ಕೊಚ್ಚಿ: ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸುತ್ತಿದ್ದ ನಟ ನಿಜ ಜೀವನದಲ್ಲೂ ಅದೇ ದಾರಿಯನ್ನು ಹಿಡಿದಿದ್ದಾರೆ. ಸಿನಿಮಾಗಳಿಗಿಂತ ಹೆಚ್ಚು ವಿವಾದದ ಮೂಲಕವೇ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ತಮಿಳಿನಲ್ಲಿ ವಿಶಾಲ್ ಅವರ ತಿಮಿರು, ಗೌತಮ್ ಮೆನನ್ ಅವರ ಧ್ರುವ ನಕ್ಷತ್ರಂ ಮತ್ತು ರಜನಿ ಅವರ ಜೈಲರ್ ಚಿತ್ರಗಳಲ್ಲಿ ನಟಿಸಿ ಖಳನಾಯಕನ ಪಾತ್ರಕ್ಕೆ ಇತನೇ ಸೂಕ್ತ ಎಂಬಂತೆ ಗುರುತಿಸಿಕೊಂಡಿರುವ ನಟ ವಿನಾಯಕನ್(Actor Vinayakan) ಬಗ್ಗೆ ಇಲ್ಲಿ ಹೇಳುತ್ತಿದ್ದೇವೆ.
ಇದನ್ನು ಓದಿ: ಆಸ್ಪತ್ರೆಯಿಂದ ಸೈಫ್ ಅಲಿ ಖಾನ್ ಡಿಶ್ಚಾರ್ಜ್; 5 ದಿನಗಳ ಬಳಿಕ ಮನೆಗೆ ಮರಳಿದ Saif
ಪ್ರತಿಯೊಂದು ಪಾತ್ರವನ್ನೂ ತಮ್ಮ ಅಭಿನಯದಿಂದ ವಿಶಿಷ್ಟವಾಗಿಸುವ ವಿನಾಯಕ್, ಸಿನಿಮಾದ ಹೊರತಾಗಿ ಮದ್ಯಪಾನ ಮಾಡುವ ಅಭ್ಯಾಸವಿರುವ, ಸಾರ್ವಜನಿಕ ಸ್ಥಳಗಳಲ್ಲಿ ಅನುಚಿತವಾಗಿ ವರ್ತಿಸುವ ವ್ಯಕ್ತಿಯಾಗಿ ಜನಮಾನಸದಲ್ಲಿ ಅಚ್ಚೊತ್ತಿದ್ದಾರೆ. ಸದ್ಯ ನಟ ವಿನಾಯಕ್ ಅವರು ವಾಸವಿರುವ ಅಪಾರ್ಟ್‌ಮೆಂಟ್‌ನ ಬಾಲ್ಕನಿಯಲ್ಲಿ ಅರೆಬರೆಯಾಗಿ ನಿಂತು ಅಶ್ಲೀಲವಾಗಿ ಕೂಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ದೃಶ್ಯವನ್ನು ನೆರೆಹೊರೆಯವರು ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
#Vinayakan 🥃🔞🙉
Actor or Drunker 😡
He should be banned from acting.— Tharani ᖇᵗк (@iam_Tharani) January 20, 2025
ನಟ ವಿನಾಯಕನ್ ಅವರ ಈ ಕ್ರಮವನ್ನು ಹಲವರು ಖಂಡಿಸುತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾರೂ ದೂರು ನೀಡಿಲ್ಲ, ದೂರು ನೀಡಿದರೆ ನಟ ವಿನಾಯಕ್ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಕೊಚ್ಚಿ ಪೊಲೀಸರು ತಿಳಿಸಿದ್ದಾರೆ.
ವಿಡಿಯೋ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನಟ ವಿನಾಯಕನ್ ಕ್ಷಮೆಯಾಚಿಸಿದ್ದಾರೆ. ನಟನಾಗಿ ಮತ್ತು ವ್ಯಕ್ತಿಯಾಗಿ ನನಗೆ ಅನೇಕ ವಿಷಯಗಳನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ನನ್ನ ಪರವಾಗಿ ಬಂದಿರುವ ಎಲ್ಲಾ ನಕಾರಾತ್ಮಕತೆಗೆ ನಾನು ಕ್ಷಮೆಯಾಚಿಸುತ್ತೇನೆ. ಚರ್ಚೆಗಳು ಮುಂದುವರಿಯಲಿ ಎಂದು ಪೋಸ್ಟ್ ಮಾಡಿದ್ದಾರೆ. ಆತನ ಅನುಚಿತ ವರ್ತನೆಯ ಬಗ್ಗೆ ಏನನ್ನೂ ಹೇಳದೆ ಮತ್ತು ಸಾಮಾನ್ಯವಾಗಿ ತನ್ನನ್ನು ತಾನು ಸಮರ್ಥಿಸಿಕೊಳ್ಳುವ ಮೂಲಕ ಈ ಪೋಸ್ಟ್ ಅನ್ನು ಕೊನೆಗೊಳಿಸಿದ್ದಕ್ಕಾಗಿ ಬಹಳಷ್ಟು ಜನರು ಟೀಕಿಸುತ್ತಿದ್ದಾರೆ.
ನಟ ವಿನಾಯಕನ್ ವಿವಾದದ ಮಧ್ಯೆ ಸಿಕ್ಕಿದ್ದು ಇದೇ ಮೊದಲಲ್ಲ, ಆಗಾಗ ವಿವಾದಗಳಲ್ಲಿ ಸಿಲುಕುತ್ತಿರುತ್ತಾರೆ. ಕೆಲವು ವರ್ಷಗಳ ಹಿಂದೆ ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿಯನ್ನು ಮಾನಹಾನಿ ಮಾಡಿದ ಆರೋಪದ ಮೇಲೆ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಕೆಲ ತಿಂಗಳ ಹಿಂದೆ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಏರ್‌ಲೈನ್ಸ್ ಸಿಬ್ಬಂದಿ ಜತೆ ವಾಗ್ವಾದಕ್ಕಿಳಿದಿದ್ದರು. ನಂತರ ಪೊಲೀಸರು ಆತನನ್ನು ಬಂಧಿಸಿದ್ದರು.(ಎಜೆನ್ಸೀಸ್)