ಸಲ್ಲು ಭಾಯಿ ನಿರೂಪಣೆಯ ಶೋನಿಂದ ಬಾಲಿವುಡ್​ ಕಿಲಾಡಿ ಹೊರನಡೆದಿದ್ದೇಕೆ?; ಮೌನ ಮುರಿದ ಅಕ್ಷಯ್​ ಕುಮಾರ್​ ಹೇಳಿದಿಷ್ಟು.. | Akshya Kumar

Untitled design - 2025-01-22T165551.704
Published on

ಮುಂಬೈ: ಬಾಲಿವುಡ್​ ಭಾಯಿಜಾನ್​ ಸಲ್ಮಾನ್​ ಖಾನ್​ ನಡೆಸಿಕೊಡುವ ಬಿಗ್ ಬಾಸ್‌ನ 18ನೇ ಸೀಸನ್ ಜನವರಿ 19ರಂದು ಕೊನೆಗೊಂಡಿದೆ. ಕರಣ್ ವೀರ್ ಮೆಹ್ರಾ ಕಾರ್ಯಕ್ರಮದ ವಿಜೇತರಾಗಿರುವುದು ಗೊತ್ತೆ ಇದೆ. ಈ ಫಿನಾಲೆಯಲ್ಲಿ ಅಕ್ಷಯ್ ಕುಮಾರ್( Akshya Kumar) ಅತಿಥಿಯಾಗಿ ಆಗಮಿಸಲಿದ್ದಾರೆ ಎನ್ನಲಾಗಿತ್ತು.

ಅದರಂತೆಯೇ ಅಕ್ಷಯ್​ ಕುಮಾರ್​ ಬಿಗ್​ಬಾಸ್​​ ಫಿನಾಲೆಯ ಶೂಟಿಂಗ್​ಗೆ ತಲುಪಿದ್ದರು ಆದರೆ ಚಿತ್ರೀಕರಣಕ್ಕೂ ಮುನ್ನವೆ ಅವರು ವಾಪಸಾದರೂ. ಅಂದ್ಹಾಗೆ ಬಿಗ್​ಬಾಸ್​​​ ಫಿನಾಲೆಯನಲ್ಲಿ ಅಕ್ಷಯ್ ತನ್ನ ಸಹನಟ ವೀರ್ ಪಹಾಡಿಯಾ ಅವರೊಂದಿಗೆ ಮುಂಬರುವ ಚಿತ್ರ ಸ್ಕೈ ಫೋರ್ಸ್ ಅನ್ನು ಪ್ರಚಾರ ಮಾಡಬೇಕಾಗಿತ್ತು. ಅಕ್ಷಯ್ ನಿರ್ಗಮನದ ನಂತರ, ವೀರ್ ಸಲ್ಮಾನ್ ಜತೆ ಸಿನಿಮಾ ಪ್ರಚಾರದ ವಿಭಾಗವನ್ನು ಚಿತ್ರೀಕರಿಸಲಾಗಿದೆ. ಸಲ್ಮಾನ್​ ಖಾನ್​​​ ಫಿನಾಲೆಯ ಶೂಟಿಂಗ್ ತಲುಪಲು ತಡವಾಗಿದ್ದರಿಂದ ಅಕ್ಷಯ್ ಕುಮಾರ್ ನಟನೊಂದಿಗೆ ಶೂಟಿಂಗ್ ಮಾಡದೆ ವಾಪಸಾದರು ಎಂಬ ಸುದ್ದಿ ಬಾಲಿವುಡ್​ ಅಂಗಳದಲ್ಲಿ ಹರಿದಾಡುತಿತ್ತು.

