37.80 ಕೋಟಿ ರೂ. ಬೆಲೆ ಬಾಳುವ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ ಆಲಿಯಾ ಭಟ್!

AliaBhatt
Published on

ಮುಂಬೈ: ಬಾಲಿವುಡ್​ ನಟಿ ಆಲಿಯಾ ಭಟ್​​ ಸಿನಿಮಾ ಮಾತ್ರವಲ್ಲದೇ ವೈಯಕ್ತಿಕ ವಿಚಾರವಾಗಿಯು ಹೆಚ್ಚು ಸುದ್ದಿಯಾಗುತ್ತಲಿರುತ್ತಾರೆ. ಇದೀಗ ಮುಂಬೈನಲ್ಲಿ ದುಬಾರಿ ಬೆಲೆ ಬಾಳುವ ಬಂಗಲೆ ಖರೀದಿ ಮಾಡಿ ಸುದ್ದಿಯಾಗಿದ್ದಾರೆ.

ಮುಂಬೈನ ಬಾಂದ್ರಾ ಪ್ರದೇಶದ ಪಾಲಿ ಹಿಲ್‌ನ ಬೆಲೆಬಾಳುವ ಪ್ರದೇಶದಲ್ಲಿ ತನ್ನ ನಿರ್ಮಾಣ ಸಂಸ್ಥೆಯಾದ ಎಟರ್ನಲ್ ಸನ್‌ಶೈನ್ ಪ್ರೊಡಕ್ಷನ್ ಪ್ರೈವೇಟ್ ಲಿಮಿಟೆಡ್ ಮೂಲಕ ಇತ್ತೀಚೆಗೆ ಪ್ರೀಮಿಯಂ ವಸತಿ ಅಪಾರ್ಟ್ಮೆಂಟ್​​​ನ್ನು ನಟಿ ಆಲಿಯಾ ಭಟ್ ಮುಂಬೈನ ಪಾಲಿ ಹಿಲ್‌ನಲ್ಲಿ 37.80 ಕೋಟಿ ರೂಪಾಯಿಗೆ ಪ್ರೀಮಿಯಂ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ತನ್ನ ಸಹೋದರಿ ಶಾಹೀನ್ ಭಟ್‌ಗೆ ಎರಡು ಅಪಾರ್ಟ್‌ಮೆಂಟ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ.

ಬಾಂದ್ರಾ ವೆಸ್ಟ್‌ನಲ್ಲಿ ನಟಿ ಆಲಿಯಾ ಭಟ್ ಅವರು 2,497 ಚದರ ಅಡಿ ವಿಸ್ತೀರ್ಣದ ಹೊಸ ಪ್ರೀಮಿಯಂ ಅಪಾರ್ಟ್‌ಮೆಂಟ್ ಅನ್ನು 37.80 ಕೋಟಿ ರೂ.ಗೆ ಖರೀದಿಸಿದ್ದಾರೆ. ಏಪ್ರಿಲ್ 10 ರಂದು ಒಪ್ಪಂದವನ್ನು ನೋಂದಾಯಿಸಲಾಗಿದೆ ಮತ್ತು ನಟಿ 2.26 ಕೋಟಿ ರೂಪಾಯಿಗಳ ಮುದ್ರಾಂಕ ಶುಲ್ಕವನ್ನು ಪಾವತಿಸಿದ್ದಾರೆ.

ಆಲಿಯಾ ತನ್ನ ಸಹೋದರಿಗೆ ಮುಂಬೈನಲ್ಲಿ ಎರಡು ಅಪಾರ್ಟ್ಮೆಂಟ್ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಸಹೋದರಿ ಶಾಹೀನ್ ಭಟ್‌ಗೆ 7.68 ಕೋಟಿ ರೂ. ಬೆಲೆ ಬಾಳುವ ಮುಂಬೈನ ಜುಹುದಲ್ಲಿರುವ ಗಿಗಿ ಅಪಾರ್ಟ್‌ಮೆಂಟ್‌ನಲ್ಲಿ ಒಟ್ಟು 2,086.75 ಚದರ ಅಡಿಯ ಎರಡು ಫ್ಲಾಟ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಆಲಿಯಾ ಈಗಾಗಲೇ ಪತಿ ರಣಬೀರ್ ಅಪಾರ್ಟ್‌ಮೆಂಟ್​ನಲ್ಲಿ ಪ್ರಸ್ತುತ ತಮ್ಮ ಮಗಳು ರಾಹಾ ಅವರೊಂದಿಗೆ ವಾಸಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net