ಜು.31ರ ವರೆಗೆ ಎಲ್ಲ ಮದ್ಯದಂಗಡಿಗಳು ಓಪನ್​!

drinks jan 08
Published on

ಬೆಂಗಳೂರು: ಮದ್ಯ ಪ್ರಿಯರಿಗೊಂದು ಗುಡ್​ನ್ಯೂಸ್! ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಬಂದ್​ ಆಗಿದ್ದ ಮದ್ಯದಂಗಡಿಗಳು ಇನ್ಮುಂದೆ ತೆರೆಯಲಿವೆ.

ರಾಜ್ಯದಲ್ಲಿ ಕರೊನಾ ಸೋಂಕು ಹರಡುವಿಕೆ ನಿಯಂತ್ರಿಸುವ ಸಲುವಾಗಿ ಮುಚ್ಚಲಾಗಿದ್ದ ಎಲ್ಲ ಮಾದರಿಯ ಮದ್ಯದಂಗಡಿಗಳನ್ನು ತೆರೆದು ವ್ಯಾಪಾರ ನಡೆಸತಕ್ಕದು ಎಂದು ಅಬಕಾರಿ ಇಲಾಖೆ ಆದೇಶಿಸಿದೆ. ಈ ಆದೇಶ ಜು.31ರವರೆಗೆ ಮಾತ್ರ ಅನ್ವಯ ಆಗಲಿದೆ. ಈ 8 ದಿನಗಳಲ್ಲಿ ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಮಾತ್ರ ಮದ್ಯದಂಗಡಿಗಳನ್ನು ತೆರೆಯುವಂತೆ ಆಯುಕ್ತರು ಸೂಚಿಸಿದ್ದಾರೆ.

ಕರೊನಾ ನಿಯಂತ್ರಣಕ್ಕಾಗಿ ಮೊದಲಹಂತದ ಲಾಕ್‌ಡೌನ್ ಜಾರಿಯಾದ ವೇಳೆ ರಾಜ್ಯದಲ್ಲಿ ಎಲ್ಲ ಮಾದರಿಯ ಮದ್ಯದಂಗಡಿಗಳು ಕಂಪ್ಲೀಟ್​ ಬಂದ್ ಆಗಿದ್ದವು. 42 ದಿನಗಳ ಲಾಕ್‌ಡೌನ್ ಬಳಿಕ ಮದ್ಯದಂಗಡಿ ತೆರೆಯಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿತ್ತು. ಮತ್ತೆ ಬಂದ್​ ಆಗುವ ಧಾವಂತದಲ್ಲಿ ಮುಗಿಬಿದ್ದ ಮದ್ಯಪ್ರಿಯರು ಖರೀದಿಯಲ್ಲಿ ದಾಖಲೆ ನಿರ್ಮಿಸಿದ್ದನ್ನು ಸ್ಮರಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net