

ಮುಂಬೈ: 90 ರ ದಶಕದಲ್ಲಿ, ರವೀನಾ ಟಂಡನ್ ಮತ್ತು ಅಕ್ಷಯ್ ಕುಮಾರ್ ಜೋಡಿಯು ಬಾಲಿವುಡ್‌ನಲ್ಲಿ ಪ್ರೇಕ್ಷಕರಿಗೆ ತುಂಬಾ ಇಷ್ಟವಾಯಿತು. ಬಾಲಿವುಡ್ ಕಾರಿಡಾರ್‌ಗಳಲ್ಲಿ ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್ ಅವರ ಪ್ರೇಮಕಥೆಗಳು ಇದ್ದ ಕಾಲವೊಂದಿತ್ತು. ಇಬ್ಬರೂ ರಿಲೇಶನ್ಶಿಪ್ನಲ್ಲಿದ್ದ ನಂತರ ಮದುವೆಯಾಗಲು ನಿರ್ಧರಿಸಿದರು. ಅಕ್ಷಯ್ ಮತ್ತು ರವೀನಾ ನಿಶ್ಚಿತಾರ್ಥ ಮಾಡಿಕೊಂಡರೂ ಇದ್ದಕ್ಕಿದ್ದಂತೆ ಬೇರಾದರು.
ಆದರೆ ಅಕ್ಷಯ್ ಮತ್ತು ರವೀನಾ ಇನ್ನೂ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಅನೇಕ ಸಂದರ್ಭಗಳಲ್ಲಿ ಒಬ್ಬರನ್ನೊಬ್ಬರು ಹೊಗಳಿದ್ದಾರೆ. 20 ವರ್ಷಗಳ ನಂತರ ವೆಲ್‌ಕಮ್ ಫ್ರಾಂಚೈಸ್‌ನ ಮೂರನೇ ಕಂತಿನಲ್ಲಿ ಇಬ್ಬರೂ ತಾರೆಗಳು ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಗುಡ್ ನ್ಯೂಸ್ ಇದೀಗ ಅವರ ಅಭಿಮಾನಿಗಳಿಗೆ ಬಂದಿದೆ.
ವರದಿಯ ಪ್ರಕಾರ, ರವೀನಾ ಶೀಘ್ರದಲ್ಲೇ ಅಕ್ಷಯ್ ಕುಮಾರ್ ಅವರ 'ವೆಲ್‌ಕಂ 3' ಚಿತ್ರಕ್ಕೆ ನಟಿಯಾಗಿ ಸೇರಿಕೊಳ್ಳಲಿದ್ದಾರೆ. 19 ವರ್ಷಗಳ ನಂತರ ಅವರ ಆನ್-ಸ್ಕ್ರೀನ್ ಪುನರ್ಮಿಲನವಾಗಿದೆ. ಇಬ್ಬರು ತಾರೆಯರು ಕೊನೆಯದಾಗಿ 2004 ರಲ್ಲಿ ಪರದೆಯನ್ನು ಹಂಚಿಕೊಂಡಿದ್ದರು.
ಅಕ್ಷಯ್ ಅವರನ್ನು ಹೊಗಳಿದ್ದ ರವೀನಾ
ರವೀನಾ ಟಂಡನ್ ಮತ್ತು ಅಕ್ಷಯ್ ಕುಮಾರ್ ನಡುವಿನ ಸಂಬಂಧ ಈಗ ಉತ್ತಮವಾಗಿದೆ. ಒಮ್ಮೆ ಸಂದರ್ಶನದ ಸಮಯದಲ್ಲಿ, ರವೀನಾ ಟಂಡನ್ ಅಕ್ಷಯ್ ಕುಮಾರ್ ಅವರನ್ನು ಬಾಲಿವುಡ್‌ನ ಪ್ರಬಲ ಸ್ತಂಭಗಳಲ್ಲಿ ಒಬ್ಬರು ಎಂದು ಕರೆದರು. ಸಹಜವಾಗಿ, ವೈಯಕ್ತಿಕ ಜೀವನದಲ್ಲಿ ಅವರ ಭಿನ್ನಾಭಿಪ್ರಾಯಗಳು ಕೊನೆಗೊಂಡಿವೆ. ಆದರೆ ವೃತ್ತಿಪರ ಜೀವನದಲ್ಲಿ, ಅವರು ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಒಟ್ಟಿಗೆ ಪರದೆಯನ್ನು ಹಂಚಿಕೊಳ್ಳುವುದನ್ನು ಅಭಿಮಾನಿಗಳು ನೋಡಿಲ್ಲ.
