29 ವರ್ಷದ ಗೆಳತಿಯ ಮಗುವಿಗೆ ತಂದೆಯಾದ 83ರ ಹಾಲಿವುಡ್​​ ನಟ

alpacino
Published on

ಮುಂಬೈ: ಹಾಲಿವುಡ್​​ ನಟ ಅಲ್​ ಪೆಸಿನೋ 83ನೇ ವಯಸ್ಸಿನಲ್ಲಿ ಗಂಡು ಮಗುವಿಗೆ ತಂದೆಯಾಗಿದ್ದಾರೆ. ತನ್ನ 29 ವರ್ಷದ ಗೆಳತಿ ನೂರ್ ಅಲ್ಫಲ್ಲಾ ಅವರಿಂದ ಗಂಡು ಮಗು ಪಡೆದಿದ್ದಾರೆ.

89 ವರ್ಷದ ನಟನ 29 ವರ್ಷದ ಗೆಳತಿ ಮತ್ತು ಚಲನಚಿತ್ರ ನಿರ್ಮಾಪಕಿ ನೂರ್‌ ಅಲ್ಫಲ್ಲಾಹ್‌, ಮೊದಲ ಬಾರಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನಟ ಅಲ್​ ಪೆಸಿನೋ ಅವರು ಮದುವೆ ಆಗಿಲ್ಲ. ದಂಪತಿ ಮಗನಿಗೆ ರೋಮನ್ ಪ್ಯಾಸಿನೊ ಎಂದು ಹೆಸರಿಟ್ಟಿದ್ದಾರೆ.

ಅಲ್​ ಪೆಸಿನೋ ಮತ್ತು ನೂರ್​ ಅಲ್ಫಾಲ್ಲಾ ಅವರು ಪರಸ್ಪರ ಡೇಟಿಂಗ್​ ಮಾಡುತ್ತಿದ್ದರು. 2022ರಿಂದ ಈಚೆಗೆ ಅನೇಕ ಬಾರಿ ಅವರು ಒಟ್ಟಿಗೆ ಕಾಣಿಸಿಕೊಂಡು ಸುದ್ದಿ ಆಗಿದ್ದುಂಟು. ನೂರ್​ ಅಲ್ಫಾಲ್ಲಾ ಅವರು ಗರ್ಭಿಣಿ ಎಂಬ ಸುದ್ದಿ ಕೆಲವೇ ದಿನಗಳ ಹಿಂದೆ ಕೇಳಿಬಂದಿತ್ತು. ಆದರೆ ಅವರು ಗರ್ಭಿಣಿ ಆಗಿದ್ದಕ್ಕೆ ತಾವು ಕಾರಣ ಹೌದೋ ಅಲ್ಲವೋ ಎಂಬ ಅನುಮಾನ ಅಲ್​ ಪಚಿನೋ ಅವರಿಗೆ ಇತ್ತು. 83ನೇ ವಯಸ್ಸಿನಲ್ಲಿ ತಾವು ತಂದೆ ಆಗುವ ಸಾಮರ್ಥ್ಯ ಹೊಂದಿಲ್ಲ ಎಂದು ಅವರು ಭಾವಿಸಿದ್ದರು. ಅದಕ್ಕಾಗಿ ಅವರು ಡಿಎನ್​ಎ ಟೆಸ್ಟ್​ ಕೂಡ ಮಾಡಿಸಿದ್ದರು. ಆಗ ಅಸಲಿ ವಿಷಯ ಹೊರಬಿದ್ದಿತ್ತು. ನೂರ್​ ಅಲ್ಫಾಲ್ಲಾ ಗರ್ಭಿಣಿ ಆಗಿದ್ದಕ್ಕೆ ಅಲ್​ ಪಚಿನೋ ಅವರೇ ಕಾರಣ ಎಂಬುದು ಬಯಲಾಗಿತ್ತು.

ಹಾಲಿವುಡ್ ಹಿರಿಯ ನಟ ಅಲ್ ಪೆಸಿನೊ ನಾಲ್ಕನೇ ಬಾರಿಗೆ ತಂದೆಯಾಗಿದ್ದಾರೆ. ಈ ಹಿಂದೆ ಅಲ್ ಪೆಸಿನೋ ಜಾನ್ ಟ್ಯಾರಂಟ್ ಅವರೊಂದಿಗಿದ್ದರು. ಅವರಿಗೆ ಜೂಲಿ ಮೇರಿ ಎನ್ನುವ 33 ವರ್ಷದ ಮಗಳು ಇದ್ದಾಳೆ. ಅಲ್ಲದೆ ಜಾನ್‌ ಜೊತೆ ಸಂಬಂಧ ಕಳೆದುಕೊಂಡ ನಂತರ ಅಲ್‌ ಬೆವರ್ಲಿ ಡಿʼಏಂಜೆಲೊ ಅವರನ್ನು ಪ್ರಿತಿಸಿದ್ದರು. ಅವರಿಗೆ ಈಗ 22 ವರ್ಷದ ಆಂಟನ್‌ ಮತ್ತು ಒಲಿವಿಯಾ ಎಂಬ ಅವಳಿ ಮಕ್ಕಳಿದ್ದಾರೆ. ಇದೀಗ ನೂರ್‌ ಅಲ್ಫಲ್ಲಾಹ್‌ ಜೊತೆ ಅಲ್‌ ಸಂಬಂಧ ಹೊಂದಿದ್ದಾರೆ.

ನಿರ್ಮಾಪಕಿ ನೂರ್ ಅಲ್ಫಲ್ಲಾಹ್‌ ಅವರು ಈ ಹಿಂದೆ ಹಿರಿಯ ಗಾಯಕ ಮಿಕ್ ಜಾಗರ್ ಮತ್ತು ಬಿಲಿಯನೇರ್ ನಿಕೋಲಸ್ ಬರ್ಗ್ರೂನ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರು. 29 ವರ್ಷದ ನೂರ್ ಏಪ್ರಿಲ್ 2022 ರಿಂದ ಅಲ್‌ ಪೆಸಿನೋ ಜತೆ ಡೇಟಿಂಗ್ ಮಾಡುತ್ತಿದ್ದಾರೆ. ಇದೀಗ ಅವರ ಪ್ರೇಮ ಪ್ರಣಯದ ಗುರುತಾಗಿ ಗಂಡು ಮಗು ಜನನವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net