

ನರೇಗಲ್ಲ: ಶಿಕ್ಷಣದ ವ್ಯವಸ್ಥೆ ಸಮರ್ಪಕವಾಗಿ ಸಾಗಬೇಕಾದರೆ ಸಮುದಾಯದ ಪಾಲ್ಗೊಳ್ಳುವಿಕೆ ತುಂಬಾ ಮುಖ್ಯ. ದಾನಿಗಳ ಸಹಕಾರದಿಂದ ಶಾಲಾ ಮಕ್ಕಳಿಗೆ ತಿಂಗಳ ಪರ್ಯಂತ ಸಿಹಿ ಊಟದ ಅಮೃತ ಭೋಜನ ಏರ್ಪಡಿಸಿರುವ ಕಾರ್ಯ ಶ್ಲಾಘನೀಯ. ಸಿಹಿಯೂಟ ಸ್ವೀಕರಿಸಿರುವ ಎಲ್ಲ ಮಕ್ಕಳ ಬಾಳು ಸಹ ಅಮೃತ ಭೋಜನದಷ್ಟೆ ಸಿಹಿಯಾಗಿರಲಿ ಎಂದು ಜಮಖಂಡಿ ಸಿಟಿಇ ರೀಡರ್ ಡಿ.ಐ. ಅಸುಂಡಿ ಹೇಳಿದರು.
ಪಟ್ಟಣದ ಕೆಜಿಎಂಎಸ್ ಶಾಲೆಯಲ್ಲಿ ಶ್ರಾವಣ ಮಾಸದ ಪ್ರಯುಕ್ತ ತಿಂಗಳ ಕಾಲ ಜರುಗಿದ ಅಮೃತ ಭೋಜನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿಕ್ಷಣಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಸರ್ಕಾರದೊಂದಿಗೆ ಸಾರ್ವಜನಿಕರೂ ಕೈ ಜೋಡಿಸಿದಾಗ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಲು ಸಾಧ್ಯ ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಮಾತನಾಡಿ, ನಿಮ್ಮ ಭವಿಷ್ಯವನ್ನು ಉತ್ತಮಪಡಿಸಲು ತಂದೆ-ತಾಯಿ ಮತ್ತು ಸಮಾಜದಲ್ಲಿ ಸಾರ್ವಜನಿಕರು ಸಾಕಷ್ಟು ಶ್ರಮ ವಹಿಸುತ್ತಿದ್ದಾರೆ. ಅವರ ಶ್ರಮ ನಿರರ್ಥಕವಾಗದಂತೆ ನೋಡಿಕೊಳ್ಳಬೇಕಾದುದು ನಿಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಮಕ್ಕಳಿಗೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಆನಂದ ಕೊಟಗಿ, ಮುಖ್ಯ ಶಿಕ್ಷಕ ಬಿ. ಬಿ. ಕುರಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಮೃತ ಭೋಜನದ ದಾನಿಗಳನ್ನು ಸನ್ಮಾನಿಸಲಾಯಿತು. ಸುನೀಲ ವಸ್ತ್ರದ, ಶೇಖಪ್ಪ ಕೆಂಗಾರ, ಸಂತೋಷ ಬಸರಿಗಿಡದ, ಬಸವರಾಜ ಮಾಳವಾಡ, ನಿರ್ಮಲಾ ಸೂಡಿ, ಸಿಆರ್‌ಪಿ ಜ್ಯೋತಿ ಬೇಲೇರಿ, ಉಪಾಧ್ಯಕ್ಷೆ ರೇಣುಕಾ ಜೋಗಿ, ಎನ್.ಎಲ್. ಚವ್ಹಾಣ, ಎಂ.ಪಿ. ಅಣಗೌಡರ, ಡಿ.ವಿ. ಕಳ್ಳಿ, ಜೆ.ಎ. ಪಾಟೀಲ, ಎಂ.ಎಸ್. ಮಾಳಶೆಟ್ಟಿ, ಎಸ್.ಐ. ಜಗಾಪೂರ, ರಾಜೇಶ್ವರಿ ತೊಂಡಿಹಾಳ, ಎಚ್.ಎಫ್ .ಕಡ್ಲಿಮಟ್ಟಿ, ಬಿ.ಡಿ. ಹಳ್ಳದಮ ಇತರರು ಇದ್ದರು.