VIDEO: 60 ಸಾವಿರ ರೂ. ದಂಡ ಪ್ರಕರಣ- ಮನೆಯಲ್ಲಿದ್ದ ಎಲ್ಲ ದೇವರ ಮೂರ್ತಿ ತೆಗೆದು ಅಂಬೇಡ್ಕರ್ ಫೋಟೋ ಪ್ರತಿಷ್ಠಾಪನೆ

1355067
Published on

ಕೋಲಾರ: ಧಾರ್ಮಿಕ ಮೆರವಣಿಗೆ ವೇಳೆ ದಲಿತ ಬಾಲಕನೊಬ್ಬ ದೇವರ ಮೂರ್ತಿ ಮುಟ್ಟಿದ್ದಾನೆಂದು ಆತನ ಕುಟುಂಬಕ್ಕೆ 60 ಸಾವಿರ ರೂಪಾಯಿ ದಂಡ ಹಾಕಿರುವ ಘಟನೆ ಜಿಲ್ಲೆಯ ಮಾಲೂರು ತಾಲ್ಲೂಕಿನ ಉಲ್ಲೇರಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು.

10 ದಿನಗಳ ಹಿಂದೆ ಗ್ರಾಮದ ಭೂತಮ್ಮ‌ ದೇವರ ಮೂರ್ತಿಯ ಮೆರವಣಿಗೆ ನಡೆದಿತ್ತು. ಈ ವೇಳೆ ಶೋಭಾ ಹಾಗೂ ರಮೇಶ್​​ ದಂಪತಿಯ ಮಗ 15 ವರ್ಷದ ಚೇತನ್, ದೇವರ ಮೂರ್ತಿಯನ್ನು ಮುಟ್ಟಿದ್ದ ಎನ್ನಲಾಗಿದೆ.

ಇದರಿಂದ ಸಿಟ್ಟಿಗೆದ್ದ ಗ್ರಾಮದ ಕೆಲವರು, ಆ ಮೂರ್ತಿಗೆ ಮತ್ತೊಮ್ಮೆ ಬಣ್ಣ ಬಳಿಸಬೇಕು. ಜತೆಗೆ ಆತನ ಕುಟುಂಬ 60 ಸಾವಿರ ರೂ. ದಂಡ ಕಟ್ಟಬೇಕು. ಇಲ್ಲವಾದರೆ ಊರು ಬಿಟ್ಟು ಹೋಗಬೇಕು ಎಂದು ತಾಕೀತು ಮಾಡಿದ್ದರು. ಇದರ ವಿರುದ್ಧ ಬಾಲಕನ ಕುಟುಂಬದವರು ಪೋಲಿಸರಿಗೆ ದೂರು ನೀಡಿದ್ದರು. ಪೊಲೀಸರು ಈಗಾಗಲೇ ಕೆಲವರನ್ನು ವಶಕ್ಕೆ ಪಡೆದಿದ್ದಾರೆ.

ಈ ಮಧ್ಯೆ, ದಲಿತ ಬಾಲಕನ ಮನೆಗೆ ಕೆಲವರು ಬಂದು, ಅಲ್ಲಿದ್ದ ದೇವರ ಮೂರ್ತಿಗಳನ್ನು ತೆರವು ಮಾಡಿಸಿದ್ದಾರೆ. ಆ ಜಾಗದಲ್ಲಿ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಇರಿಸಿದ್ದಾರೆ.

"ಅಂಬೇಡ್ಕರ್​​ ಅವರೇ ನಮಗೆ ದೇವರು. ಇಂದು ನಿಮಗೆ ನ್ಯಾಯ ಸಿಕ್ಕಿದ್ದಕ್ಕೆ ಕಾರಣ ಬಾಬಾಸಾಹೇಬ್​​ ಅಂಬೇಡ್ಕರ್. ಮಕ್ಕಳಿಗೆ ಅವರ ಬಗ್ಗೆ ತಿಳಿಸಿಕೊಡಿ" ಎಂದು ಮನೆಯಲ್ಲಿದ್ದವರಿಗೆ ತಿಳಿಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net