ್ದ 70ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ರಾಜ್ಯದಲ್ಲಿ ಕೇವಲ ಕನ್ನಡಿಗರು ಮಾತ್ರ ನೆಲಸಿಲ್ಲ,ನಾನಾ ರಾಜ್ಯಗಳಿಂದ ಲಕ್ಷಾಂತರ ಜನರು ಇಲ್ಲಿಗೆ ಬಂದು ಬದುಕು ಕಟ್ಟಿಕೊಂಡಿದ್ದಾರೆ. ಕನ್ನಡಿಗರು ಕರುಣಾಮಹಿಗಳಾದ್ದರಿಂದ ರಾಜ್ಯದಲ್ಲಿ ಹೊರ ರಾಜ್ಯಗಳಿಂದ ಬಂದವರಿಗೆ ಸ್ವತಂತ್ರವಾಗಿ ಬದುಕು ಅವಕಾಶ ಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಕನ್ನಡವನ್ನು ಕಡ್ಡಾಯವಾಗಿ ತಾವುಗಳು ಮತ್ತು ತಮ್ಮ ಮಕ್ಕಳು ಕಲಿಯುವುದು ಅವಶ್ಯಕ ಎಂದು ಹೇಳಿದರು.

ಪ್ರತಿ ಭಾನುವಾರ ಉಚಿತ ಕನ್ನಡ ತರಗತಿಗಳನ್ನು ಹಮ್ಮಿಕೊಂಡು ಪ್ರೆಸ್ಟೀ ಟ್ಯಾಂಕ್ ಕ್ವಾಲಿಟಿ ಹಾಗೂ ಪೃಸ್ಕಾ ಸಮುದಾಯದ 500ಕ್ಕೂ ಹೆಚ್ಚು ಕನ್ನಡೇತರರಿಗೆ ಕನ್ನಡ ಕಲಿಸುವಲ್ಲಿ ಯಶಸ್ವಿಯಾಗಿದ್ದೇವೆ. ಮುಂದಿನ ನವಂಬರ್ ಹೊತ್ತಿಗೆ ಒಂದು ಸಾವಿರ ಕನ್ನಡೆತರರಿಗೆ ಕನ್ನಡ ತರಗತಿಗಳನ್ನು ನಡೆಸಿ ಕನ್ನಡ ಭಾಷೆಯನ್ನು ಕಲಿಸುವ ಯೋಜನೆ ರೂಪಿಸಿಕೊಂಡಿದ್ದೇವೆ. ಇದಕ್ಕೆ ಇಲ್ಲಿನ ಕನ್ನಡ ಸಂಘ ಸಂಪೂರ್ಣ ಬೆಂಬಲ ನೀಡಿರುವುದು ಸಂತಸದ ವಿಷಯ ಎಂದು ಹೇಳಿದರು.

ನಮ್ಮ ನಾಡು ಕನ್ನಡ ನಮ್ಮ ನುಡಿಯು ಕನ್ನಡ ನಮ್ಮ ಜಲವು ಕಾವೇರಿ ಹಾಗೂ ನಮ್ಮ ಬೆಂಗಳೂರು ಕನ್ನಡ ಮಯವಾಗಿ ಭಾರತದ ಆತ್ಮ ಎಂದು ಪ್ರಜ್ವಲಿಸಲು ನಾವೆಲ್ಲರೂ ಕನ್ನಡ ನಾಡಿನ ಹಿರಿಮೆಯನ್ನು ಇಡೀ ಭೂಮಂಡಲಕ್ಕೆ ಪ್ರಜ್ವಲಿಸುವಂತೆ ಮಾಡಬೇಕು ಎಂದರು.

ನಮ್ಮ ಕನ್ನಡ ನಾಡು ಧೀರರ ಖ್ಯಾತಿಯೂ ಜ್ಞಾನದ ಜ್ಯೋತಿಯು ಬೆಳಗಿದ ನಾಡು ಈ ಚರಿತ್ರೆಯನ್ನು ಈ ನಾಡಿನ ಗತವೈಭವದ ವಿಚಾರಗಳನ್ನು ಅದರಲ್ಲಿಯೂ ವಿಜಯನಗರ ಸಾಮ್ರಾಜ್ಯ ಹಕ್ಕ ಬುಕ್ಕರ ಆಳ್ವಿಕೆ ನಮಗೆ ಕೈಗನ್ನಡಿಯಂತಿದೆ. ಭಾರತದ ಅಧಿರಾಜತ್ವವನ್ನು ಕರ್ನಾಟಕದ ಮುಡಿಗೇರಿದ ವೀರ ಕಲಿಗಳಾದ ಮುನ್ನುಡಿ ಗೋವಿಂದ ಅಕ್ಕ ಬುಕ್ಕರು ಕರುನಾಡಿನ ಕಲೆ ಮತ್ತು ವಾಸ್ತು ಶಿಲ್ಪಕ್ಕೆ ವೈಭವ ತಂದ ವಿಷ್ಣುವರ್ಧನ, ಮೈಸೂರು ಒಡೆಯರರು ಮತ್ತು ಬೆಂಗಳೂರು ಕಟ್ಟಿ ಬೆಳೆಸಿದ ನಮ್ಮ ಕೆಂಪೇಗೌಡರು ಇವರೆಲ್ಲರ ಪರಿಚಯವನ್ನು ನಾವುಗಳು ಈ ಭಾರತಕ್ಕೆ ತಿಳಿಸುವುದಲ್ಲದೆ ಪ್ರಪಂಚಾದ್ಯಂತ ನಮ್ಮ ಕನ್ನಡದ ಕೀರ್ತಿಯನ್ನು ಬೆಳಗಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಎಂದ ಅವರು