ಸಲ್ಮಾನ್ ಖಾನ್​​ ಹಲವಾರು ಗಂಟೆಗಳ ಕಾಲ ತಡವಾಗಿ ಬಂದಿದ್ದರಿಂದ ಅಕ್ಷಯ್​ ಕುಮಾರ್​ ಹಿಂದಿರುಗಿದ್ದಾರೆ ಎಂಬು ವದಂತಿ ಕುರಿತು ಬಾಲಿವುಡ್​ ಕಿಲಾಡಿ ಮೌನ ಮುರಿದಿದ್ದಾರೆ. ನನಗೆ ಬೇರೆ ಕಮಿಟ್​ಮೆಂಟ್​​ಗಳು ಇದ್ದವು ಆ ಕಾರಣದಿಂದಾಗಿ ಅಲ್ಲಿಂದ ಹೊರಡಬೇಕಾಯಿತು ಎಂದು ಹೇಳಿದ್ದಾರೆ. ನಾನು ಬಂದಿದ್ದೆ ಆದರೆ ಸಲ್ಮಾನ್​ ಖಾನ್​ ಅಷ್ಟು ತಡಮಾಡಲಿಲ್ಲ. ಹೌದು ವೈಯಕ್ತಿಕ ಕೆಲಸಗಳಿದ್ದ ಕಾರಣ ಸ್ವಲ್ಪ ತಡವಾಗಿ ಬಂದರು. ಸ್ವಲ್ಪ ಹೊತ್ತು ಮಾತಾಡಿದೆವು 35ರಿಂದ 40 ನಿಮಿಷ ತಡವಾಗಿ ಬರುವುದಾಗಿ ಹೇಳಿದರು. ನನಗೆ ಬೇರೆ ಕೆಲಸ ಇದಿದ್ದರಿಂದ ವಿಷಯಗಳ ಬಗ್ಗೆ ಮಾತನಾಡಿ ನಾನು ಹೋದೆ. ಆದರೆ ವೀರ್ ಪಹಾಡಿಯಾ ಉಪಸ್ಥಿತರಿದ್ದರು ಎಂದು ಹೇಳಿದರು.

ಅಕ್ಷಯ್ ಸಮಯಪಾಲನೆಗೆ ಹೆಸರುವಾಸಿಯಾಗಿದ್ದಾರೆ, ಆದರೆ ಸಲ್ಮಾನ್ ಅವರ ಹಿಂದಿನ ಅನೇಕ ಸಹ-ನಟರು ಅವರು ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಎಂದು ಹೇಳಿರುವುದು ವರದಿ ಆಗಿದೆ. ಅಕ್ಷಯ್ ಬಹಳ ಸಮಯಪ್ರಜ್ಞೆಯ ವ್ಯಕ್ತಿ. 7 ಗಂಟೆಗೆ ಕೆಲಸ ಶುರು ಮಾಡುತ್ತೇವೆ ಎಂದು ಹೇಳಿದರೆ 7 ಗಂಟೆಗೆ ಅಲ್ಲಿಯೇ ಇರುತ್ತಾರೆ ಎಂಬ ಕಾರಣಕ್ಕೆ ಅವರ ಜತೆ ಕೆಲಸ ಮಾಡುವಾಗ ನಮಗೆ ಸದಾ ಚಿಂತೆ. ಮತ್ತು ನಾವು ಬೆಳಿಗ್ಗೆ 6-7 ಗಂಟೆಗೆ ಎದ್ದೇಳುವುದಿಲ್ಲ. ಕೆಲವೊಮ್ಮೆ, ಸಲ್ಮಾನ್ ಭಾಯಿಯೊಂದಿಗೆ ನಾವು ತುಂಬಾ ಆರಾಮದಾಯಕವಾಗುತ್ತೇವೆ ಏಕೆಂದರೆ ಅವರು ಸುಮಾರು 1 ಗಂಟೆಗೆ ಬರುತ್ತಾರೆ. ಊಟ ಮಾಡುತ್ತಾರೆ ಆದರೆ ಅವರು ದಿನದ ಕೊನೆಯವರೆಗೂ ಇರುತ್ತಾರೆ ಎಂದು ನಿರ್ಮಾಪಕ ಅನೀಸ್ ಬಾಜ್ಮೀ ಸಂದರ್ಶನವೊಂದರಲ್ಲಿ ಈ ಹಿಂದೆ ಹೇಳಿದ್ದರು.

ಅಕ್ಷಯ್​ ಕುಮಾರ್​ ನಟನೆಯ ಸ್ಕೈಫೋರ್ಸ್ ಸಿನಿಮಾವು 2025 ಜನವರಿ 24ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ವೀರ್ ಪಹಾಡಿಯಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೆ ಅಕ್ಷಯ್​ ಕುಮಾರ್​​ ಕಣ್ಣಪ್ಪ, ಭೂತ್ ಬಾಂಗ್ಲಾ ಮತ್ತು ಜಾಲಿ ಎಲ್ಎಲ್ಬಿ ಈ 3 ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಣ್ಣಪ್ಪ ಏಪ್ರಿಲ್ 25ರಂದು ಥಿಯೇಟರ್‌ಗೆ ಬರುತ್ತಿದೆ. ಇದು ಅಕ್ಷಯ್​​ ಕುಮಾರ್​ ಅವರ ತೆಲುಗಿನ ಚೊಚ್ಚಲ ಚಿತ್ರವಾಗಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net