ಮೆಟ್ರೋದಲ್ಲಿ ಪ್ರಯಾಣಿಸಿದ ನಟ; ಫ್ಯಾನ್ಸ್​ಗೆ ಸ್ಟಾರ್ ಅನ್ನು ಗುರುತಿಸಲು ಸಾಧ್ಯವೇ ಆಗಲಿಲ್ಲ..

Akshay Kumar travels in Mumbai metro with mask on, fans couldn't recognise the star
Published on

ಮುಂಬೈ: ಮಾಸ್ಕ್​​ ಧರಿಸಿ ನಮ್ಮ ಎದುರೆ ಪರಿಚಯಸ್ಥರು ನಿಂತರೆ ನಮಗೆ ಪರಿಚಯ ಸಿಗುವುದಿಲ್ಲ. ಆದರೆ ಇಲ್ಲೊಬ್ಬ ಸ್ಟಾರ್​​ ನಟ ಮಾಸ್ಕ್​ ಧರಿಸಿ ಜನಸಾಮಾನ್ಯರಂತೆ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಈ ಕುರಿತಾದ ವಿಡಿಯೋ ವೈರಲ್​ ಆಗುತ್ತಿದ್ದಂತೆ ಫ್ಯಾನ್ಸ್​ ಹೌದಾ ನಮಗೆ ಗೊತ್ತೆ ಆಗಲಿಲ್ಲ ನಟನನ್ನು ಹತ್ತಿರ ದಿಂದ ನೋಡಬಹುದಾಗಿತ್ತು ಎಂದು ಬೇಸರ ಹೊರ ಹಾಕುತ್ತಿದ್ದಾರೆ. ಹಾಗಿದ್ರೆ ಆ ಸ್ಟಾರ್​​ ನಟ ಯಾರು ಎನ್ನುವ ಪ್ರಶ್ನೆ ನಿಮಗೆ ಬರಬಹುದು. ಇದಕ್ಕೆ ಉತ್ತರ ಇಲ್ಲಿದೆ...

ಬಾಲಿವುಡ್ ನಟ ಅಕ್ಷಯ್​ ಕುಮಾರ್​ ಮುಂಬೈ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ.  ಕುತೂಹಲಕಾರಿ ಸಂಗತಿಯೆಂದರೆ ಮೆಟ್ರೋದಲ್ಲಿ ಯಾರೂ ಅಕ್ಷಯ್ ಅವರನ್ನು ಗುರುತಿಸಲಿಲ್ಲ. ಪಕ್ಕದಲ್ಲಿ ನಿಂತಿದ್ದ ಅಭಿಮಾನಿಗಳಿಗೂ ತಾರೆಯನ್ನು ಗುರುತಿಸಲು ಸಾಧ್ಯವಾಗಲಿಲ್ಲ.

ಅಕ್ಷಯ್ ಕಪ್ಪು ಜಾಕೆಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದು, ತನ್ನ ಮುಖದ ಅರ್ಧಭಾಗವನ್ನು ಮುಚ್ಚುವ ಬಿಳಿ ಮಾಸ್ಕನ್ನು ಹಾಕಿಕೊಂಡಿದ್ದಾರೆ. ನಿರ್ಮಾಪಕ ದಿನೇಶ್ ವಿಜನ್ ಅವರೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ. ಸಹ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಮೆಟ್ರೋ ಒಳಗೆ ಶಾಂತವಾಗಿ ಕುಳಿತಿದ್ದರೂ, ಗಮನಿಸುತ್ತಿದ್ದ ಅಭಿಮಾನಿಯೊಬ್ಬರು ಅವರನ್ನು ಗುರುತಿಸುವಲ್ಲಿ ಯಶಸ್ವಿಯಾದರು. ಅಕ್ಷಯ್ ಅವರನ್ನು ನೋಡಿದ ಅಭಿಮಾನಿಗಳು ಆಶ್ಚರ್ಯಚಕಿತರಾದರು. ತಮ್ಮ ನೆಚ್ಚಿನ ತಾರೆ ಅವರೊಂದಿಗೆ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದುದನ್ನು ಅವರ ಅಭಿಮಾನಿಗಳಿಗೆ ನಂಬಲಾಗಲಿಲ್ಲ. ಕೆಲವು ಅಭಿಮಾನಿಗಳು ಕುಮಾರ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

ಮುಂಬೈ ಮೆಟ್ರೋ ಸ್ಟಾರ್ ಪ್ರಯಾಣಿಕರನ್ನು ಹೊಂದಿದ್ದು, ನಟ ಅಕ್ಷಯ್ ಕುಮಾರ್ ಅವರು ಟ್ರಾಫಿಕ್ ಸಮಯವನ್ನು ಉಳಿಸಲು ಮೆಟ್ರೋದಲ್ಲಿ ಪ್ರಯಾಣಿಸಲು ನಿರ್ಧರಿಸಿದರು. ಕೋಚ್‌ನೊಳಗಿನ ಹಲವಾರು ವಿಡಿಯೋಗಳು ಮತ್ತು ಚಿತ್ರಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ.

ಅಲ್ಲದೆ, ನಟ ಮೆಟ್ರೋ ಮೂಲಕ ಪ್ರಯಾಣಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ, ಅವರು ಸಹ-ನಟ ಇಮ್ರಾನ್ ಹಶ್ಮಿ ಅವರೊಂದಿಗೆ ಸೆಲ್ಫಿ ಚಿತ್ರದ ಪ್ರಚಾರ ಮಾಡುತ್ತಿದ್ದರೂ ಸಹ, ಅವರು ಪ್ರಯಾಣಿಕರೊಂದಿಗೆ ಸಂವಹನ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net