ಅಂದಹಾಗೆ ANIಗೆ ನೀಡಿರುವ ಸಂದಶರ್ನದಲ್ಲಿ ಸ್ಮಿತಾ ಪ್ರಕಾಶ್ ಅವರೊಂದಿಗೆ ಮನಬಿಚ್ಚಿ ಮಾತನಾಡಿರುವ ಅಕ್ಷಯ್, ಇತ್ತೀಚಿನ ಚಲನಚಿತ್ರ ಮಿಷನ್ ರಾಣಿಗಂಜ್ ಬಗ್ಗೆ ಮಾತನಾಡುತ್ತಾ, ಹೊಸ ಜಾಹೀರಾತಿನ ಇತ್ತೀಚಿನ ವಿವಾದದ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಅವರ ಕೆನಡಾದ ಪೌರತ್ವದ ಸುತ್ತಲಿನ ವಿವಾದದ ಬಗ್ಗೆಯೂ ತಿಳಿಸಿದ್ದಾರೆ.
ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್ ಅವರನ್ನು 20 ವರ್ಷಗಳ ನಂತರ ತೆರೆಯ ಮೇಲೆ ಮತ್ತೆ ಒಟ್ಟಿಗೆ ನೋಡಬಹುದಾಗಿದ್ದು, ಆ ವಿಚಾರದ ಬಗ್ಗೆಯೂ ಅಕ್ಷಯ್ ಸಂದರ್ಶನದಲ್ಲಿ ಮಾತನಾಡಿದ್ದಾರೆ. ನಿರೂಪಕಿ ನಾನು ರವೀನಾ ಅವರನ್ನೂ ಕೂಡ ಸಂದರ್ಶನ ಮಾಡಿದ್ದೇನೆ. ನಿಮ್ಮ ಜೋಡಿ ತೆರೆಯ ಮೇಲೆ ಕಾಣಿಸಿಕೊಂಡರೆ ಬಹಳ ಚೆನ್ನಾಗಿರುತ್ತದೆ ಎಂದಾಗ... ಅಕ್ಷಯ್ ಹೌದು, ನಾವಿಬ್ಬರೂ ತೆರೆಯ ಮೇಲೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದೇವೆ ಎಂದರು. ನಿರೂಪಕಿ ನೀವು ಮತ್ತೆ ಮಸ್ತ್ ಮಸ್ತ್ ಗೀತೆಯೊಂದಿಗೆ ಕಾಣಿಸಿಕೊಂಡರೆ ನಾನು ಟಿಕೆಟ್ ಅನ್ನು ಬ್ಲಾಕ್ನಲ್ಲಿ ತೆಗೆದುಕೊಂಡು ನೋಡುತ್ತೇನೆ ಎಂದು ಉತ್ತರಿಸಿದ್ದಾರೆ. ಅದಕ್ಕೆ ಅಕ್ಷಯ್ ಕುಮಾರ್ ನಾಚಿ ನೀರಾಗಿದ್ದಾರೆ. ಈ ಸಂದರ್ಶನ ಇಂದು ಸಂಜೆ 5 ಗಂಟೆಗೆ ANIನಲ್ಲಿ ಪ್ರಸಾರವಾಗಲಿದೆ.
ಅಕ್ಷಯ್ ಕುಮಾರ್ ಇತ್ತೀಚೆಗೆ ಬಿಡುಗಡೆಯಾದ ಮಿಷನ್ ರಾಣಿಗಂಜ್ ಚಿತ್ರಕ್ಕಾಗಿ ಸುದ್ದಿಯಲ್ಲಿದ್ದಾರೆ. ಈ ನಡುವೆ ನಟ ಟ್ರೋಲ್‌ಗೆ ಗುರಿಯಾಗಿದ್ದಾರೆ. ಅಜಯ್ ದೇವಗನ್ ಬಹಳ ಸಮಯದಿಂದ ಜನಪ್ರಿಯ ಪಾನ್ ಮಸಾಲಾ ಬ್ರಾಂಡ್‌ಗಾಗಿ ಜಾಹೀರಾತು ನೀಡುತ್ತಿದ್ದಾರೆ. ಕೆಲ ಸಮಯದ ಹಿಂದೆ ಶಾರುಖ್ ಖಾನ್ ಕೂಡ ಸೇರಿಕೊಂಡಿದ್ದರು. ಇದಾದ ನಂತರ ಈ ಪಾನ್ ಮಸಾಲಾ ಜಾಹೀರಾತಿನಲ್ಲಿ ಅಕ್ಷಯ್ ಕುಮಾರ್ ಕೂಡ ಇಬ್ಬರ ಜೊತೆ ಸೇರಿಕೊಂಡರು. ಅವರ ಜೊತೆಗೆ ಬಿಗ್ ಬಾಸ್ 16 ರ ಜನಪ್ರಿಯ ಸ್ಪರ್ಧಿ ಸೌಂದರ್ಯ ಶರ್ಮಾ ಕೂಡ ಹೊಸ ಜಾಹೀರಾತಿನಲ್ಲಿ ಸೇರಿದ್ದಾರೆ. ಪಾನ್ ಮಸಾಲಾದ ಈ ಹೊಸ ಜಾಹೀರಾತನ್ನು ಶಾರುಖ್ ಖಾನ್ ಅವರ ಫ್ಯಾನ್ಸ್ ಪೇಜ್ ಹಂಚಿಕೊಂಡಿದೆ.
