ಟ್ರೋಲ್‍ ಮಾಡುತ್ತಾರೆಂದು ಭಾರತೀಯ ಪೌರತ್ವ ಪಡೆದರೂ ಗೇಲಿಗೆ ಒಳಗಾದ ಅಕ್ಷಯ್ ಕುಮಾರ್!

Akshay Kumar - Bachchan Pandey - Final
Published on

ನವದೆಹಲಿ: ಅಕ್ಷಯ್ ಕುಮಾರ್ ತಮ್ಮ ಭಾರತೀಯ ಪೌರತ್ವದ ಪುರಾವೆಗಳನ್ನು ಹಂಚಿಕೊಂಡ ಒಂದು ದಿನದ ನಂತರ, ಆನ್ಲೈನ್ ಜಗತ್ತಿನಲ್ಲಿ ಆ ಬಗ್ಗೆಯೂ ಮೀಮ್ಸ್ ಕಾಣಿಸಿಕೊಳ್ಳಲು ಶುರುವಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಹೇಳುವ ಜತೆ ಜತೆಗೆ, ಬಾಲಿವುಡ್ ತಾರೆ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈಗ ಅವರಿಗೆ ಭಾರತೀಯ ಪೌರತ್ವವನ್ನು ನೀಡಲಾಗಿದೆ ಎಂದು ಘೋಷಿಸಿದರು. "ದಿಲ್ ಔರ್ ಸಿಟಿಜನ್‍ಶಿಪ್, ದೋನೋ ಹಿಂದೂಸ್ತಾನಿ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು! ಜೈ ಹಿಂದ್!" ಎಂದು ಅವರು ಅಧಿಕೃತ ನೋಂದಣಿ ದಾಖಲೆಯ ಫೋಟೊಗಳೊಂದಿಗೆ ಪೋಸ್ಟ್ ಮಾಡಿದ್ದಾರೆ. ಈ ಘಟನೆಯೂ ಟ್ರೋಲರ್ಸ್‍ ಗಮನ ಸೆಳೆದಿದ್ದು ಅಕ್ಷಯ್ ಕುಮಾರ್ ಮತ್ತೊಮ್ಮೆ ಟ್ರೋಲ್ ಆಗಿದ್ದಾರೆ.

ಈ ಬಾರಿ, ಟ್ರೋಲ್‍ಗಳು ಪೌರತ್ವವನ್ನು ತ್ಯಜಿಸುವ ಅವರ ನಿರ್ಧಾರದ ಮೇಲೆ ಹೆಚ್ಚು ಗಮನ ಹರಿಸಿದವು. ವಾಸ್ತವವಾಗಿ, ಅನೇಕ ಭಾರತೀಯರು ಉತ್ತಮ ಭವಿಷ್ಯದ ಅನ್ವೇಷಣೆಯಲ್ಲಿ ಹೊರ ದೇಶಗಳಿಗೆ ಸಾಗುತ್ತಾರೆ. "ಯಾರೋ ಪ್ರಯೋಜನಕ್ಕಿಲ್ಲದವರು ಟ್ರೋಲ್ ಮಾಡಿದರೆಂದು ಫಸ್ಟ್ ವರ್ಲ್ಡ್ ಕಂಟ್ರಿಯ ಪೌರತ್ವವನ್ನು ತೊರೆಯುವುದನ್ನು ಊಹಿಸಿಕೊಳ್ಳಿ" ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

ಇನ್ನೊಬ್ಬರು, “ಸಾಮಾನ್ಯವಾಗಿ ಪಂಜಾಬಿಗಳು ಪೌರತ್ವಕ್ಕಾಗಿ ಕೆನಡಾಗೆ ತೆರಳುತ್ತಾರೆ. ನೀವು, ಪೌರತ್ವಕ್ಕಾಗಿ ಭಾರತಕ್ಕೆ ಮರಳಿದ ಮೊದಲ ಪಂಜಾಬಿ. ಹೇಗೆ ಮಾಡುತ್ತೀರಾ ಇದನ್ನೆಲ್ಲ” ಎಂದು ಕಮೆಂಟ್ ಮಾಡಿದ್ದಾರೆ.

ಅಕ್ಷಯ್ ಕುಮಾರ್ ಮಾಡಿದ ಪೋಸ್ಟ್ ಹೀಗಿದೆ:

ಟ್ರೋಲರ್ಸ್‍ ಮಾಡಿರುವ ಒಂದಷ್ಟು ಮೀಮ್ಸ್ ನಿಮಗಾಗಿ…

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net