ಅಭಿವೃದ್ಧಿಯ ಮೂಲಕ ಬಡವರ ಸೇವೆ - ರಸ್ತೆಗೆ ಶಿಲಾನ್ಯಾಸ ನಡೆಸಿ ಶಾಸಕ ಅಶೋಕ್ ಕುಮಾರ್ ರೈ ಹೇಳಿಕೆ

PTR_1 MAR_3
Published on

ವಿಟ್ಲ: ಅಽಕಾರಲ್ಲಿರುವಷ್ಟು ಸಮಯ ಪೂರ್ಣಪ್ರಮಾಣದಲ್ಲಿ ಚಲಾಯಿಸಬೇಕು. ಒಂದು ಹಂತದಲ್ಲಿ ಚುನಾವಣೆಯ ಸಮಯ ರಾಜಕೀಯ ಮಾಡಬೇಕು. ಉಳಿದ ಸಮಯದಲ್ಲಿ ಅಭಿವೃದ್ಧಿಯನ್ನು ಮಾಡಿ ಬಡವರ ಸೇವೆ ಮಾಡಬೇಕು. ಸ್ಥಳೀಯರ ಬೇಡಿಕೆಯಿದ್ದರೂ, ಹಲವು ವರ್ಷಗಳಿಂದ ರಸ್ತೆ ಅಭಿವೃದ್ಧಿ ಆಗಿಲ್ಲ. ಉಪಮುಖ್ಯಮಂತ್ರಿ, ಮುಖ್ಯಮಂತ್ರಿಗಳಲ್ಲಿ ಬೇಡಿಕೆ ಸಲ್ಲಿಸಿ ಈ ರಸ್ತೆಗೆ ಅನುದಾನ ತರಲಾಗಿದೆ. ೧೬ ಕೋಟಿ ರೂ.ಅನುದಾನ ಬಂದಿದ್ದು, ಅದರಲ್ಲಿ ೫೦ಲಕ್ಷ ರೂ.ಅನುದಾನ ಈ ಭಾಗಕ್ಕೆ ಸಿಗಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ನೆಕ್ಕಿತ್ತಪುಣಿಯಲ್ಲಿ ನಿರಾವರಿ ನಿಗಮದ ಮೂಲಕ ದೂಜಮೂಲೆ ಮುಳಿಯ ನೆಕ್ಕರೆ ನೆಕ್ಕಿತ್ತಪುಣಿ ರಸ್ತೆಯ ಅಭಿವೃದ್ಧಿ ೨ ಕೋಟಿ ರೂ.ಅನುದಾನ ಬಿಡುಗಡೆಯಾಗಿದ್ದು, ಶಿಲಾನ್ಯಾಸ ನಡೆಸಿ ಮಾತನಾಡಿದರು.

ಅಳಿಕೆ ಗ್ರಾಪಂ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಕಾಂಗ್ರೆಸ್ ಅಳಿಕೆ ವಲಯ ಅಧ್ಯಕ್ಷ ಸೀತಾರಾಮ ಶೆಟ್ಟಿ ಮುಳಿಯ, ಪಂಚಾಯಿತಿ ಸದಸ್ಯರಾದ ಸದಾಶಿವ ಶೆಟ್ಟಿ, ಜಗದೀಶ್ ಶೆಟ್ಟಿ ಮುಳಿಯ, ಸೆಲ್ವಿನಾ ಡಿಸೋಜ, ರವೀಶ ಕೆ.ಗಿರಿಜ ನೆಗಳಗುಳಿ, ಸುಕುಮಾರ, ಶಾಂಭವಿ, ಮಾಜಿ ಜಿಪಂ ಸದಸ್ಯ ಎಂ.ಎಸ್.ಮಹಮ್ಮದ್, ನಿಗಮದ ಇಂಜಿನಿಯರ್ ಶೆರೀಫ್, ಅಳಿಕೆ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಚಂದ್ರನಾಥ ಆಳ್ವ, ಸ್ಥಳೀಯರಾದ ಜನಾರ್ದನ ಪೂಜಾರಿ, ಸುಧಾಕರ, ಉದಯ ನಾಯ್ಕ, ನಿಶಾಂತ್ ಶೆಟ್ಟಿ, ಜಯಪ್ರಕಾಶ್ ಡಿಸೋಜ, ಜೆಸಿಂತಾ ಡಿಸೋಜ, ರಾಜೇಶ್ ನೆಕ್ಕಿತ್ತಪುಣಿ, ವಿಶ್ವನಾಥ ಮುಳಿಯ, ಯಶೋಧರ ಬಂಗೇರ, ಮಿತ್ತಳಿಕೆ ಸಂತೋಷ್ ಶೆಟ್ಟಿ, ಆನಂದ ಮೂಲ್ಯ ನೆಕ್ಕರೆ, ಕೀರ್ತನ್ ಕುಮಾರ್, ಅಬ್ದುಲ್ ಖಾದರ್ ಪಡೀಲು, ಇಮ್ರಾನ್ ಖಾನ್ ಪಡೀಲು ಕಲ್ಲಜೇರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಗೀತಾ, ಆಶಾಕಾರ್ಯಕರ್ತೆ ಲೀಲಾಕ್ಷಿ, ಅಂಗನವಾಡಿ ಕಾರ್ಯಕರ್ತೆಯರಾದ ವನಿತಾ, ಲತಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net