ಅಕ್ಷಯ್ ತನ್ನ ಮಾತನ್ನು ಉಳಿಸಿಕೊಳ್ಳಲಿಲ್ಲ
ವಾಸ್ತವವಾಗಿ, ಕಳೆದ ವರ್ಷ ಅಕ್ಷಯ್ ಕುಮಾರ್ ಪಾನ್ ಮಸಾಲಾ ಪ್ರಚಾರಕ್ಕಾಗಿ ಕೆಟ್ಟದಾಗಿ ಟ್ರೋಲ್ ಆಗಿದ್ದರು. ಆ ನಂತರ ಅಕ್ಷಯ್ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದರು. ಇನ್ನು ಮುಂದೆ ಎಂದಿಗೂ ಪಾನ್ ಮಸಾಲಾ ಜಾಹೀರಾತು ಮಾಡುವುದಿಲ್ಲ ಎಂದು ಹೇಳಿದರು. ಆದರೆ, ಅಕ್ಷಯ್ ಕುಮಾರ್ ಭರವಸೆ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ಕ್ಷಮೆ ಕೇಳಿದ ಅಕ್ಷಯ್
ವಿವಾದ ಕುರಿತು ಅಕ್ಷಯ್ ಕುಮಾರ್ ಪೋಸ್ಟ್ ಶೇರ್ ಮಾಡುವಾಗ 'ನನ್ನ ಎಲ್ಲಾ ಅಭಿಮಾನಿಗಳು ಮತ್ತು ಹಿತೈಷಿಗಳಲ್ಲಿ ನಾನು ಕ್ಷಮೆಯಾಚಿಸಲು ಬಯಸುತ್ತೇನೆ. ನಾನು ತಂಬಾಕನ್ನು ಬೆಂಬಲಿಸದಿದ್ದರೂ ಕಳೆದ ಕೆಲವು ದಿನಗಳಲ್ಲಿ ನಿಮ್ಮ ಪ್ರತಿಕ್ರಿಯೆಯು ನನ್ನನ್ನು ಬಹಳವಾಗಿ ಪ್ರಭಾವಿಸಿದೆ. ಅಲ್ಲದೆ, ಜಾಹೀರಾತಿಗೆ ವಿಧಿಸುವ ಜಾಹೀರಾತು ಶುಲ್ಕವನ್ನು ದೇಣಿಗೆ ನೀಡಲು ನಿರ್ಧರಿಸಿದ್ದೇನೆ' ಎಂದು ತಿಳಿಸಿದ್ದರು.
ಅಕ್ಷಯ್ ಬ್ರ್ಯಾಂಡ್‌ನೊಂದಿಗೆ ಕೆಲವು ಒಪ್ಪಂದವನ್ನು ಹೊಂದಿದ್ದಾರೆ ಮತ್ತು ಜಾಹೀರಾತು ನಿರ್ದಿಷ್ಟ ಸಮಯದವರೆಗೆ ಪ್ರಸಾರವಾಗಲಿದೆ ಎಂದು ಅವರು ಹೇಳಿದ್ದರು. ಇನ್ನು ಮುಂದೆ ತನ್ನ ನಿರ್ಧಾರಗಳನ್ನು ಚಿಂತನಶೀಲವಾಗಿ ತೆಗೆದುಕೊಳ್ಳುತ್ತೇನೆ ಎಂದು ನಟ ಹೇಳಿದ್ದಾರೆ.
ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ 150 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ನಿರ್ಮಾಪಕರಾಗಿಯೂ ಕಾರ್ಯನಿರ್ವಹಿಸಿರುವ ಅವರು ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ. ಕಲಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ 2009 ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ಸಹ ನೀಡಲಾಗಿದೆ. ಆಕ್ಷನ್-ಪ್ಯಾಕ್ಡ್ ಪಾತ್ರಗಳಲ್ಲಿ ನಟಿಸಿ ಬಾಲಿವುಡ್‌ನ 'ಖಿಲಾಡಿ ಕುಮಾರ್' ಎಂದೂ ಖ್ಯಾತಿಯಾಗಿರುವ ಅಕ್ಷಯ್ ಆಗಾಗ್ಗೆ ಡ್ಯೂಪ್ ಬಳಸದೆ ತಮ್ಮ ಸಾಹಸಗಳನ್ನು ಪ್ರದರ್ಶಿಸುತ್ತಾರೆ. ಮಾರ್ಷಲ್ ಆರ್ಟಿಸ್ಟ್ ಆಗಿರುವ ಅಕ್ಷಯ್ ಬಾಲಿವುಡ್‌ನಲ್ಲಿ ಸ್ಟಂಟ್‌ಪರ್ಸನ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.