

ಹಾವೇರಿ: ಮದ್ಯ ಸೇವನೆ ಚಟಕ್ಕೆ ಅಂಟಿಕೊಂಡಿದ್ದ ವ್ಯಕ್ತಿ ವಿಷ ಸೇವಿಸಿ ಮೃತಪಟ್ಟ ಘಟನೆ ತಾಲೂಕಿನ ನಾಗನೂರ ಗ್ರಾಮದಲ್ಲಿ ಭಾನುವಾರ ನಡೆದಿದೆ.
ರಾಚಪ್ಪ ಬಸವಣ್ಣೆಪ್ಪ ದುಂಡಣ್ಣನವರ (32) ಮೃತ ವ್ಯಕ್ತಿ.
ಈತ ವಿಪರೀತ ಮದ್ಯ ಸೇವನೆ ಮಾಡುತ್ತಿದ್ದ. ಮದ್ಯ ಸೇವಿಸಿದ ಅಮಲಿನಲ್ಲಿ ವಿಷ ಸೇವಿಸಿ ಮೃತಪಟ್ಟಿದ್ದಾನೆ ಎನ್ನಲಾಗಿದ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.