ಕರುನಾಡು ಅಲ್ಲಮ್ಮ,ಬಸವಣ್ಣ,ಅಕ್ಕಮಹಾದೇವಿ,ದಾಸರು,ಶರಣರು,ಶರೀಫರು,ಸರ್ವಜ್ಞರು, ಕಿತ್ತೂರು ರಾಣಿ ಚೆನ್ನಮ್ಮ,ವಿಶ್ವೇಶ್ವರಯ್ಯ ಮತ್ತು ಕುವೆಂಪು ಹೀಗೆ ಅನೇಕ ಹಿರಿಯ ಆತ್ಮಗಳು ನಮ್ಮ ಕರುನಾಡಿಗೆ ಶಕ್ತಿ ತುಂಬಿವೆ ಎಂದು ವಿವರಿಸಿದರು.

ಮಂಡೂರು ಗ್ರಾಮ ಪಂಚಾಯಿತಿ ಸದಸ್ಯ ಮುನಿರಾಜುರವರು ಸಮಾರಂಭದಲ್ಲಿ ಮಾತನಾಡಿ ಕರ್ನಾಟಕ ಸಾಹಿತಿಗಳ ತವರರೂ ಎಂಬ ಖ್ಯಾತಿ ಪಡೆದಿದೆ. ಕುವೆಂಪು, ದಾರಾ ಬೇಂದ್ರೆ, ಜಿ.ಎಸ್.ಶಿವರುದ್ರಪ್ಪ, ಮಾಸ್ತಿ ವೆಂಕಟೇಶ್ ಸೇರಿದಂತೆ ಅನೇಕ ಮಹನಿಯ ಸಾಹಿತಿಗಳು ಕನ್ನಡ ನಾಡಿನಲ್ಲಿ ಜನಿಸಿರುವುದು ನಮ್ಮ ಭಾಗ್ಯ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಅತಿ ಹೇಚ್ಚು ಸಾಹಿತಿಗಳಿರುವುದು ನಮ್ಮ ಹೆಗ್ಗಳಿಕೆ. ಅದೇ ಹಾದಿಯಲ್ಲಿ ಇಂದಿನ ಯುವ ಸಾಹಿತಿಗಳು ಹೆಜ್ಜೆ ಇಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಅವರು ಕನ್ನಡಕ್ಕಾಗಿ ಹಾಗೂ ಕನ್ನಡ ಭಾಷೆ ನೆಲ ಜಲಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಹಾಗೂ ಈ ಭಾಗದ ಜನತೆಯ ಸೇವೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟಿರುವುದಾಗಿ ತಿಳಿಸಿದರು.

ಮಂಡೂರು ಕ್ಷೇತ್ರದ ಗ್ರಾಮ ಪಂಚಾಯಿತಿ ವೆಂಕಟೇಶ್ವರ ,ಅಧ್ಯಕ್ಷ ಪ್ರಸಾದ್ ಚಕ್ಕೇರ,ಉಪಾಧ್ಯಕ್ಷ ಅಜೋಯ್ ಕುಮಾರ್,ಕಾರ್ಯದರ್ಶಿ ನೋಯೆಲ್ ಲೋಬೊ,ಉಪಕಾರ್ಯದರ್ಶಿ ಸೋಮನಾಥ್ ತರಳಿ ,ಉಪಕಾರ್ಯದರ್ಶಿ-ಭಗವಾನ್ ಡಿ ಟಿ,ಖಜಾಂಜಿ- ರಾಜಮೋಹನ್ ಬಣವಿ,ಉಪ ಖಜಾಂಜಿ ಮುಕುಂದ ಎಸ್ ಎನ್,ಸಲಹೆಗಾರ ರಾಜಶೇಖರ ದೇಸೂರಕರ,ಮಹಾಪೋಷಕ ರಾಜೇಶ್ ಗೌಡ,ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net